ಹೊಸ ದಿಲ್ಲಿ: ನವಭಾರತದ ಯುವಕರಿಗೆ (ಉಪನಾಮ) ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಯುವಕರು ತಮ್ಮ ಸ್ವಸಾಮರ್ಥ್ಯದಿಂದಲೇ ಹೆಸರುವಾಸಿಯಾಗ್ತಾರೆ ಎನ್ನುವ ಮೂಲಕ, ಗಾಂಧಿ ಪರಿವಾರಕ್ಕೆ ಮುಸುಕಿನ ಗುದ್ದು ಕೊಟ್ಟಿದ್ದಾರೆ. ಮನೋರಮಾ ನ್ಯೂಸ್ ಕಾನ್ ಕ್ಲೇವ್ ನ ವೀಡಿಯೋ ಕಾನ್ಫರೆನ್ಸ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನವಭಾರತದಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ ಎಂದಿದ್ದಾರೆ. ನವಭಾರತ ಇಂದು ಸ್ವಹಿತಾಸಕ್ತಿಯನ್ನು ಮರೆದು, ಸಮಾಜದ ಹಿತ ಚಿಂತನೆ ನಡೆಸ್ತಿದೆ, ಸರ್ಕಾರ ನೀಡುತ್ತಿರುವ ಸಬ್ಸಿಡಿಗಳನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಡ್ತಿದ್ದಾರೆ, ಶತಮಾನಗಳ ಇತಿಹಾಸವಿರುವ ಗಾಂಧಿವಾದವನ್ನು ಪಾಲಿಸುತ್ತಿರುವುದಕ್ಕೆ ಇದೇ ಸಾಕ್ಷಿ ಎಂದು ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ನವಭಾರತದ ಪರಿಕಲ್ಪನೆ ಕೆಲವೇ ಕೆಲವು ಮಂದಿಗೆ ಮಾತ್ರ ಎಂದು ಭಾವಿಸಬೇಕಿಲ್ಲ, ಇದು ದೇಶದ 130 ಕೋಟಿ ಜನರ ದನಿ ಎಂದು ಪ್ರಧಾನಿ ಹೇಳಿದ್ದಾರೆ. ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸಿಗುತ್ತೆ ಎಂದು ಯಾರು ಊಹಿಸಿದ್ದರು, ಹರ್ಯಾಣದಂಥಾ ರಾಜ್ಯದಲ್ಲಿ ಪಾರದರ್ಶಕವಾಗಿ ಸರ್ಕಾರಿ ನೇಮಕಾತಿ ನಡೆಯುತ್ತದೆ ಎಂದು ಯಾರಾದ್ರೂ ಕಲ್ಪಿಸಿಕೊಳ್ಳಲು ಸಾಧ್ಯವಿತ್ತೇ ಎಂದು ಪ್ರಶ್ನಿಸಿರುವ ಮೋದಿ, ಇಂದಿನ ಭ್ರಷ್ಟಾಚಾರ ರಹಿತ ಪಾರದರ್ಶಕತೆ ಬಗ್ಗೆ ಮಾತನಾಡ್ತಿದೆ ಎಂದು ಪ್ರತಿಪಾದಿಸಿದರು. ಸ್ವಚ್ಛಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಿಯೇ ತೀರುತ್ತೇವೆ, ದೇಶವನ್ನು ಭ್ರಷ್ಟಾಚಾರದಿಂದಲೂ ಮುಕ್ತಗೊಳಿಸ್ತೇವೆ, ಇದಕ್ಕಾಗಿ ನಮಗೆ ಇಚ್ಛಾಶಕ್ತಿ ಇದೆ ಎಂದು ಮೋದಿ ಹೇಳಿದ್ದಾರೆ. ತಮ್ಮ ಇತ್ತೀಚಿನ ಬಹರೇನ್ ಭೇಟಿ ಬಗ್ಗೆ ಮಾತನಾಡಿದ ಮೋದಿ, ಅಲ್ಲಿನ ಜೈಲುಗಳಲ್ಲಿದ್ದ 250 ಭಾರತೀಯ ಖೈದಿಗಳಿಗೆ ಕ್ಷಮಾದಾನ ಸಿಕ್ಕಿದೆ, ಒಮನ್ ಮತ್ತು ಸೌದಿ ಜೈಲುಗಳಲ್ಲಿದ್ದ ಭಾರತೀಯ ಖೈದಿಗಳಿಗೂ ಕ್ಷಮಾದಾನ ಸಿಕ್ಕಿದೆ. ಅಷ್ಟೇ ಅಲ್ಲ, ಭಾರತೀಯರ ಹಜ್ ಕೋಟಾ ಕೂಡಾ ಏರಿಕೆಯಾಗಿದೆ ಎಂದು ಮೋದಿ ವಿವರಿಸಿದ್ರು. ಭಾರತದಲ್ಲಿನ ಭಾಷಾ ವೈವಿಧ್ಯತೆ ಹಾಗೂ ಸಾಮರಸ್ಯದ ಬಗ್ಗೆ ಮಾತನಾಡಿದ ಮೋದಿ, ಕನ್ನಡಿಗರ ಒಂದು ಗುಂಪು ಬೆಂಗಾಲಿ ಭಾಷೆ ಕಲಿತರೆ, ಹರ್ಯಾಣದ ಒಂದಷ್ಟು ಜನ ಮಲೆಯಾಳಂ ಕಲಿತರೆ ಪರಸ್ಪರ ಹತ್ತಿರವಾಗಬಹುದು ಎಂದರು.
from India & World News in Kannada | VK Polls https://ift.tt/2UeNgqW