ಹೈದರಾಬಾದ್: ಉದ್ಯೋಗ ಕೊಡಿಸುವ ನೆಪದಲ್ಲಿ ವಿವಿಧ ರಾಜ್ಯಗಳ 600ಕ್ಕೂ ಹೆಚ್ಚು ಯುವತಿಯರನ್ನು ಪುಸಲಾಯಿಸಿ ನಗ್ನ ಫೋಟೋ ಮತ್ತು ವೀಡಿಯೋಗಳನ್ನು ಮಾಡಿಕೊಳ್ಳುತ್ತಿದ್ದ ಟೆಕ್ಕಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಸೇರಿದಂತೆ 13 ರಾಜ್ಯಗಳ 600ಕ್ಕೂ ಹೆಚ್ಚು ಯುವತಿಯರು ಈತನ ವಂಚನೆಗೆ ಬಲಿಯಾಗಿದ್ದಾರೆ. ಪಂಚತಾರಾ ಹೋಟೆಲ್‌ನ ಮಾನವ ಸಂಪನ್ಮೂಲ ಅಧಿಕಾರಿ ಎಂದು ಹೇಳಿಕೊಂಡಿದ್ದ ಕ್ಲೆಮೆಂಟ್ ರಾಜ್ ಅಲಿಯಾಸ್ ಪ್ರದೀಪ್ ಎಂಬಾತನೇ ಪೊಲೀಸರ ಅತಿಥಿಯಾಗಿರುವ ವ್ಯಕ್ತಿ. ಸುಂದರವಾದ ಯುವತಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗುವುದು. ನಿಮ್ಮ ಅಂಗಸೌಷ್ಠವವೇ ಇದಕ್ಕೆ ಪ್ರಮುಖ ಮಾನದಂಡ. ಇದಕ್ಕಾಗಿ ವೀಡಿಯೋ ಕಳುಹಿಸಿಕೊಡಿ ಎಂದು ರಾಜ್ ಹೇಳಿದ್ದ. ಇದನ್ನು ನಂಬಿದ್ದ ಕೆಲವು ಯುವತಿಯರು ವೀಡಿಯೋಗಳನ್ನು ಕಳುಹಿಸಿಕೊಟ್ಟಿದ್ದರು. ನಂತರ ಕೆಲವರನ್ನು ಪುಸಲಾಯಿಸಿ ನಂಬರ್ ಪಡೆದು ವಾಟ್ಸಾಪ್ ವೀಡಿಯೋ ಕಾಲ್ ಮಾಡುತ್ತಿದ್ದ. ವೀಡಿಯೋ ಮಾಡುವಾಗಲೇ ಬಟ್ಟೆ ಬಿಚ್ಚುವಂತೆ ಹೇಳಿ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದಾಗ ಮೊಬೈಲ್‌ನಲ್ಲಿಯೇ ಸಾವಿರಾರು ಫೋಟೋಗಳು ಇರುವುದು ಪತ್ತೆಯಾಗಿದೆ. ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
from India & World News in Kannada | VK Polls https://ift.tt/2NqWmPY