ಆ್ಯಂಟಿಗುವಾ: ವೆಸ್ಟ್‌ಇಂಡೀಸ್‌ನ ಮಾಜಿ ಬ್ಯಾಟಿಂಗ್ ದೈತ್ಯ ಸರ್ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಟೀಮ್ ಇಂಡಿಯಾ ನಾಯಕ , ತಮ್ಮ ಜೀವನದಲ್ಲಿ ಅತಿ ಹೆಚ್ಚು ಸ್ಫೂರ್ತಿ ತುಂಬಿದ ವ್ಯಕ್ತಿಯ ಬಗ್ಗೆ ಮಾತನಾಡಿದ್ದಾರೆ. ಬಿಸಿಸಿಐ ಟಿವಿಯಲ್ಲಿ ನಡೆಸಿದ ಸಂದರ್ಶನದಲ್ಲಿ ಕ್ರಿಕೆಟ್ ಹೊರತಾಗಿ ತಮ್ಮ ಜೀವನದಲ್ಲಿ ದೊರಕಿರುವ ಅತಿ ದೊಡ್ಡ ಆಶೀರ್ವಾದದ ಬಗ್ಗೆ ಮನಬಿಚ್ಚಿರುವ ವಿರಾಟ್, ಪತ್ನಿ ಅನುಷ್ಕಾ ಶರ್ಮಾರನ್ನು ಹಾಡಿ ಹೊಗಳಿದ್ದಾರೆ. ತಮ್ಮ ಜೀವನದ ಅತಿ ದೊಡ್ಡ ಆಶೀರ್ವಾದವಾಗಿದ್ದಾರೆ ಎಂದು ವಿರಾಟ್ ತಿಳಿಸಿದರು. ಸ್ವತ: ವೃತಿಪರವಾಗಿರುವುದರಿಂದ ನನ್ನ ಸ್ಥಾನವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಕೊಹ್ಲಿ ಸೇರಿಸಿದರು. ಅನುಷ್ಕಾ ನನ್ನನ್ನು ಸರಿಯಾದ ದಿಕ್ಕಿನತ್ತ ಮುನ್ನಡೆಸುತ್ತಾರೆ. ಆಕೆಯ ಜತೆಗಿರುವ ಮೂಲಕ ಕಲಿತ ಒಂದು ವಿಷಯವೇನೆಂದರೆ, ಜೀವನದಲ್ಲಿ ಮೈದಾನದ ಹೊರಗಡೆ ಸರಿಯಾದ ಅಂಶಗಳನ್ನು ಮಾಡಲು ಸಿದ್ಧವಿದ್ದರೆ, ನನಗನಿಸುತ್ತದೆ ಅದನ್ನೇ ಮೈದಾನದಲ್ಲಿ ಮಾಡಲು ನಿಮ್ಮ ವ್ಯಕ್ತಿತ್ವವನ್ನು ಸೃಷ್ಟಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು. ಸಂದರ್ಶನದ ವೇಳೆ ವಿರಾಟ್ ಕೊಹ್ಲಿ ಹಾಗೂ ವಿವ್ ರಿಚರ್ಡ್ಸ್ ಆತ್ಮನಂಬಿಕೆ ಹಾಗೂ ಬದ್ಧತೆಯ ಬಗ್ಗೆಯೂ ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಂಡರು. ಅಲ್ಲದೆ ಎಂದಿಗೂ ಅಭ್ಯಾಸವನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂಬ ಸಂದೇಶವನ್ನು ಸಾರಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2MzjVXr