ಹೊಸದಿಲ್ಲಿ: ಭಾರಿ ನಾಟಕೀಯ ಬೆಳವಣಿಗೆಯಲ್ಲಿ ಬುಧವಾರ ರಾತ್ರಿ ಬಂಧನಕ್ಕೆ ಒಳಗಾದ ಮಾಜಿ ವಿತ್ತ ಸಚಿವ ಅವರನ್ನು ಸಿಬಿಐ ಅಧಿಕಾರಿಗಳು ಗುರುವಾರ ಸಿಬಿಐ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಸಿಬಿಐ ಕೋರ್ಟ್‌ನಲ್ಲಿ ಚಿದಂಬರಂ ಪರ ವಕೀಲರ ತಂಡ ಉಪಸ್ಥಿತಗೊಂಡಿದೆ. ಸಿಬಿಐ ಕೋರ್ಟ್ ಚಿದಂಬರಂ ಅವರಿಗೆ ಬೇಲ್ ನೀಡುತ್ತದೆಯೇ ಎಂಬ ಕುತೂಹಲ ರಾಷ್ಟ್ರದ ಮುಂದಿದೆ. ಐದು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಚಿದಂಬರಂ ಅವರನ್ನು ನೀಡಬೇಕು ಎಂದು ಸಿಬಿಐ ಅಧಿಕಾರಿಗಳು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ವಕೀಲರಾಗಿ ಅಗಾಧ ಅನುಭವ ಹೊಂದಿರುವ ಪಿ ಚಿದಂಬರಂ ಸಿಬಿಐ ವಿಶೇಷ ಕೋರ್ಟ್ ಮುಂದೆ ಹಾಜರು ಪಡಿಸಿದಾಗ, ಮುಖಭಾವದಲ್ಲಿ ಯಾವ ಭೀತಿ ಕಂಡುಬರುತ್ತಿರಲಿಲ್ಲ. ನಗುಮುಖದಿಂದಲೇ ಆಗಮಿಸಿದ ಚಿದಂಬರಂ ಬಹಳ ಆತ್ಮವಿಶ್ವಾಸದಿಂದಲೇ ಇದ್ದರು ಎಂದು ಮೂಲಗಳು ತಿಳಿಸಿವೆ. ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನ ಹಿರಿಯ ನಾಯಕ ಪಿ ಚಿದಂಬರಂ ಅವರು ವಿಚಾರಣೆಯ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡಿಲ್ಲ, ಹಾರಿಕೆಯ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ.
from India & World News in Kannada | VK Polls https://ift.tt/30qox5t