ಆ್ಯಂಟಿಗುವಾ: ವೆಸ್ಟ್‌ಇಂಡೀಸ್ ಮಾಜಿ ಬ್ಯಾಟಿಂಗ್ ದಿಗ್ಗಜ ಸರ್ ಜತೆಗಿನ ವಿಶೇಷ ಸಂದರ್ಶನದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ , 2014ರ ಆಸ್ಟ್ರೇಲಿಯಾ ಸರಣಿಯ ಬಗ್ಗೆ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಟಿವಿಯಲ್ಲಿ ನಡೆದ ಸಂದರ್ಶನದ ಎರಡನೇ ಭಾಗದಲ್ಲಿ ವಿರಾಟ್ ತಮ್ಮ ಅನುಭವಗಳನ್ನು ಹಂಚಿಕೊಂಡರು. 2014ರ ಇಂಗ್ಲೆಂಡ್‌ನ ಕೆಟ್ಟ ಪ್ರದರ್ಶನದ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ತಾವು ಎಂತಹ ಆಟಗಾರ ಎಂಬುದನ್ನು ಜಗತ್ತಿಗೆ ಸಾರಿದ್ದರು. ಕೊಹ್ಲಿ ಪಾಲಿಗೆ ಆಸೀಸ್ ಸರಣಿ ಅತ್ಯಂತ ಕಠಿಣವೆನಿಸಿತ್ತು. ಆದರೆ ಆಸೀಸ್ ಪ್ರವಾಸಕ್ಕೂ ಮುನ್ನ ದೃಶ್ಯೀಕರಣ ಮಾಡಿರುವುದು ನೆರವಾಯಿತು ಎಂದು ಮೆಲುಕು ಹಾಕಿದರು. ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವ ಪಣ ತೊಟ್ಟ ವಿರಾಟ್ ಸಂಪೂರ್ಣ ಅಧಿಪತ್ಯವನ್ನು ಮೆರೆದಿದ್ದರು. ಆಸೀಸ್ ಸರಣಿಯಲ್ಲಿ ಕೊಹ್ಲಿ ನಾಲ್ಕು ಶತಕಗಳನ್ನು ಬಾರಿಸಿರುವುದನ್ನು ರಿಚರ್ಡ್ಸ್ ನೆನಪಿಸಿಕೊಂಡರು. ಅಂದು ಕಾಂಗರೂ ಪಡೆಗೆ ಬಡ್ಡಿ ಸಮೇತ ವಾಪಾಸ್ ನೀಡಿರುವುದನ್ನು ಅತ್ಯಂತ ಇಷ್ಟಪಟ್ಟಿರುವುದಾಗಿ ರಿಚರ್ಡ್ಸ್ ಹೇಳಿದರು. ಇದಕ್ಕುತ್ತರವಾಗಿ ಕೊಹ್ಲಿ, ಇಂತಹ ವಿಚಾರಗಳು ಬಂದಾಗ ಆತ್ಮನಂಬಿಕೆಯನ್ನಿಡಲು ತಾವೇ ಸ್ಪೂರ್ತಿ ಎಂದು ನುಡಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2L2grJS