ತಿರುಪತಿ: ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯನ್ನಾಗಿ ಮಾಡಬೇಕು ಅನ್ನೋದು ಟಿಡಿಪಿ ವರಿಷ್ಠ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕನಸಾಗಿತ್ತು. ಆದ್ರೆ, ಇದೀಗ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ರಾಜಧಾನಿಯನ್ನು ಅಮರಾವತಿಯಿಂದ ಬೇರೆಡೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ ಅನ್ನೋ ವದಂತಿ ಕೇಳಿ ಬರ್ತಿತ್ತು. ಇದೀಗ ಆ ವದಂತಿಯನ್ನೂ ಮೀರಿಸುವಂತಾ ಸುನಾಮಿಯೊಂದು ಎದುರಾಗಿದೆ. ಆಂಧ್ರಕ್ಕೆ 4 ರಾಜಧಾನಿಗಳನ್ನು ನಿರ್ಮಿಸಲು ನಿರ್ಧರಿಸಿದ್ದಾರೆ ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಟಿಜಿ ವೆಂಕಟೇಶ್ ಹೇಳಿದ್ದಾರೆ. ಕರ್ನೂಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಟೇಶ್, ಅಮರಾವತಿಯಿಂದ ರಾಜಧಾನಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಜಗನ್ ನಿರ್ಧರಿಸಿದ್ದಾರೆ. ಇದಕ್ಕಾಗಿ ಕೇಂದ್ರದ ಬಿಜೆಪಿ ಸರ್ಕಾರದ ನೆರವು ಪಡೆಯಲಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲ, ಅಧಿಕಾರ ವಿಕೇಂದ್ರೀಕರಣ ಹಾಗೂ ಎಲ್ಲ ಪ್ರಾಂತ್ಯಗಳಿಗೂ ನ್ಯಾಯ ದೊರಕಿಸುವ ಉದ್ದೇಶದಿಂದಾಗಿ ನಾಲ್ಕು ರಾಜಧಾನಿಗಳನ್ನು ನಿರ್ಮಿಸಲು ಉದ್ದೇಶಿಸಿಲಾಗಿದ್ದು, ವಿಜಯನಗರಂ, ಕಾಕಿನಾಡ, ಗುಂಟೂರು ಹಾಗೂ ಕಡಪ ಜಿಲ್ಲೆಗಳು ರಾಜ್ಯ ರಾಜಧಾನಿಯಾಗಿ ಬದಲಾಗಲಿವೆ ಎಂದು ವಿವರಿಸಿದ್ದಾರೆ. ಅಮರಾವತಿಯನ್ನು ಮಾಡಬೇಕೆಂಬ ಟಿಡಿಪಿ ನಿರ್ಧಾರವನ್ನು ಈ ಹಿಂದೆ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಬಲವಾಗಿ ವಿರೋಧಿಸಿತ್ತು. ಇದೇ ಕಾರಣಕ್ಕಾಗಿ ರಾಜ್ಯದ ಜನ ಹಾಗೂ ರೈತರು ಟಿಡಿಪಿ ವಿರುದ್ಧ ನಿಂತರು ಎಂದು ಬಿಜೆಪಿ ಸಂಸದ ಟಿಜಿ ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.
from India & World News in Kannada | VK Polls https://ift.tt/2ZqtNsj