ವಿವಾಹ ಖಚಿತತೆ ಇಲ್ಲದೆ, ಪರಸ್ಪರ ಒಪ್ಪಿಗೆ ಮೇಲೆ ನಡೆದ ದೈಹಿಕ ಸಂಪರ್ಕ ಅತ್ಯಾಚಾರವಲ್ಲ: ಸುಪ್ರೀಂಕೋರ್ಟ್

ಹೊಸದಿಲ್ಲಿ: ಪರಸ್ಪರ ಒಪ್ಪಿಗೆಯಿಂದ ಬೆಳೆಸು ದೈಹಿಕ ಸಂಬಂಧದ ಬಗ್ಗೆ ಮಹತ್ವದ ತೀರ್ಪು ಪ್ರಕಟಿಸಿದೆ. 'ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ಮಹಿಳೆ ತಿಳಿದಿದ್ದರು ಸಹ, ಪರಸ್ಪರ ಸಮ್ಮತಿಯಿಂದ ದೈಹಿಕ ಸಂಬಂಧ ಬೆಳೆಸಿದರೆ ಅದನ್ನು ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಪ್ರತಿಪಾದಿಸಿದೆ. ಇಂಥ ಸಂದರ್ಭದಲ್ಲಿ ಪರಸ್ಪರ ರೂಪಗೊಂಡ ದೈಹಿಕ ಸಂಬಂಧವನ್ನು ವಿವಾಹದ ಸುಳ್ಳು ಭರವಸೆ ನೀಡುವ ಮೂಲಕ ನಡೆದ ಅತ್ಯಾಚಾರ ಎಂದು ಹೇಳಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಮಾರಾಟ ತೆರಿಗೆ ಇಲಾಖೆಯ ಮಹಿಳಾ ಸಹಾಯಕ ಆಯುಕ್ತೆಯೊಬ್ಬರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಾಧೀಶೆ ಇಂದಿರಾ ಬ್ಯಾನರ್ಜಿ ಅವರು, ಈ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ. ಈ ಮೂಲಕ ಸಿಆರ್‌ಪಿಎಫ್‌ನ ಡೆಪ್ಯೂಟಿ ಕಮಾಂಡರ್ ಮೇಲೆ ಮಹಿಳೆ ಹೊರಸಿದ್ದ ಅತ್ಯಾಚಾರ ಆರೋಪವನ್ನು ನ್ಯಾಯಾಧೀಶರು ವಜಾಗೊಳಿಸಿದ್ದಾರೆ. ದೂರುದಾರ ಮಹಿಳೆ ಮತ್ತು ಸಿಆರ್‌ಪಿಎಫ್‌ನ ಡೆಪ್ಯೂಟಿ ಕಮಾಂಡರ್ 8 ವರ್ಷಕ್ಕಿಂತ ಅಧಿಕ ಕಾಲ ಸಂಬಂಧದಲ್ಲಿದ್ದರು. ಈ ಅವಧಿಯಲ್ಲಿ ಇಬ್ಬರು ಪರಸ್ಪರರ ನಿವಾಸದಲ್ಲಿ ಹಲವು ಬಾರಿ ಸೇರಿದ್ದರು. ಇವರಿಬ್ಬರ ನಡುವೆ ಪರಸ್ಪರ ಒಪ್ಪಿಗೆಯಿಂದ ಸಂಬಂಧ ರೂಪಗೊಂಡಿದೆ ಎನ್ನುವುದು ಸ್ಪಷ್ಟ ಎಂದು ನ್ಯಾಯಾಲಯ ತಿಳಿಸಿದೆ.


from India & World News in Kannada | VK Polls https://ift.tt/2Mw3afs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...