ಶಿವನ ಜಾತಿ ಯಾವುದೆಂದು ಹೇಳುತ್ತಿದ್ದಾರೆ ಬಿಹಾರದ ಈ ಸಚಿವರು

ಪಟನಾ: ಹನುಮನ ಜಾತಿ ಮಾತಾಯಿತು, ಮತ್ತೀಗ ಶಿವನ ಜಾತಿಯ ಪ್ರಸ್ತಾಪವಾಗಿದೆ. ಹೌದು ಭಗವಾನ್ ಶಂಕರ '' ಜಾತಿಗೆ ಸೇರಿದವನು ಎಂದು ಹೇಳುವುದರ ಮೂಲಕ ಬಿಹಾರದ ಸಚಿವ ವಿವಾದವನ್ನು ಸೃಷ್ಟಿಸಿದ್ದಾರೆ. ಮಂಗಳವಾರ ನೂತನ ರಾಜ್ಯಪಾಲ ಫ‌ಗು ಚೌಹಾಣ್‌ರನ್ನು ಸ್ವಾಗತಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, 'ಭಿಂಡ್' ಜಾತಿಗೆ ಸೇರಿದವನು. ಶಿವ ಪುರಾಣದಲ್ಲಿ ಸಹ ಇದರ ಉಲ್ಲೇಖವಿದೆ. ಇತಿಹಾಸಕಾರ ವಿದ್ಯಾದರ ಮಹಾಜನ್ ಕೂಡ ಇದನ್ನು ಹೇಳಿದ್ದಾರೆ ಎಂದು ಹೇಳಿದ್ದಾರೆ. ಶ್ರೀಕೃಷ್ಣ ಗೊಲ್ಲ, ಶ್ರೀರಾಮ ಕ್ಷತ್ರಿಯ ಜಾತಿಗೆ ಸೇರುತ್ತಾರೆಂಬುದಾದರೆ, ಶಿವನಿಗೇಕೆ ಜಾತಿ ಇರಬಾರದು, ಅವನ್ಯಾಕೆ ಭಿಂಡ್ ಜಾತಿಗೆ ಸೇರಿರಬಾರದು ಎಂದವರು ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತ 'ಹನುಮಂತ ಒಬ್ಬ ಅರಣ್ಯವಾಸಿ. ಎಲ್ಲ ಸಮುದಾಯಗಳನ್ನು ಉತ್ತರದಿಂದ ದಕ್ಷಿಣಕ್ಕೆ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕಿಸಲು ಕೆಲಸ ಮಾಡಿದ ಒಬ್ಬ ದಲಿತ' ಎಂದಿದ್ದರು. ಹನುಮಾನ್ ದಲಿತನೆಂದು ಹೇಳಿರುವ ಯೋಗಿ ಆದಿತ್ಯನಾಥ್ ಅವರಿಗೆ ರಾಜಸ್ಥಾನದ ಸರ್ವ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸುರೇಶ್ ಮಿಶ್ರಾ ನೋಟಿಸ್ ಜಾರಿಗೊಳಿಸಿ, 3 ದಿನಗಳ ಒಳಗೆ ಕ್ಷಮೆ ಕೋರುವಂತೆ ಆಗ್ರಹಿಸಿದ್ದರು. ಯೋಗಿ ಆದಿತ್ಯನಾಥರು ಹೇಳಿದ ಬೆನ್ನಲ್ಲೇ, ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗ (NCST) ಅಧ್ಯಕ್ಷ ನಂದಕುಮಾರ್ ಸಾಯಿ ಒಂದು ಹೆಜ್ಜೆ ಮೇಲೆ ಹೋಗಿ ಹನುಮಾನ್ ಬುಡಕಟ್ಟು ಸಮುದಾಯಕ್ಕೆ ಸೇರಿದವನು, ಅದಕ್ಕೆ ಪೂರಕವಾದ ಸಾಕ್ಷಿಗಳಿವೆ ಎಂದಿದ್ದರು.


from India & World News in Kannada | VK Polls https://ift.tt/2L0qAYw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...