ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಅವರಿಂದ ತೆರವಾಗಿರುವ ಆರ್ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3 ರಂದು ಉಪಚುನಾವಣೆ ನಡೆಯುತ್ತಿದೆ. *ಆರ್ ಆರ್ ನಗರ ಜೆಡಿಎಸ್ ಅಭ್ಯರ್ಥಿ ಮತದಾನ 7:30-ಆರ್ ಆರ್ ನಗರ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಅವರು ಕುಟುಂಬ ಸಮೇತರಾಗಿ ಬಂದು, ಜ್ಞಾನ ಭಾರತಿ ವಾರ್ಡ್ ನಲ್ಲಿರುವ ಎಚ್ ಎಂ ಆರ್ ಶಾಲೆಯಲ್ಲಿ ಮತದಾನ ಮಾಡಿದರು. *ಮತದಾನಕ್ಕೆ 27 ಸೋಂಕಿತರು ಒಲವು ರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಯಲ್ಲಿನ 27 ಮಂದಿ ಕೊರೊನಾ ಸೋಂಕಿತರು ಉಪಚುನಾವಣೆಯಲ್ಲಿ ಮತ ಚಲಾಯಿಸಲು ಒಲವು ತೋರುತ್ತಿದ್ದಾರೆ. ಹೀಗಾಗಿ, ಇವರಿಗೆ ಮತದಾನ ಮಾಡಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.''ಕ್ಷೇತ್ರದಲ್ಲಿ 1500ಕ್ಕಿಂತ ಹೆಚ್ಚು ಸೋಂಕಿತರಿದ್ದು, ಇವರಲ್ಲಿ 148 ಮಂದಿ ಮತದಾನ ಮಾಡಲು ಒಪ್ಪಿಕೊಂಡಿದ್ದರು. ಅಂತಿಮವಾಗಿ 27 ಮಂದಿಯಷ್ಟೇ ಮತದಾನಕ್ಕೆ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ. ಆಸ್ಪತ್ರೆಗಳಲ್ಲಿರುವ 12 ಮಂದಿ ಮತ್ತು ಹೋಮ್ ಐಸೋಲೇಷನ್‌ನಲ್ಲಿರುವ 15 ಮಂದಿಗೆ ಪಿಪಿಇ ಕಿಟ್ ಒದಗಿಸಿ, ಆ್ಯಂಬುಲೆನ್ಸ್‌ಗಳಲ್ಲಿ ಮತಗಟ್ಟೆಗಳಿಗೆ ಕರೆತಂದು ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗುವುದು,'' ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು. ಮತದಾನ ಆರಂಭ *ಮತದಾನ ಪ್ರಕ್ರಿಯೆ ಬೆಳಗ್ಗೆ 7ಗಂಟೆಗೆ ಪ್ರಾರಂಭಗೊಂಡಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಆಯಾ ಪಕ್ಷದ ನಾಯಕರು ಕಾರ್ಯಕರ್ತರ ಮೂಲಕ ಸಕಲ ಪ್ರಯತ್ನವನ್ನು ನಡೆಸಿದ್ದು, ಅಂತಿಮವಾಗಿ ಮತದಾರ ಇಂದು ಯಾರಿಗೆ ಮತ ಹಾಕಿದ್ದಾರೆ ಎಂಬುದು ನವೆಂಬರ್ 10ಕ್ಕೆ ನಿರ್ಧಾರವಾಗಲಿದೆ. ಜಿಲ್ಲಾಡಳಿತ ಸಕಲ ಸಿದ್ದತೆ *ನಾಯಕರ ಅಬ್ಬರದ ಪ್ರಚಾರ, ಭರವಸೆಗಳ ಮಹಾಪೂರಾ ಎಲ್ಲವೂ ಮುಕ್ತಾಯಗೊಂಡಿದ್ದು, ಮತದಾರರು ಇಂದು ತಮ್ಮ ತೀರ್ಪು ನೀಡಲಿದ್ದಾರೆ. ಕಳೆದ 15 ದಿನಗಳಿಂದ ನಾಯಕರುಗಳ ಅಬ್ಬರವನ್ನು ನೋಡಿದ್ದ ಮತದಾರರು ಇಂದು ತಮ್ಮ ಆಟವನ್ನು ತೊರಿಸುವ ಜೊತೆಗೆ ಅಭ್ಯರ್ಥಿಗಳ ಹಣೆಬರಹವನ್ನು ಬರೆಯಲಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಇವಿಎಂ ಸೇರಲಿದೆ. ಕೊರೊನಾ ನಡುವೆ ನಡೆಯುತ್ತಿರುವ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.
| ಕ್ಷೇತ್ರ | ಪಕ್ಷ | ಅಭ್ಯರ್ಥಿ |
| ಶಿರಾ | ಕಾಂಗ್ರೆಸ್ | ಟಿ.ಬಿ. ಜಯಚಂದ್ರ |
| ಶಿರಾ | ಬಿಜೆಪಿ | ಡಾ. ರಾಜೇಶ್ ಗೌಡ |
| ಶಿರಾ | ಜೆಡಿಎಸ್ | ಅಮ್ಮಾಜಮ್ಮ |
| ಆರ್‌ಆರ್ ನಗರ | ಕಾಂಗ್ರೆಸ್ | ಎಚ್ ಕುಸುಮಾ |
| ಆರ್‌ಆರ್ ನಗರ | ಬಿಜೆಪಿ | ಮುನಿರತ್ನ |
| ಆರ್‌ಆರ್ ನಗರ | ಜೆಡಿಎಸ್ | ಕೃಷ್ಣಮೂರ್ತಿ |
from India & World News in Kannada | VK Polls https://ift.tt/2TPznA5