ಲಂಚಾವತಾರದಲ್ಲಿ ಭಾರತ ಏಷ್ಯಾದಲ್ಲೇ ನಂಬರ್ 1..! ಹಣ, ಕಾಂಟ್ಯಾಕ್ಟ್ ಇಲ್ಲದಿದ್ರೆ ಕೆಲಸ ಆಗಲ್ಲ..!

ಹೊಸ ದಿಲ್ಲಿ: ಕಳೆದ 12 ತಿಂಗಳುಗಳಲ್ಲಿ ದೇಶದಲ್ಲಿ ಏರಿಕೆಯಾಗಿದೆ ಎಂದು ಶೇ. 47ರಷ್ಟು ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ. ಆದ್ರೆ, ಶೇ. 63ರಷ್ಟು ಭಾರತೀಯರು ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವಲ್ಲಿ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ. ದೇಶದ ಉದ್ದಗಲಕ್ಕೂ ನಡೆದ ಈ ಸರ್ವೆಯಲ್ಲಿ, ಉತ್ತಮ ಅಂಶಗಳು ಇಷ್ಟಕ್ಕೇ ಸೀಮಿತ..! ಏಕೆಂದರೆ, ಬ್ಯಾಡ್‌ ನ್ಯೂಸ್‌ ಮುಂದೆ ಇದೆ ನೋಡಿ… ಖಂಡದಲ್ಲೇ ಅತ್ಯಂತ ಹೆಚ್ಚು ಭ್ರಷ್ಟಾಚಾರ ಹೊಂದಿರುವ ದೇಶಗಳ ಪೈಕಿ ಮೊತ್ತ ಮೊದಲ ದೇಶವಾಗಿ ಹೊರಹೊಮ್ಮಿದೆ. ದೇಶದಲ್ಲಿ ಭ್ರಷ್ಟಾಚಾರ ಪ್ರಮಾಣ ಶೇ. 39ರಷ್ಟಿದೆ. ಸಮೀಕ್ಷೆಗಳ ಪ್ರಕಾರ, ದೇಶದಲ್ಲಿ ಶೇ. 46ರಷ್ಟು ಜನರು ‘ವೈಯಕ್ತಿಕ ಸಂಪರ್ಕ’ಗಳ ಪ್ರಭಾವ ಬೀರಿ ಸರ್ಕಾರಿ ಕೆಲಸವನ್ನು ಮಾಡಿಸಿಕೊಂಡಿದ್ದಾರೆ. ಟ್ರಾನ್ಸ್‌ಪರೆನ್ಸಿ ಇಂಟರ್‌ ನ್ಯಾಷನಲ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಕಿಅಂಶ ಹೊರಬಿದ್ದಿದೆ. ಭಾರತದಾದ್ಯಂತ ನಡೆದಿರುವ ಸರ್ವೆಗಳ ಪೈಕಿ, ಸರ್ಕಾರಿ ಕೆಲಸ ಮಾಡಿಸಿಕೊಳ್ಳಲು ಶೇ. 50ರಷ್ಟು ಜನರು ಕೊಟ್ಟಿದ್ದಾರೆ. ಈ ಪೈಕಿ ಶೇ. 32ರಷ್ಟು ಮಂದಿ ತಮ್ಮ ವೈಯಕ್ತಿಕ ಸಂಪರ್ಕವನ್ನೂ ಬಳಸಿಕೊಂಡು ಕೆಲಸ ಮಾಡಿಸಿಕೊಂಡಿದ್ದಾರೆ. ಏಷ್ಯಾದ ಭ್ರಷ್ಟ ದೇಶಗಳ ಪೈಕಿ ಕಾಂಬೋಡಿಯಾ 2ನೇ ಸ್ಥಾನದಲ್ಲಿದೆ. ಇಲ್ಲಿ ಭ್ರಷ್ಟಾಚಾರ ಪ್ರಮಾಣ ಶೇ. 37ರಷ್ಟಿದೆ. ಇಂಡೋನೇಷ್ಯಾದಲ್ಲಿ ಶೇ. 30ರಷ್ಟು ಭ್ರಷ್ಟಾಚಾರ ಪ್ರಮಾಣ ಇದ್ದರೆ, ಮಾಲ್ಡೀವ್ಸ್‌ ಹಾಗೂ ಜಪಾನ್ ಅತಿ ಕಡಿಮೆ ಭ್ರಷ್ಟಾಚಾರ ಪ್ರಮಾಣ ಹೊಂದಿದೆ. ಎರಡೂ ದೇಶಗಳಲ್ಲಿ ಭ್ರಷ್ಟಾಚಾರ ಪ್ರಮಾಣ ಕೇವಲ ಶೇ. 2ರಷ್ಟಿದೆ. ದಕ್ಷಿಣ ಕೊರಿಯಾದಲ್ಲಿ ಭ್ರಷ್ಟಾಚಾರ ಪ್ರಮಾಣ ಶೇ. 