ಅಷ್ಟಕ್ಕೂ ಚಿದಂಬರಂ, ಕಾರ್ತಿ ಬರೋಬ್ಬರಿ ಎಷ್ಟು ಬಾರಿ ಬೇಲ್‌ ಪಡೆದಿದ್ದಾರೆ ಗೊತ್ತೆ?

ಹೊಸದಿಲ್ಲಿ: ಭಾರಿ ನಾಟಕೀಯ ಬೆಳವಣಿಗೆಗಳ ಬಳಿಕ ಕೇಂದ್ರ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಬುಧವಾರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿಲ್ಲಿ ಹೈಕೋರ್ಟ್‌ ಜಾಮೀನು ಅರ್ಜಿ ವಜಾ ಗೊಳಿಸಿದ ನಂತರ ಸಿಬಿಐ ಮತ್ತು ಇಡಿ ಅಧಿಕಾರಿಗಳು ಚಿದಂಬರಂ ಅವರನ್ನು ಬಂಧಿಸಲು ಪ್ರಯತ್ನ ನಡೆಸಿತ್ತು. ಆದರೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದ ಚಿದಂಬರಂ ಬಂಧನದಿಂದ ಬಚಾವಾಗಲು ಸಾಕಷ್ಟು ಪ್ರಯತ್ನ ನಡೆಸಿದರು. ಕೊನೆಗೂ ಬಂಧನಕ್ಕೆ ಒಳಪಟ್ಟಿರುವ ಪಿ. ಚಿದಂಬರಂ ಇದುವರೆಗೆ ಬರೋಬ್ಬರಿ 20 ಬಾರಿ ಬೇಲ್‌ ಪಡೆದಿದ್ದಾರೆ. ಅಷ್ಟೇ ಬಾರಿ ಅವರ ಮಗ ಬೇಲ್‌ ಪಡೆದಿದ್ದಾರೆ. 1. ಮಾರ್ಚ್‌ 20, 2018: ಸಿಬಿಐನ ವಿಶೇಷ ನ್ಯಾಯಾಲಯದಿಂದ ಕಾರ್ತಿ ಚಿದಂಬರಂಗೆ 2018ರ ಏಪ್ರಿಲ್‌ 16ರ ತನಕ ಜಾಮೀನು. 2. ಏಪ್ರಿಲ್‌ 16, 2018 : ದಿಲ್ಲಿ ಕೋರ್ಟ್‌ನಿಂದ ಕಾರ್ತಿ ಚಿದಂಬರಂಗೆ 2018ರ ಮೇ 2ರ ತನಕ ಜಾಮೀನು 3. ಮೇ 2, 2018: ದಿಲ್ಲಿ ಕೋರ್ಟ್‌ನಿಂದ 2018ರ ಜೂನ್‌ 4ರ ತನಕ. 4. ಜೂನ್‌ 5, 2018: ಪಿ.ಚಿದಂಬರಂಗೆ 2018 ಜುಲೈ 10ರ ತನಕ. 5.ಜುಲೈ 10, 2018: ದಿಲ್ಲಿ ಕೋರ್ಟ್‌ನಿಂದ ಚಿದಂಬರಂಗೆ 2018ರ ಆಗಸ್ಟ್‌ 7ರ ತನಕ. 6. ಆಗಸ್ಟ್‌ 7, 2018: ದಿಲ್ಲಿ ಕೊರ್ಟ್‌ನಿಂದ ಚಿದಂಬರಂಗೆ 2018 ಅಕ್ಟೋಬರ್‌ 8ರ ತನಕ. 7. ಅಕ್ಟೋಬರ್‌ 8, 2018: ದಿಲ್ಲಿ ಕೋರ್ಟ್‌ನಿಂದ ಚಿದಂಬರಂ ಮತ್ತು ಪುತ್ರ ಕಾರ್ತಿಗೆ 2018 ನವೆಂಬರ್‌ 1ರ ತನಕ. 8. ನವೆಂಬರ್‌ 1, 2018: ಚಿದಂಬರಂ ಹಾಗೂ ಕಾರ್ತಿಗೆ 2018ರ ನವೆಂಬರ್‌ 26ರವರೆಗೆ. 9. ನವೆಂಬರ್‌ 27, 2018: ಇಬ್ಬರಿಗೂ ಡಿಸೆಂಬರ್‌ 18, 2018ರ ತನಕ. 10. ಡಿಸೆಂಬರ್‌ 19, 2018: ತಂದೆ-ಪುತ್ರನಿಗೆ 2019 ಜನವರಿ 11ರ ತನಕ. 11. ಜನವರಿ 11, 2019: ದಿಲ್ಲಿ ಕೋಟ್‌ ರ್‍ನಿಂದ ಫೆಬ್ರವರಿ 1, 2019ರ ತನಕ. 12. ಫೆಬ್ರವರಿ 1, 2019: ದಿಲ್ಲಿ ಕೋರ್ಟ್‌ನಿಂದ ಫೆ.18, 2019ರ ತನಕ. 13. ಫೆಬ್ರವರಿ 18, 2019: ಮಾರ್ಚ್‌ 8, 2019ರ ತನಕ. 14. ಮಾರ್ಚ್‌ 8, 2019: ಮಾರ್ಚ್‌ 25, 2019ರ ತನಕ. 15. ಮಾರ್ಚ್‌ 25, 2019: ಏಪ್ರಿಲ್‌ 26, 2019ರ ತನಕ 16. ಏಪ್ರಿಲ್‌ 26, 2019: ಮೇ 6, 2019ರ ತನಕ 17. ಮೇ 6, 2019: ಮೇ 30, 2019ರ ತನಕ 18. ಮೇ 31, 2019: ಆಗಸ್ಟ್‌ 1ರ ತನಕ 19. ಆಗಸ್ಟ್‌ 1, 2019: ದಿಲ್ಲಿ ಕೋರ್ಟ್‌ನಿಂದ ಆಗಸ್ಟ್‌ 9, 2019ರ ತನಕ 20. ಆಗಸ್ಟ್‌ 9, 2019: ದಿಲ್ಲಿ ಕೋರ್ಟ್‌ನಿಂದ ಆಗಸ್ಟ್‌ 23ರ ತನಕ ಜಾಮೀನು ವಿಸ್ತರಣೆ.(ಏರ್‌ಸೆಲ್‌-ಮ್ಯಾಕ್ಸಿಸ್‌ ಕೇಸ್‌)


from India & World News in Kannada | VK Polls https://ift.tt/2Mwe6d7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...