ವೆಸ್ಟ್‌ಇಂಡೀಸ್ 222ಕ್ಕೆ ಸರ್ವಪತನ; ಭಾರತಕ್ಕೆ 75 ರನ್‌ಗಳ ಅಮೂಲ್ಯ ಮುನ್ನಡೆ

ಆ್ಯಂಟಿಗುವಾ: ಆತಿಥೇಯ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರಥಮ ಇನ್ನಿಂಗ್ಸ್‌ನಲ್ಲಿ 75 ರನ್‌ಗಳ ಅಮೂಲ್ಯ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಭಾರತದ 297 ರನ್‌ಗಳಿಗೆ ಉತ್ತರವಾಗಿ ಎದುರಾಳಿ ವಿಂಡೀಸ್ ತಂಡವನ್ನು 222 ರನ್‌ಗಳಿಗೆ ನಿಯಂತ್ರಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. 189/8 ಎಂಬಲ್ಲಿದ್ದ ಬ್ಯಾಟಿಂಗ್ ಮುಂದುವರಿಸಿದ ವಿಂಡೀಸ್‌ಗೆ ನಾಯಕ ಜೇಸನ್ ಹೋಲ್ಡರ್ 39 ರನ್ ಪೇರಿಸುವ ಮೂಲಕ ನೆರವಾದರು. ಹಾಗೆಯೇ ದಿನದಾಟದಲ್ಲಿ 33 ರನ್ ಪೇರಿಸುವ ಹೊತ್ತಿಗೆ ಉಳಿದೆರಡು ವಿಕೆಟುಗಳನ್ನು ಕಳೆದುಕೊಳ್ಳುವ ಮೂಲಕ ಹಿನ್ನಡೆ ಅನುಭವಿಸಿತು. ಮಾರಕ ದಾಳಿ ಸಂಘಟಿಸಿದ 43 ರನ್ ತೆತ್ತು ಐದು ವಿಕೆಟುಗಳನ್ನು ಕಬಳಿಸಿದರು. ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ತಲಾ ಎರಡು ಮತ್ತು ಜಸ್ಪ್ರೀತ್ ಬುಮ್ರಾ ಒಂದು ವಿಕೆಟ್ ಹಂಚಿಕೊಂಡರು. ಅದೇ ಹೊತ್ತಿಗೆ ಎರಡನೇ ದಿನದಾಟದಲ್ಲಿ ಊಟದ ವಿರಾಮದ ಹೊತ್ತಿಗೆ ಭಾರತ ವಿಕೆಟ್ ನಷ್ಟವಿಲ್ಲ 14 ರನ್ ಗಳಿಸಿದೆ. ಈ ಮೂಲಕ ಒಟ್ಟು ಮುನ್ನಡೆಯನ್ನು 89 ರನ್‌ಗಳಿಗೆ ಏರಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2L5MRmK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...