ಹೊಸದಿಲ್ಲಿ: ಭಾರತ ತಂಡದ ಹಿರಿಯ ವೇಗಿ ಅವರ ಪತ್ನಿ ಹಸೀನ್ ಜಹಾನ್ ಅವರ ವೈಯಕ್ತಿಕ ಪೋಟೊಗಳನ್ನು ಸೋರಿಕೆ ಮಾಡುವ ಬೆದರಿಕೆ ಹಾಕಿದ್ದ ಕೋಲ್ಕತಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಸೀನ್ ಜಹಾನ್ ಅವರ ದೂರು ನೀಡಿದ ಬಳಿಕ ಕೋಲ್ಕತಾದ ಕನ್ನಿಂಗ್ ಸ್ಟ್ರೀಟ್ ರಸ್ತೆಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಸೀನ್ ಜಹಾನ್ ಅವರ ವೈಯಕ್ತಿಕ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆ ಮಾಡುವುದಾಗಿ ಕಳೆದ ಎರಡು ತಿಂಗಳುಗಳಿಂದ ಶಮಿ ಪತ್ನಿಗೆ ಬಂಧಿತ ಬೆದರಿಕೆ ಹಾಕುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಈ ಹಿಂದೆ ಹಸೀನ್ ಜಹಾನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯು ಕರೆ ಮಾಡಿ ದುಡ್ಡಿಗೆ ಆಗ್ರಹಿಸಿದ್ದಳು. ನಂತರ ಕರೆ ಮಾಡುತ್ತಿದ್ದದ್ದು ಪುರುಷ ಎಂದು ತಿಳಿದುಬಂದಿದೆ. ನಂತರ ಆ ಮಹಿಳೆಯ ಮಗ ಎಂದು ತಿಳಿದುಬಂದಿದೆ," ಎಂದು ಪೊಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. "ಆತ ಮೊದಲು ದುಡ್ಡು ನೀಡುವಂತೆ ಒತ್ತಾಯಿಸಿದ್ದಾನೆ. ಒಂದು ವೇಳೆ ದುಡ್ಡು ನೀಡದೇ ಇದ್ದಲ್ಲಿ ನಿಮ್ಮ ವೈಯಕ್ತಿಕ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮೊಬೈಲ್‌ನಲ್ಲಿ ಅಪ್‌ಲೋಡ್ ಮಾಡುತ್ತೇನೆ ಎಂದು ಶಮಿ ಪತ್ನಿಗೆ ಬೆದರಿಕೆ ಹಾಕಿದ್ದಾನೆ. ಜತೆಗೆ, ಆಕೆಯನ್ನು ಕೆಟ್ಟದಾಗಿ ನಿಂದಿಸಿದ್ದಾನೆ," ಎಂದು ಅಧಿಕಾರಿ ಹೇಳಿದ್ದಾರೆ. ಹಸೀನ್ ಜಹಾನ್ ಆರಂಭದಲ್ಲಿ ಬೆದರಿಕೆ ಕರೆಗಳನ್ನು ನಿರ್ಲಕ್ಷಿಸಲು ನಿರ್ಧರಿಸಿದ್ದರು. ಪರಿಸ್ಥಿತಿ ಮೀತಿ ಮೀರಿದ ನಂತರ ಅವರು ಪೊಲೀಸ್ ಠಾಣೆಗೆ ತೆರಳಿ ನವೆಂಬರ್ 22 ರಂದು ದೂರು ನೀಡಿದ್ದರು ಎಂದು ವರದಿಯಿಂದ ತಿಳಿದುಬಂದಿದೆ. "ಹಸೀನ್ ಜಹಾನ್ ಅವರು ಕರೆ ಸ್ವೀಕರಿಸಿದ್ದ ಎರಡೂ ನಂಬರ್‌ಗಳನ್ನು ಸ್ಕ್ಯಾನ್ ಮಾಡಲಾಗಿತ್ತು ಹಾಗೂ ಮಂಗಳವಾರ ರಾತ್ರಿ ಆರೋಪಿಯನ್ನು ಗುರುತಿಸಿದೆವು. ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿ ಮಹಿಳೆಗಾಗಿ ಶೋಧ ನಡೆಸುತ್ತಿದ್ದೇವೆ," ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕೊಲ್ಕತಾ ಮೂಲದ ಬಲಗೈ ವೇಗಿಯ ವಿರುದ್ಧ ಅವರ ವಿರಕ್ತ ಪತ್ನಿ 2018ರಲ್ಲಿ ಕೊಲೆ ಪ್ರಯತ್ನ, ವ್ಯಭಿಚಾರ, ದೈಹಿಕ ಹಲ್ಲೆ ಹಾಗೂ ಮ್ಯಾಚ್ ಫಿಕ್ಸಿಂಗ್‌ನಂತಹ ಗಂಭೀರ ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದರು. ಆದರೆ, ಈ ಯಾವ ದೂರುಗಳಲ್ಲಿಯೂ ಶಮಿ ತಪ್ಪಿತಸ್ತ ಎಂದು ಈವರೆಗೆ ಸಾಬೀತಾಗಿಲ್ಲ. ಆದರೆ, ಸೋಷಿಯಲ್ ಮೀಡಿಯಾಗಳಲ್ಲಿ ಶಮಿ ವಿರುದ್ಧ ಆಗಾಗ ಬೌನ್ಸರ್‌ಗಳನ್ನು ಹಸೀನ್ ಎಸೆಯುತ್ತಲೇ ಬಂದಿದ್ದಾರೆ. 2018ರಲ್ಲಿ ಪೊಲೀಸರಲ್ಲಿ ದೂರು ದಾಖಲಿಸಿದ್ದ ಹಸೀನ್ ಜಹಾನ್, ತಮ್ಮ ಪತಿ ಮೊಹಮ್ಮದ್ ಶಮಿ ಅಕ್ರಮ ಸಂಬಂಧಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿ ಫೇಸ್‌ಬುಕ್ ಫೋಟೊಗಳು ಮತ್ತು ವಾಟ್ಸ್‌ಆಪ್ ಚಾಟ್ ಎಲ್ಲವನ್ನೂ ಬಹಿರಂಗ ಪಡಿಸಿದ್ದರು. ಅಷ್ಟೇ ಅಲ್ಲದೆ ಶಮಿ ಮತ್ತು ಕುಟುಂಬದವರ ವಿರುದ್ಧ ದೈಹಿಕ ಹಲ್ಲೆಯ ದೂರನ್ನೂ ದಾಖಲಿಸಿದ್ದರು. ಈ ವಿಚಾರ ನ್ಯಾಯಾಲಯದಲ್ಲಿ ಇತ್ಯರ್ಥ ಆಗಿದೆಯಾದರೂ, 2019ರಲ್ಲಿ ಹಸೀನ್ ಜಹಾನ್ ಒಪ್ಪಂದ ಉಲ್ಲಂಘಿಸಿದ್ದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿದ್ದರು. ಅಮೋರ್ಹಾ ಜಿಲ್ಲೆಯ ಅಲಿಪುರ್ ಗ್ರಾಮದಲ್ಲಿರುವ ಶಮಿ ಅವರ ನಿವಾಸಕ್ಕೆ ತೆರಳಿದ್ದ ಹಸೀನ್ ಜಹಾನ್ ದಾಂಧಲೆ ನಡೆಸುವ ಮೂಲಕ ಪೊಲೀಸರ ಅತಿಥಿಯಾಗಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/364Z4DI