10ರಷ್ಟಿದ್ರೆ, ನೇಪಾಳದಲ್ಲಿ 12ರಷ್ಟಿದೆ. ಈ ಎಲ್ಲಾ ದೇಶಗಳು ತಮ್ಮಲ್ಲಿನ ಭ್ರಷ್ಟಾಚಾರ ನಿಗ್ರಹಕ್ಕೆ ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆ ಆಗ್ರಹಿಸಿದೆ. ಜಪಾನ್‌ ದೇಶದ ಅಂಕಿಅಂಶಗಳ ಪ್ರಕಾರ ಹೇಳಬೇಕೆಂದರೆ ಇಲ್ಲಿ ಕೇವಲ ಶೇ. 4ರಷ್ಟು ಜನರು ಮಾತ್ರ ವೈಯಕ್ತಿಕ ಸಂಪರ್ಕಗಳಿಂದ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ತಾರೆ. ಆದ್ರೆ, ಭಾರತದಲ್ಲಿ ಈ ಪ್ರಮಾಣ ಶೇ. 46ರಷ್ಟಿದೆ. ಇನ್ನು ಇಂಡೋನೇಷ್ಯಾದಲ್ಲಿ ಶೇ. 36ರಷ್ಟಿದೆ. ಇನ್ನು ವಿಶ್ವದ ಭ್ರಷ್ಟ ದೇಶಗಳ ಪೈಕಿ ಭಾರತ 80ನೇ ಸ್ಥಾನದಲ್ಲಿ ನಿಲ್ಲುತ್ತದೆ. 180 ದೇಶಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಭಾರತಕ್ಕೆ 80ನೇ ಸ್ಥಾನ ಸಿಕ್ಕಿದೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಫೋರಂನಲ್ಲಿ ಬಿಡುಗಡೆಯಾದ ಜನವರಿ ಅಂಕಿಅಂಶ ಭಾರತಕ್ಕೆ 80ನೇ ಸ್ಥಾನ ನೀಡಿದೆ. ಪೊಲೀಸ್, ಕೋರ್ಟ್‌, ಸರ್ಕಾರಿ ಆಸ್ಪತ್ರೆ, ಗುರುತಿನ ಚೀಟಿ ಪಡೆಯುವುದು ಹಾಗೂ ದೈನಂದಿನ ಕೆಲಸ ಕಾರ್ಯಗಳ ವೇಳೆ ನಡೆಯುವ ಭ್ರಷ್ಟಾಚಾರವನ್ನು ಆಧರಿಸಿ ಈ ಪಟ್ಟಿ ತಯಾರಿಸಲಾಗಿದೆ. ಕಳೆದ ಜೂನ್‌ನಿಂದ ಸೆಪ್ಟಂಬರ್‌ವರೆಗೆ ವಿಶ್ವದ 17 ದೇಶಗಳಲ್ಲಿ ಈ ನಡೆಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಭಾರತದಲ್ಲಿ ಪೊಲೀಸರ ಜೊತೆ ವ್ಯವಹರಿಸುವಾಗ ಶೇ. 42ರಷ್ಟು ಮಂದಿ ಲಂಚ ಕೊಡುತ್ತಾರಂತೆ. ಗುರುತಿನ ಚೀಟಿಯಂಥಾ ದಾಖಲೆ ಪಡೆಯುವಾಗ ಶೇ. 41ರಷ್ಟು ಮಂದಿ ಲಂಚ ಕೊಡಬೇಕಾಗಿ ಬಂದಿದೆ. ಪೊಲೀಸರ ಜೊತೆ ವ್ಯವಹರಿಸುವಾಗ ವೈಯಕ್ತಿಕ ಸಂಪರ್ಕ, ಪ್ರಭಾವ ಬಳಸುವವರ ಸಂಖ್ಯೆಯೇ ಶೇ. 39ರಷ್ಟಿದೆ. ಕೋರ್ಟ್ ವ್ಯವಹಾರಗಳ ವೇಳೆ ಶೇ. 38ರಷ್ಟು ಮಂದಿ ಲಂಚ ಕೊಟ್ಟಿದ್ದಾರಂತೆ. ಆಶಾಕಿರಣವೆಂಬಂತೆ ಶೇ. 63ರಷ್ಟು ಭಾರತೀಯರು ಲಂಚಕ್ಕೆ, ಭ್ರಷ್ಟಾಚಾರಕ್ಕೆ ಪ್ರತಿರೋಧವನ್ನೂ ಒಡ್ಡಿದ್ದಾರೆ.


from India & World News in Kannada | VK Polls https://ift.tt/3l5BuuL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...