ಭಾರತದ ವಿರುದ್ಧ ಜಿಹಾದ್!: ನಡುರಸ್ತೆಯಲ್ಲಿ ಮೌಲ್ವಿ ಘೋಷಣೆ

ಇಸ್ಲಾಮಾಬಾದ್: ಪಾಕಿಸ್ತಾನದ ಮೌಲ್ವಿಯೊಬ್ಬ ಭಾರತದ ವಿರುದ್ಧ ಬಹಿರಂಗವಾಗಿ ಘೋಷಣೆ ಮಾಡಿದ್ದಾನೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ತೆಗೆದುಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಅದೂ ಕೂಡಾ ಪಾಕ್ ಆಕ್ರಮಿತ ಕಾಶ್ಮೀರದ ನೆಲದಲ್ಲಿ ಜಿಹಾದ್ ಘೋಷಣೆ ಹೊರಬಿದ್ದಿದೆ. ಪಿಒಕೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮೌಲ್ವಿ, ಮುಸ್ಲಿಮರು ದುರ್ಬಲರಾದಾಗ ಜಿಹಾದ್ ಅನಿವಾರ್ಯ. ಕಾಶ್ಮೀರದ ನಮ್ಮ ಬಾಂಧವರು ಸಂಕಷ್ಟದಲ್ಲಿದ್ದಾರೆ. ನಿಮಗೆ ಹೋರಾಡಲು ಧೈರ್ಯವಿಲ್ಲವೇ? ಸೋಲುತ್ತಲೇ ಬದುಕಲು ಇಷ್ಟಪಡುತ್ತೀರಾ ಎಂದು ಜನರನ್ನು ಮೌಲ್ವಿ ಪ್ರಚೋದಿಸಿದ್ದಾನೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾರನ್ನೂ ತರಾಟೆಗೆ ತೆಗೆದುಕೊಂಡಿರುವ ಮೌಲ್ವಿ, ಪಾಕ್ ಸೇನೆ ತನ್ನ ‘ಜಿಹಾದ್’ ಕರ್ತವ್ಯವನ್ನು ಪಾಲಿಸುತ್ತಿಲ್ಲ ಎಂದಿದ್ದಾನೆ. ಸಭೆಯಲ್ಲಿ ಭಾಗವಹಿಸಿದ್ದ ಜನರು ‘ಭಾರತದ ವಿರುದ್ಧ ಜಿಹಾದ್ ಸಾರುವುದೇ ಪರಿಹಾರ’ ಎಂದು ಘೋಷಣೆಯನ್ನೂ ಕೂಗಿದ್ದಾರೆ. ಪಾಕಿಸ್ತಾನದಲ್ಲಿ ಕೇಳಿ ಬರುತ್ತಿರುವ ಈ ಯುದ್ಧೋನ್ಮಾದ ಕೇವಲ ಮೌಲ್ವಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಪಾಕಿಸ್ತಾನದ ಗುಡ್ಡಗಾಡು ಪ್ರಾಂತ್ಯ ಖೈಬರ್ ಪಖ್ತುಂಖ್ವ ಮುಖ್ಯಮಂತ್ರಿ ಮಹಮೂದ್ ಖಾನ್ ಕೂಡಾ ಜಿಹಾದ್ ಮಂತ್ರವನ್ನು ಬಡಬಡಿಸಿದ್ದ. ಒಂದು ವೇಳೆ ಕಾಶ್ಮೀರಕ್ಕಾಗಿ ಜಿಹಾದ್ ಘೋಷಣೆಯಾದ್ರೆ ನಾನು ಮುಂಭಾಗದಲ್ಲಿ ನಿಂತು ಹೋರಾಡ್ತೀನಿ ಎಂದು ಹೇಳಿದ್ದ. ಜಮ್ಮು-ಕಾಶ್ಮೀರ ವಿಚಾರದಲ್ಲಿ ಮೋದಿ ಸರ್ಕಾರ ಕೈಗೊಂಡ ದಿಟ್ಟ ನಿಲುವಿನಿಂದ ಆಘಾತಕ್ಕೊಳಗಾಗಿರುವ ಪಾಕಿಸ್ತಾನ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಂಬಲವಿಲ್ಲದೆ ಏಕಾಂಗಿಯಾಗಿದೆ. ಅಂತಾರಾಷ್ಟ್ರೀಯ ಸಮುದಾಯ ಕೂಡಾ ಕಾಶ್ಮೀರ ಭಾರತದ ಆಂತರಿಕ ವಿಚಾರ ಎಂದು ಗಟ್ಟಿದನಿಯಲ್ಲಿ ಹೇಳಿಬಿಟ್ಟಿದೆ. ಇನ್ನು ತನ್ನ ನೆಲದಲ್ಲಿರುವ ಉಗ್ರರನ್ನು ಸೆದೆಬಡಿಯುವಂತೆ ಪಾಕಿಸ್ತಾನಕ್ಕೆ ಪದೇ ಪದೇ ತಾಕೀತು ಮಾಡುತ್ತಲೇ ಇದೆ. ನಿನ್ನೆಯಷ್ಟೇ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ನೆರೆಹೊರೆಯ ಎಲ್ಲ ದೇಶಗಳಂತೆಯೇ ನೀವೂ ವರ್ತಿಸಿ ಎಂದು ಪಾಕಿಸ್ತಾನಕ್ಕೆ ನೀತಿಪಾಠವನ್ನೂ ಹೇಳಿದ್ದರು. ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡುವಂತೆ ಆಗ್ರಹಿಸಿದ್ದರು.


from India & World News in Kannada | VK Polls https://ift.tt/2L6HpB7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...