ಚೆನ್ನೈ: ಏಳನೇ ಆವೃತ್ತಿಯ ಪಂದ್ಯಾವಳಿಯಲ್ಲಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಚೆನ್ನೈನ ಜವಾಹರ್‌ಲಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 35-26ರ ಅಂತರದಲ್ಲಿ ಪಟನಾ ಪೈರೇಟ್ಸ್ ವಿರುದ್ಧ ಗೆಲುವು ಬಾರಿಸಿತು. ಪಂದ್ಯದ ಆರಂಭದಿಂದ ಇತ್ತಂಡಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿತ್ತು. ಇದರಿಂದ ರೋಚಕ ಕದನವನ್ನು ನಿರೀಕ್ಷೆ ಮಾಡಲಾಗಿತ್ತು. ಮೊದಲಾರ್ಧದ ವೇಳೆಯಲ್ಲಿ ಬೆಂಗಾಲ್ 15-14ರ ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿತು. ದ್ವಿತಿಯಾರ್ಧದಲ್ಲಿ ಪಂದ್ಯದ ಚಿತ್ರಣ ಸಂಪೂರ್ಣವಾಗಿ ಬದಲಾಯಿತು. ಮಣಿಂದರ್ ಸಿಂಗ್ ಬೆಂಬಲದಿಂದ ಬೆಂಗಾಲ್ ತಂಡವು ಸಂಪೂರ್ಣ ಅಧಿಪತ್ಯವನ್ನು ಮೆರಿಯಿತು. ಪಂದ್ಯದ ಒಂದು ಹಂತದಲ್ಲಂತೂ 34-16ರ ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿತು. ಕೊನೆಯ ಹಂತದಲ್ಲಿ ಪಟನಾ ತಿರುಗೇಟು ನೀಡಿದರೂ ಆಗಲೇ ಪರಿಸ್ಥಿತಿ ಕೈಮೀರಿ ಹೋಗಿದ್ದರಿಂದ ಪಟನಾ ನಿರಾಸೆ ಅನುಭವಿಸಬೇಕಾಯಿತು. ಇದರೊಂದಿಗೆ 12 ಅಂಕಗಳನ್ನು ಕಲೆ ಹಾಕಿದ ಪರ್ದೀಪ್ ನರ್ವಾಲ್ ಹೋರಾಟವು ವ್ಯರ್ಥವೆನಿಸಿತು. ಇವರಿಗೆ ಸಹ ಆಟಗಾರರಿಂದ ಸೂಕ್ತ ಬೆಂಬಲ ಸಿಗದೇ ಹೋಯಿತು. ಇನ್ನೊಂದೆಡೆ ಬೆಂಗಾಲ್ ಪರ ಮಣಿಂದರ್ 10, ಕೆ ಪ್ರಪಂಚನ್ ಆರು ಹಾಗೂ ರಿಂಕು ನರ್ವಾಲ್ ಐದು ಅಂಕಗಳನ್ನು ಪಡೆದು ಮಿಂಚಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/30su6A8