ನವದೆಹಲಿ : ಜಿಎಸ್ಟಿ ಹೊಡೆತದಿಂದಾಗಿ ಬಸವಳಿದಿರುವ, ಮೇಲೇಳಲು ತಿಣುಕಾಡುತ್ತಿರುವ ನಲ್ಲಿ ಮತ್ತೆ ಜೀವಂತಿಕೆ ತರಲು ಕೇಂದ್ರ ವಿತ್ತ ಸಚಿವೆ ಅವರು ಕೆಲ ಮಹತ್ವದ ನಿರ್ಣಯಗಳನ್ನು ಮುಂದಿನ ವಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆರ್ಥಿಕ ನೀತಿ ಬಿಗಿಗೊಳಿಸಿರುವುದರಿಂದ ದೇಶದಾದ್ಯಂತ ಮನೆ ಕೊಳ್ಳುವ ಕನಸು ಕಂಡು, ಹಣ ಹೂಡಿದವರು ಕಂಗಾಲಾಗಿದ್ದಾರೆ. ಈಕಡೆ ಮನೆಯೂ ಸಿಗದೆ, ಆಕಡೆ ಹೂಡಿದ ಹಣವನ್ನೂ ವಾಪಸ್ ಪಡೆದುಕೊಳ್ಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಇದು ಎನ್ಸಿಆರ್-ದೆಹಲಿ, ಬೆಂಗಳೂರು ಮತ್ತು ಮುಂಬೈನಲ್ಲಿ ಹೆಚ್ಚಾಗಿ ಕಂಡುಬಂದಿದೆ. ಈ ನಿಟ್ಟಿನಲ್ಲಿ ನಿರ್ಮಲಾ ಸೀತಾರಾಮನ್ ಅವರು ಹಲವಾರು ಮನೆ ಕೊಳ್ಳುವವರ ಜೊತೆ ಮಾತನಾಡಿದ್ದು, ಕೆಲವೇ ದಿನಗಳಲ್ಲಿ ಪರಿಹಾರ ಸೂಚಿಸುವುದಾಗಿ ವಾಗ್ದಾನ ನೀಡಿದ್ದಾರೆ. ಜನರ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರಕಾರ ಬದ್ಧವಾಗಿದ್ದು, ಜನರಿಗೆ ಅನುಕೂಲವಾಗುವಂಥ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಇದು ಆರಂಭ ಮಾತ್ರ. ಜನರು ಸಂಕಷ್ಟದಲ್ಲಿರುವುದು ನಮಗೆ ಬೇಕಿಲ್ಲ. ನಾವು ಜನರೊಂದಿಗಿದ್ದೇವೆ, ಅವರ ಸಂಕಷ್ಟಗಳನ್ನು ಆಲಿಸುತ್ತಿದ್ದೇವೆ ಮತ್ತು ಅವರೊಂದಿಗೆ ಸ್ಪಂದಿಸುತ್ತಿದ್ದೇವೆ. ಮುಂದಿನ ವಾರಗಳಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಅವರು ನುಡಿದಿದ್ದಾರೆ. ದೇಶದ ಆರ್ಥಿಕತೆಯನ್ನು ಉತ್ತೇಜಿಸುವಂಥ ಹಲವಾರು ಕ್ರಮಗಳನ್ನು ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಘೋಷಿಸಿದ್ದಾರೆ. ಆರ್ಥಿಕ ಪ್ರಗತಿ ಕುಂಠಿತವಾಗಿದೆ ಎಂಬ ಮಾತುಗಳು ಎಲ್ಲ ವಲಯಗಳಲ್ಲಿ ದಟ್ಟವಾಗುತ್ತಿದ್ದಂತೆ, ಬ್ಯಾಂಕ್ ವಲಯ, ಆಟೋಮೊಬೈಲ್ಸ್, ಸ್ಟಾರ್ಟ್ ಅಪ್ ಕಂಪನಿಗಳಿಗೆ ಮರುಹುಟ್ಟು ನೀಡುವಂಥ ಕೆಲ ಕ್ರಮಗಳನ್ನು ಅವರು ಘೋಷಿಸಿದ್ದಾರೆ. ಬಸವಳಿದಿರುವ ರಿಯಲ್ ಎಸ್ಟೇಟ್ ಕೂಡ ಹಣಕಾಸು ಇಲಾಖೆಯಿಂದ ಸಿಹಿ ಮಾತುಗಳನ್ನು ಕೇಳಲು ಕಾದಿದೆ. ಒಂದು ಬಾರಿ ಮಾತ್ರವಲ್ಲ, ಎರಡು ಬಾರಿ ಘೋಷಣೆ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ. ಆದರೆ, ಅವು ಯಾವ ರೀತಿಯ ಘೋಷಣೆಗಳು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ ಮತ್ತು ದಿನಾಂಕಗಳನ್ನೂ ಪ್ರಕಟಿಸಿಲ್ಲ.
from India & World News in Kannada | VK Polls https://ift.tt/33TYO7A