ಹೊಸದಿಲ್ಲಿ: ಭಾರತದಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆಗಳಿಲ್ಲ. ಆದರೆ ದುರದೃಷ್ಟವಶಾತ್ ಚಿಕ್ಕದಿನಿಂದಲೇ ಬೇಕಾದಷ್ಟು ಪ್ರೋತ್ಸಾಹ ದೊರಕುತ್ತಿಲ್ಲ. ಇನ್ನು ಮೂಲ ಸೌಕರ್ಯಗಳ ಅಭಾವದಿಂದಾಗಿ ಪ್ರತಿಭೆಗಳು ಮೂಲೆ ಗುಂಪಾಗುತ್ತಿದ್ದಾರೆ. ಈ ನಡುವೆ ಭಾರತೀಯ ಗ್ರಾಮೀಣ ಪ್ರತಿಭೆಯನ್ನು ಗುರುತಿಸಿರುವ ರೊಮಾನಿಯಾದ ಮಾಜಿ ಐದು ಬಾರಿದ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಗಮನ ಸೆಳೆದಿದ್ದಾರೆ. ಭಾರತೀಯ ಬಾಲೆಯ ಅಭೂತಪೂರ್ವ ಜಿಮ್ನಾಸ್ಟಿಕ್ಸ್ ಕಲೆಗೆ ಮಾರು ಹೋಗಿರುವ ನಾದಿಯಾ, ತಮ್ಮ ಅಧಿಕೃತ ಟ್ವಿಟರ್ ಪುಟದಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ತಕ್ಷಣವೇ ಇದಕ್ಕೆ ಭಾರತದ ಕ್ರೀಡಾ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯೆ ನೀಡಿದ್ದಾರೆ. 1979ರ ಮಾಂಟ್ರೆಯಲ್ ಒಲಿಂಪಿಕ್ಸ್ನಲ್ಲಿ ಫರ್ಫೆಕ್ಟ್ 10 ಅಂಕಗಳನ್ನು ಪಡೆದ ನಾದಿಯಾ ಕೊಮನೆಸಿ ಟ್ವೀಟ್ ಮಾಡಿರುವುದು ಅತ್ಯಂತ ಖುಷಿಯನ್ನು ತಂದಿದೆ ಎಂದಿದ್ದಾರೆ. ಹಾಗೆಯೇ ಈ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಲು ಪಣತೊಟ್ಟಿದ್ದಾರೆ. ಅಷ್ಟಕ್ಕೂ ಈ ಬಾಲೆಯ ಬಗ್ಗೆ ನಿಖರ ಮಾಹಿತಿಗಳು ಇನ್ನಷ್ಟೇ ಸಿಗಬೇಕಿದೆ. ಸೂಕ್ತ ಬೆಂಬಲ ದೊರಕಿದರೆ ದೇಶಕ್ಕಾಗಿ ಉಜ್ವಲ ಭವಿಷ್ಯ ರೂಪಿಸಲಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32i8mYe