ವಿಶ್ವದ ನಂ.1ನತ್ತ ಚಿತ್ತ ಹರಿಸಿದ ಚಿನ್ನದ ಹುಡುಗಿ ಪಿ.ವಿ ಸಿಂಧೂ

ಹೈದರಾಬಾದ್‌: ಬ್ಯಾಡ್ಮಿಂಟನ್‌ ವರ್ಲ್ಡ್‌ ಫೆಡರೇಷನ್‌(ಬಿಡಬ್ಳ್ಯುಎಫ್‌) ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಏರಲು ಪಿ.ವಿ ಸಿಂಧುಗೆ ಸುವರ್ಣಾವಕಾಶವಾಗಿದೆ. ಪ್ರಸ್ತುತ 5ನೇ ಸ್ಥಾನದಲ್ಲಿದ್ದ ಪಿ.ವಿ ಸಿಂಧು ನೂತನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಬಡ್ತಿ ಹೊಂದುವ ಸಾಧ್ಯತೆ ಇದೆ. ಕಳೆದ ಎರಡು ವಿಶ್ವಚಾಂಪಿಯನ್‌ಶಿಪ್‌ನ ಪ್ರದರ್ಶನದ ಕುರಿತು ಸಿಂಧು ಅವರನ್ನು ಈ ಹಿಂದೆ ಟೀಕಿಸುತ್ತಿದ್ದವರು ಭಾನುವಾರದ ಬಳಿಕ ಬದಲಾಗಿದ್ದಾರೆ. ಅವರೀಗ '2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವಿರಲ್ಲವೇ' ಎಂದು ಕೇಳುತ್ತಿದ್ದಾರೆ. 2019ರ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯದಲ್ಲಿ ಜಪಾನ್‌ನ ಒಕುಹರಾ ಅವರನ್ನು ಮಣಿಸಿ ಚಿನ್ನ ಗೆದ್ದ ಪಿ.ವಿ ಸಿಂಧು 6,950 ಅಂಕಗಳನ್ನು ಗಳಿಸಲಿದ್ದಾರೆ. ಈ ಮೂಲಕ ಒಟ್ಟು 82,634 ಅಂಕಗಳು ಪಿ.ವಿ ಸಿಂಧು ಬತ್ತಳಿಕೆಗೆ ಸೇರ್ಪಡೆಗೊಳ್ಳಲಿವೆ. 93,930 ಅಂಕಗಳನ್ನು ಗಳಿಸಿರುವ ಯಮಗುಚಿ ಅಂಕ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. 91,845 ಅಂಕಗಳನ್ನು ಹೊಂದಿರುವ ತೈ ಜು ಯಿಂಗ್‌ 2ನೇ ಸ್ಥಾನದಲ್ಲಿದ್ದಾರೆ. 90,565 ಪಾಯಿಂಟ್‌ಗಳನ್ನು ಹೊಂದಿರುವ ಚೆನ್‌ ಯು ಪೈ ಮೂರನೇ ಸ್ಥಾನದಲ್ಲಿದ್ದಾರೆ. ಪಿ.ವಿ ಸಿಂಧು ಅಂಕಗಳು 88,836ಕ್ಕೆ ಏರಿಕೆಯಾದರೆ ನಾಲ್ಕನೇ ಸ್ಥಾನಕ್ಕೆ ಜಂಪ್‌ ಮಾಡಲಿದ್ದಾರೆ. 24 ವರ್ಷದ ಹೈದರಾಬಾದ್‌ ತಾರೆ ಪಿ.ವಿ ಸಿಂಧು ವಿಶ್ವ ಚಾಂಪಿಯನ್‌ ಸ್ಪರ್ಧೆ ಎದುರಿಸಿದಾಗ 75,684 ಅಂಕಗಳೊಂದಿಗೆ ನಂ.5ರಲ್ಲಿದ್ದರು. ಜಪಾನ್‌ನ ಒಕುಹರಾ ಅವರನ್ನು 21-7, 21-7 ನೇರ ಸೆಟ್‌ಗಳಿಂದ ಮಣಿಸಿದ್ದರಿಂದ 6950 ಅಂಕಗಳು ಸಿಂಧುಗೆ ಸಿಗಬಹುದು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2zmSojp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...