ಕಾಶ್ಮೀರದತ್ತ ರಾಹುಲ್‌ ನೇತೃತ್ವದ ವಿಪಕ್ಷ ನಿಯೋಗ; ಬರಬೇಡಿ ಎಂದರೂ ಹೋಗುತ್ತಿರುವ ನಾಯಕರು!

ಹೊಸದಿಲ್ಲಿ: ಆರ್ಟಿಕಲ್‌ 370 ರದ್ದುಗೊಳಿಸಿದ ನಂತರ ಸರಕಾರದ ಸಲಹೆಯನ್ನು ಗಾಳಿಗೆ ತೂರಿ ನೇತೃತ್ವದ ಪ್ರತಿಪಕ್ಷಗಳ ನಿಯೋಗ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದೆ. ವಿಶೇಷಾಧಿಕಾರ ಅಸಿಂಧುಗೊಂಡ ಬಳಿಕ ಇದುವರೆಗೆ ಯಾವ ರಾಜಕೀಯ ನಾಯಕರಿಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಾವಕಾಶ ನೀಡಿರಲಿಲ್ಲ. ಜಮ್ಮು ಮತ್ತು ಕಾಶ್ಮೀರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಜಕೀಯ ಮುಖಂಡರಿಗೆ ಶ್ರೀನಗರಕ್ಕೆ ಭೇಟಿ ನೀಡಬೇಡಿ ಎಂದು ಮನವಿ ಮಾಡಿದೆ. ರಾಜಕೀಯ ಮುಖಂಡರ ಭೇಟಿಯಿಂದ ರಾಜ್ಯದ ಜನತೆ ತೊಂದರೆಯಲ್ಲಿ ಸಿಲುಕಿಕೊಳ್ಳುತ್ತದೆ ಎಂದು ಟ್ವೀಟ್‌ ಮೂಲಕ ಸಲಹೆ ನೀಡಿದೆ. 9 ನಾಯಕರನ್ನು ಒಳಗೊಂಡ ನಿಯೋಗವು ಅಲ್ಲಿನ ಜನತೆ ಮತ್ತು ಪಕ್ಷದ ನಾಯಕರ ಜತೆ ಆರ್ಟಿಕಲ್‌ 370 ರದ್ದಾದ ಬಳಿಕ ಉಂಟಾದ ಸ್ಥಿತಿಗತಿಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಕಾಂಗ್ರೆಸ್‌, ಸಿಪಿಐ-ಎಂ, ಸಿಪಿಐ, ಆರ್‌ಜೆಡಿ, ಎನ್‌ಸಿಪಿ, ಟಿಎಂಸಿ ಮತ್ತು ಡಿಎಂಕೆ ನಾಯಕರು ನಿಯೋಗದಲ್ಲಿ ಇದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್‌ ಮತ್ತು ಆನಂದ್‌ ಶರ್ಮಾ ಅವರು ರಾಹುಲ್‌ ಜತೆಗಿದ್ದಾರೆ. ಅವಕಾಶ ಸಿಕ್ಕಿದರೆ ಜಮ್ಮು ಮತ್ತು ಕಾಶ್ಮೀರದ ಇತರ ಪ್ರದೇಶಗಳಿಗೂ ನಿಯೋಗ ಭೇಟಿ ನೀಡುವ ಸಾಧ್ಯತೆ ಇದೆ.


from India & World News in Kannada | VK Polls https://ift.tt/2U2H31d

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...