ಮುಂಬಯಿ: ಬಾಲಿವುಡ್ ಖ್ಯಾಟ ನಟ ಸುನಿಲ್ ಶೆಟ್ಟಿ ಮಗಳು ಹಾಗೂ ನಟಿ ಜತೆಗೆ ಭಾರತೀಯ ಕ್ರಿಕೆಟಿಗ ಡೇಟಿಂಗ್ ನಡೆಸುತ್ತಿರುವ ಸುದ್ದಿ ಕೆಲವು ಸಮಯದ ಹಿಂದಿನಿಂದಲೇ ಕೇಳಿಬರುತ್ತಿದೆ. ಇಬ್ಬರು ಅಧಿಕೃತವಾಗಿ ಯಾವುದನ್ನು ಬಿಚ್ಚಿಟ್ಟಿಲ್ಲ. ಆದರೆ ಸೆಲೆಬ್ರಿಟಿಗಳ ನಡುವಣ ಡೇಟಿಂಗ್ ಹೆಚ್ಚಿನ ಪ್ರಚಾರಕ್ಕೆ ಕಾರಣವಾಗಿದೆ. ತಾಜಾ ಬೆಳವಣಿಗೆಯಲ್ಲಿ ಇನ್ಸ್ಟಾಗ್ರಾಂನಲ್ಲಿ ಆತಿಯಾ ಶೆಟ್ಟಿ ಹಂಚಿಕೊಂಡಿರುವ ಸ್ಫೂರ್ತಿದಾಯಕ ಸಂದೇಶಕ್ಕೆ ವಿನ್ಯಾಸಗಾರ ವಿಕ್ರಮ್ ಫದ್ನಿಸ್ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ನೀವು ಹೆಚ್ಚು ಹೈಪರ್ ಹಾಗೂ ಉತ್ಸಾಹ ಭರಿತರಾಗಿರುವಂತೆ ಕಾಣಿಸುತ್ತಿದ್ದೀರಿ. ಹಾಗಿದ್ದರೆ ಕೆಎಲ್ಗೆ ಹೋಗೋಣವೇ?? ಕೌಲಾಲಂಪುರ?? ಈ ಕಾಮೆಂಟ್ಗೆ ಅಭಿಮಾನಿಗಳ ಪ್ರತಿಕ್ರಿಯೆ ಬಂದಿರುವುದೇ ತಡ ಮಗದೊಂದು ಕಾಮೆಂಟ್ ಮಾಡಿರುವ ಫದ್ನಿಸ್ ನಾನು ಅಂಪೈರ್ಗೆ ದೂರು ನೀಡಲಿದ್ದೇನೆ ಎಂದಿದ್ದಾರೆ. ಆದರೆ ಇವೆಲ್ಲವನ್ನು ಗಂಭೀರವಾಗಿ ಸ್ವೀಕರಿಸಿರುವ ಆತಿಯಾ ಶೆಟ್ಟಿ, ನಿಮ್ಮನ್ನು ಬ್ಲಾಕ್ ಮಾಡುವ ಸಮಯ ಬಂದಿದೆ ಎಂದು ತಿರುಗೇಟು ನೀಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZGnvRJ