ಹೊಸದಿಲ್ಲಿ: ಇಸ್ರೋದ ಮಹತ್ವಾಕಾಂಕ್ಷಿಯ ಚಂದ್ರಯಾನ-2 ಯೋಜನೆ ಬಹುತೇಕ ಯಶಸ್ವಿಯಾಗಿದೆ. ಈಗಾಗಲೇ ಹಲವು ಕಕ್ಷೆಗಳನ್ನು ದಾಟಿಕೊಂಡು ಮುನ್ನುಗ್ಗಿರುವ ಚಂದ್ರಯಾನ -2 ಈಗ ಚಂದ್ರನ ಮೊದಲ ಚಿತ್ರವನ್ನು ಕಳುಹಿಸಿಕೊಟ್ಟಿದೆ. ಸೆಪ್ಟೆಂಬರ್ 6 ರಂದು ಚಂದ್ರನಿಗೆ ಬಹಳ ಸಮೀಪ ಅಂದರೆ 30 ಕಿ.ಮೀ, ದೂರ ತಲುಪಲಿದೆ. ಚಂದ್ರನನ್ನು ತಲುಪುವ ಈ 30 ಕಿ.ಮೀ.ನ ಕೊನೆಯ ಹಂತ ತಂಡದವರಿಗೆ ಅತ್ಯಂತ ಕ್ಲಿಷ್ಟಕರ ಕ್ಷಣಗಳಾಗಿದ್ದು, ಈ ರೀತಿಯ ಸಂಕೀರ್ಣ ಕಾರ್ಯಾಚರಣೆಯನ್ನು ಇಸ್ರೋ ತಂಡ ಮೊದಲ ಬಾರಿಗೆ ಮಾಡಲಿದೆ. ಕೊನೆಯ 30 ಕಿ. ಮೀ ಅನ್ನು 15 ನಿಮಿಷದಲ್ಲಿ ತಲುಪಬೇಕಿದ್ದು, ಈ ಹಿನ್ನೆಲೆ ಉಪಗ್ರಹದ ವೇಗವನ್ನು ಮತ್ತಷ್ಟು ತಗ್ಗಿಸಬೇಕಿದೆ. ಸೆಪ್ಟೆಂಬರ್ 7 ರ ನಸುಕಿನಲ್ಲಿ ಈ ಕಾರ್ಯ ನಡೆಯಬೇಕಿದ್ದು, ಈ ಮಹತ್ವದ ಕಾರ್ಯ ಯಶಸ್ವಿಯಾದಲ್ಲಿ ಭಾರತ ಚಂದ್ರನನ್ನು ತಲುಪಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ.
from India & World News in Kannada | VK Polls https://ift.tt/2NpnJKn