ಪ್ರಿ ವೆಡ್ಡಿಂಗ್‌ ವಿಡಿಯೋದಲ್ಲಿ ಪತ್ನಿಯಿಂದ ಲಂಚ, ಇಕ್ಕಟ್ಟಿನಲ್ಲಿ ಪೊಲೀಸ್‌ ಅಧಿಕಾರಿ!

ಜೈಪುರ: ಏನೋ ಮಾಡಲು ಹೋಗಿ ಇನ್ನೇನೋ ಆಗುವುದು ಎನ್ನುವುದಕ್ಕೆ ಈ ಘಟನೆ ತಾಜಾ ಉದಾಹರಣೆಯಂತಿದೆ. ರಾಜಸ್ಥಾನದ ಪೊಲೀಸ್‌ ಅಧಿಕಾರಿಯೊಬ್ಬರು ವಿಡಿಯೋ ಶೂಟ್‌ನಲ್ಲಿ ತಮ್ಮ ಭಾವಿ ಪತ್ನಿಯಿಂದ ಸ್ವೀಕರಿಸಿ ಇದೀಗ ಹಿರಿಯ ಪೊಲೀಸ್‌ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆಗಿದ್ದೇನು? ಧನಪತ್‌ ರಾಜಸ್ಥಾನ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಉಧಯಪುರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ಹಿನ್ನೆಲೆಯನ್ನು ಇಟ್ಟುಕೊಂಡು ಅವರು ತಮ್ಮ ಪ್ರಿ ವೆಡ್ಡಿಂಗ್‌ ವಿಡಿಯೋ ಶೂಟ್‌ ಚಿತ್ರಕಥೆ ಹೆಣೆದಿದ್ದರು. ಇದೀಗ ಅವರ ಪತ್ನಿಯಾಗಿರುವ ಕಿರಣ್‌ ಸ್ಕೂಟಿಯೊಂದನ್ನು ಹತ್ತಿ ರಸ್ತೆಯಲ್ಲಿ ಬರುತ್ತಿರುತ್ತಾರೆ. ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿರುವ ಅವರ ಪತಿ ಧನಪತ್‌ ಹೆಲ್ಮೆಟ್‌ ಹಾಕದೇ ಇರುವುದನ್ನು ಕಂಡು ಗಾಡಿ ನಿಲ್ಲಿಸುತ್ತಾರೆ. ಹೆಲ್ಮೆಟ್‌ ಇಲ್ಲದೆ ಗಾಡಿ ಓಡಿಸಿದ್ದಕ್ಕಾಗಿ ಕಿರಣ್‌ಗೆ ಧನಪತ್‌ ದಂಡ ವಿಧಿಸುತ್ತಾರೆ. ಆದರೆ ದಂಡ ಕೊಡದೆ ಕಿರಣ್‌ ನೇರವಾಗಿ ಪೊಲೀಸ್‌ (ಧನಪತ್‌) ಕಿಸೆಗೆ ನೋಟು ತುರುಕುತ್ತಾರೆ. ನೋಟು ಮತ್ತು ಮನದನ್ನೆಯ ವಾರೆ ನೋಟ ನೋಡುತ್ತಾ ಧನಪತ್‌ ಮೈಮರೆತಾಗ ಅವರ ಪರ್ಸ್‌ ಸಮೇತ ಕಿರಣ್‌ ಪರಾರಿಯಾಗುತ್ತಾರೆ. ಈ ಪರ್ಸ್‌ ಹುಡುಕುತ್ತಾ ಧನಪತ್‌ ಮತ್ತೆ ಕಿರಣ್‌ರನ್ನು ಭೇಟಿಯಾಗುತ್ತಾರೆ. ಹಾಗೆ ಭೇಟಿಯಾಗಿ ಇಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ ಎಂಬುದು ವಿಡಿಯೋದ ಸಂಕಿಪ್ತ ಕಥೆ. ಆದರೆ ಈ ವಿಡಿಯೋ ಎಡಿಟಿಂಗ್‌ ಮುಗಿದು ಯೂಟ್ಯೂಬ್‌ ಅಪ್ಲೋಡ್‌ ಆಗುತ್ತಿದ್ದಂತೆ ಅಧಿಕಾರಿಗಳು ಕಣ್ಣು ಕೆಂಪಗಾಗಿದೆ. ‘ಧನಪತ್‌ ತಮ್ಮ ಸಮವಸ್ತ್ರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂಬ ಆರೋಪ ಕೇಳಿ ಬಂದಿದೆ. ಜೊತೆಗೆ ವಿಡಿಯೋದಲ್ಲಿ ಪತ್ನಿಯಿಂದ ಲಂಚ ಸ್ವೀಕರಿಸುವ ದೃಶ್ಯವಿದ್ದು ಇದು ಪೊಲೀಸ್‌ ಇಲಾಖೆಯ ಗೌರವಕ್ಕೆ ಚ್ಯುತಿ ತರುತ್ತಿದೆ ಎಂದು ಚಿತ್ತೋರ್‌ಗರ್‌ನ ಪೊಲೀಸ್‌ ಅಧಿಕಾರಿಯೊಬ್ಬರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಮುಂದೆ ಇಂಥಹ ಘಟನೆಗಳಾಗದಂತೆ ತಡೆಯಲು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಐಜಿಪಿ ಡಾ. ಹವಾ ಸಿಂಗ್‌ ಘೋಮಾರಿಯಾ ಎಲ್ಲಾ ವಲಯಗಳ ಇನ್‌ಸ್ಪೆಕ್ಟರ್‌ಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. “ಪೊಲೀಸ್‌ ಸಮವಸ್ತ್ರವನ್ನು ದುರುಪಯೋಗಪಡಿಸಿಕೊಳ್ಳುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರಂತೆ. ಮಾತ್ರವಲ್ಲದೇ ಎಲ್ಲಾ ವಲಯದ ಅಧಿಕಾರಿಗಳು ಸಮವಸ್ತ್ರದ ಗೌರವವನ್ನು ಕಾಪಾಡಬೇಕು ಎಂದು ಅವರು ಸೂಚಿಸಿದ್ದಾರೆ. ಜೊತೆಗೆ ಪ್ರಿ ವೆಡ್ಡಿಂಗ್‌ ಫೊಟೋ ಶೂಟ್‌ಗೆ ಸಮವಸ್ತ್ರ ಬಳಸಬಾರದು ಎಂಬುದಾಗಿಯೂ ಅವರು ಆದೇಶಿಸಿದ್ದಾರೆ.


from India & World News in Kannada | VK Polls https://ift.tt/2UhyoIF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...