ಲವ್‌ ಜಿಹಾದ್‌ ಕಾನೂನಿಗೂ ಮೊದಲು ಯಾರು ಯಾರನ್ನು ಲವ್‌-ಮದುವೆಯಾಗಿದ್ದಾರೆ ಅಂತ ನೋಡಿಕೊಳ್ಳಲಿ: ಡಿಕೆ ಶಿವಕುಮಾರ್‌ ಟಾಂಗ್‌

ಉಡುಪಿ: ಲವ್‌ ಜಿಹಾದ್‌ ವಿರುದ್ಧ ಕಾನೂನು ತರುವ ಮೊದಲು ಯಾವ ಲೀಡರ್‌ ಮಕ್ಳು ಯಾರನ್ನು ಲವ್‌ ಮಾಡಿದ್ದಾರೆ, ಯಾರನ್ನು ಮದುವೆ ಮಾಡ್ಕೊಂಡಿದಾರೆ ಎನ್ನುವುದನ್ನು ತಿಳ್ಕೊಳಿ. ಈ ನಿಟ್ಟಿನಲ್ಲಿ ಕೇಂದ್ರ ಬಿಜೆಪಿಯೇ ತೀರ್ಮಾನಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಸುದ್ದಿಗಾರರ ಜತೆ ಭಾನುವಾರ ಮಾತನಾಡಿ, ಬಿಜೆಪಿ, ಕಾಂಗ್ರೆಸ್‌ ಯಾವುದೇ ಪಕ್ಷವಿದ್ದರೂ ಭಾರತದಲ್ಲಿ ಪ್ರೀತಿ, ಮದುವೆ ಎಲ್ಲವೂ ಅವರವರ ಇಚ್ಛೆ, ಹಕ್ಕು, ಧರ್ಮ. ಪ್ರೀತಿ, ವಿಶ್ವಾಸ, ಮಾನವೀಯತೆ ಅತಿ ಮುಖ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದರು. ಜನತೆಗೆ ಸತ್ಯ ತಿಳಿಸಿ! ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ‍್ಯದರ್ಶಿ ಸಂತೋಷ್‌ ಆತ್ಮಹತ್ಯೆ ಯತ್ನ ವಿಚಾರದಲ್ಲಿ ಗೃಹ ಸಚಿವರು ತನಿಖೆ ಮಾಡುವುದಾಗಿ ತಿಳಿಸಿದ್ದಾರೆ. ರಾಜಕೀಯ ಒತ್ತಡವೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂದು ಸಂತೋಷ್‌ ಪತ್ನಿ ಹೇಳಿದ್ದಾರೆ. ಪ್ರತಿಪಕ್ಷೀಯರಾಗಿ ನಾವೇನು ಕಣ್ಣು ಮುಚ್ಚಿ ಕೂರೋಕಾಗುತ್ತಾ? ರಾಜ್ಯದ ಜನತೆಗೆ ಸತ್ಯ ತಿಳಿಸೋದು ನಮ್ಮ ಜವಾಬ್ದಾರಿ. ವಿಡಿಯೋ ಬಿಡುಗಡೆ ಮಾಡುವುದಾಗಿ ನಾ ಹೇಳಿಲ್ಲ. ಸಿಎಂ ರಾಜಕೀಯ ಕಾರ‍್ಯದರ್ಶಿ ಅಂತಂದ್ರೆ ರಸ್ತೇಲಿ ಹೋಗೋರಲ್ಲ, ಸಾಮಾನ್ಯ ಕಾರ‍್ಯಕರ್ತನೂ ಅಲ್ಲ. ಬಿಜೆಪಿಯ ಎಲ್ಲ ರಾಜಕೀಯ ಬೆಳವಣಿಗೆ ವೇಳೆ ಸಂತೋಷ್‌ ಹೆಸರು ಕೇಳಿಬರುತ್ತಿದ್ದು, ಅವರ ಎಲ್ಲ ವ್ಯವಹಾರ ಗೊತ್ತು. ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ವೇಳೆ ಅವರ ಕಾರಾರ‍ಯಚರಣೆಯನ್ನೂ ನೋಡಿದ್ದೇವೆ. ಸಂಸಾರದಲ್ಲಿ ಬಿರುಕಿಲ್ಲಎಂದು ಸಂತೋಷ್‌ ಪತ್ನಿ ಹೇಳಿದ್ದಾರೆ. ಸಿಡಿ, ರೆಕಾರ್ಡ್‌ ಇತ್ತೋ, ಇಲ್ವೋ ಎಲ್ಲವೂ ತನಿಖೆಯಿಂದ ಹೊರಬರಲಿ, ಸತ್ಯ ಏನೆಂದು ತಿಳಿಯಲಿ. ಅಧಿಕಾರಕ್ಕೆ ತೊಂದರೆ, ಹೆಸರಿಗೆ ಕುಂದು ಬಂದಿರಲೂಬಹುದು ಎಂದರು. ಸಂತೋಷ್‌ ವ್ಯವಹಾರ, ರಾಜಕಾರಣದ ಗುಟ್ಟು ಏನೆಂದು ತಿಳಿಸಿ. ಕೆಲ ಬಿಜೆಪಿ ನಾಯಕರು ಸಂತೋಷ್‌ ವಿಷಯದಲ್ಲಿ ಮೈ ಪರಚಿಕೊಳ್ಳುತ್ತಿದ್ದು ಸಚಿವ ಈಶ್ವರಪ್ಪ ಮಾತಾಡಿಲ್ಲ. ಯಾರಾರ‍ಯರು ಎಲ್ಲೆಲ್ಲಿ ಏನೇನು ಕೊಟ್ಟಿದ್ದಾರೆನ್ನುವುದು ನಮಗೆ ಗೊತ್ತು. ನಮಗೆ ಅಗತ್ಯವಿಲ್ಲದ ವಿಚಾರ ಅದೆಂದು ಸುಮ್ಮನಿದ್ದೇವೆ ಎಂದರು. ರಾಜ್ಯದಲ್ಲಿ ಬಿಜೆಪಿ ಸಂಪುಟ ವಿಸ್ತರಣೆ ಕಗ್ಗಂಟು ಬಿಜೆಪಿ ಆಂತರಿಕ ವಿಚಾರ. ಅದಕ್ಕೂ ಕಾಂಗ್ರೆಸಿಗೂ ಸಂಬಂಧವಿಲ್ಲ ಎಂದ ಅವರು,ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರ ಸಭೆ ಬೆಂಗಳೂರಿನಲ್ಲಿ ನ.30ರಂದು ನಡೆಯಲಿದೆ ಎಂದರು. ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಬೀಳಲು ಡಿಕೆಶಿ ಕಾರಣ ಎಂದ ಮಾಜಿ ಸಿಎಂ ಕುಮಾರಸ್ವಾಮಿ ಏನು ಬೇಕಾದರೂ ಹೇಳಲಿ. ಕುಮಾರಸ್ವಾಮಿ ಹಿರಿಯರಿದ್ದಾರೆ. ಇಷ್ಟು ಬೇಗ ಹೇಳ್ತಿದ್ದಾರಲ್ವಾ, ಇನ್ನೂ ಏನಾದರೂ ಬಾಕಿ ಇದ್ದರೆ ಹೇಳಲಿ, ಸಂತೋಷ ಎಂದು ವ್ಯಂಗ್ಯವಾಡಿದರು.


from India & World News in Kannada | VK Polls https://ift.tt/37kETB3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...