ಹೊಸದಿಲ್ಲಿ: ಐಎನ್‌ಎಕ್ಸ್ ಮೀಡಿಯಾ ಹೌಸ್ ಹಗರಣದಲ್ಲಿ ಸಿಲುಕಿರುವ ಕೇಂದ್ರದ ಮಾಜಿ ಸಚಿವ ಬುಧವಾರ ರಾತ್ರಿ ಅಧಿಕಾರಿಗಳು ಬಂಧಿಸಿದ್ದಾರೆ. ಬುಧವಾರ ರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು. ಬುಧವಾರ ದಿಢೀರಾಗಿ ಕಾಂಗ್ರೆಸ್ ಕಚೇರಿಯಲ್ಲಿ ಚಿದಂಬರಂ ಕಾಣಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ ತಮ್ಮ ನಿವಾಸಕ್ಕೆ ತೆರಳಿದರು. ನಂತರ ಸಿಬಿಐ ಅಧಿಕಾರಿಗಳು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸುತ್ತುವರಿದಿದ್ದರು. ಚಿದಂಬರಂ ನಿವಾಸದ ಕೌಂಪೌಂಡ್ ಹಾರಿದ ಸಿಬಿಐ ಅಧಿಕಾರಿಗಳು ನಿವಾಸದೊಳಗೆ ನುಗ್ಗಲು ಪ್ರಯತ್ನಿಸಿದರು. 20ಕ್ಕೂ ಹೆಚ್ಚು ಅಧಿಕಾರಿಗಳು ಚಿದಂಬರಂ ನಿವಾಸದ ಮುಂದಿನ ಹಾಗೂ ಹಿಂದಿನ ಗೇಟ್ ಮೂಲಕ ಮನೆಯನ್ನು ಸುತ್ತುವರಿದರು. . ಬುಧವಾರ ರಾತ್ರಿ ದಿಢೀರ್ ಆಗಿ ಕಾಂಗ್ರೆಸ್ ಕಚೇರಿಗೆ ಬಂದ ಚಿದಂಬರಂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ನಡುವೆ ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ವಶಕ್ಕೆ ಪಡೆದ ಕೂಡಲೇ ಪ್ರತಿಕ್ರಿಯೆ ನೀಡಿದ ಪುತ್ರ ಕಾರ್ತಿ ಚಿದಂಬರಂ, ಇದು ರಾಜಕೀಯ ದ್ವೇಷದ ಕ್ರಮ. ಕೆಲವೇ ಕೆಲವರನ್ನು ಮೆಚ್ಚಿಸಲು ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
from India & World News in Kannada | VK Polls https://ift.tt/30nmYVJ