ಗುವಾಹಟಿ: ಜನರ ಬಹು ನಿರೀಕ್ಷಿತ ರಾಷ್ಟ್ರೀಯ ನೋಂದಣಿ () ಪಟ್ಟಿ ಬಿಡುಗಡೆಯಾಗಿದ್ದು 3.11 ಕೋಟಿ ಜನರ ಹೆಸರು ಪಟ್ಟಿಯಲ್ಲಿದೆ; 19.06 ಲಕ್ಷ ಜನರ ಹೆಸರನ್ನು ಕೈ ಬಿಡಲಾಗಿದೆ. "3,11,21,004 ಜನರು ಅಂತಿಮ ಎನ್ಆರ್ಸಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಅವಕಾಶ ಪಡೆದಿದ್ದಾರೆ. ಉಳಿದ 19,06,657 ಜನರ ಹೆಸರನ್ನು ಕೈ ಬಿಡಲಾಗಿದೆ. ಇದರಲ್ಲಿ ಪೌರತ್ವ ದಾಖಲೆಗಾಗಿ ಅರ್ಜಿ ಸಲ್ಲಿಸದವರೂ ಇದ್ದಾರೆ," ಎಂದು ಎನ್ಆರ್ಸಿಯ ರಾಜ್ಯ ಸಂಚಾಲಯ ಪ್ರತೀಕ್ ಹಜೇಲಾ ಹೇಳಿದ್ದಾರೆ. ಈ ಪಟ್ಟಿಯ ಬಗ್ಗೆ ತಕರಾರು ಇರುವವರು ವಿದೇಶಿಯರ ನ್ಯಾಯಾಧಿಕರಣದ ಮುಂದೆ ಅಪೀಲು ಮಾಡಬಹುದು ಎಂಬುದಾಗಿ ಅವರು ವಿವರಿಸಿದ್ದಾರೆ. ಜನರು ವೆಬ್ಸೈಟಿಗೆ ಭೇಟಿ ನೀಡಿ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂದು ಪರಿಶೀಲಿಸಬಹುದಾಗಿದೆ. ಇದರ ಜೊತೆಗೆ ಎನ್ಆರ್ಸಿ ಸೇವಾ ಕೇಂದ್ರ, ಡಿಸಿ ಕಚೇರಿ ಮತ್ತು ಸರ್ಕಲ್ ಆಫೀಸರ್ ಕಚೇರಿಗೆ ಭೇಟಿ ನೀಡಿ ಪಟ್ಟಿಯಲ್ಲಿ ತಮ್ಮ ಹೆಸರಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಅಸ್ಸಾಂಗೆ 1971ರ ನಂತರ ಪ್ರವೇಶಿಸಿದವರು ಮತ್ತು ಭಾರತೀಯರನ್ನು ಈ ಪಟ್ಟಿಯು ಪ್ರತ್ಯೇಕಗೊಳಿಸಿದೆ. ಈ ಪಟ್ಟಿಯಲ್ಲಿ ಹೆಸರಿಲ್ಲ ಅಂದಾಕ್ಷಣ ಅವರು ವಿದೇಶಿಯರು ಎಂದು ಅರ್ಥವಲ್ಲ ಎಂದು ಈ ಹಿಂದೆ ಗೃಹ ಸಚಿವಾಲಯ ಸ್ಪಷ್ಟನೆ ನೀಡಿತ್ತು. ಇದೀಗ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋದವರು 120 ದಿನಗಳ ಒಳಗೆ ವಿದೇಶಿಯರ ನ್ಯಾಯಾಧಿಕರಣಕ್ಕೆ ಮೇಲ್ಮನವಿ ಸಲ್ಲಿಸಬಹುದು ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಲ್ ಹೇಳಿದ್ದಾರೆ. ಎನ್ಆರ್ಸಿ ಎಂಬುದು ಭಾರತೀಯ ಪೌರರ ಹೆಸರು ಇರುವ ಪಟ್ಟಿಯಾಗಿದೆ. ಇದನ್ನು ಮೊದಲ ಬಾರಿಗೆ 1951ರಲ್ಲಿ ರಚಿಸಲಾಯಿತು. ಅಸ್ಸಾಂನೊಳಕ್ಕೆ ನುಸುಳಿರುವ ಅಕ್ರಮ ವಲಸಿಗರನ್ನು ಹೊರಗಿಡಲು ಇದನ್ನೀಗ ಪರಿಷ್ಕರಣೆ ಮಾಡಲಾಗಿದೆ. ಮೊದಲ ಬಾರಿಗೆ ಕರಡು ಪಟ್ಟಿಯನ್ನು ಜುಲೈ 30, 2018ರಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 40 ಲಕ್ಷ ಜನರ ಹೆಸರನ್ನು ಕೈ ಬಿಡಲಾಗಿತ್ತು. ಇದೀಗ ಪರಿಷ್ಕರಣೆ ಮಾಡಿ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
from India & World News in Kannada | VK Polls https://ift.tt/2zF9VTO