ಬೆಂಗಳೂರು: ರಾಜ್ಯದ ನಾನಾ ಜಿಲ್ಲೆಗಳಲ್ಲಿ ನಾನಾ ಕಂಪನಿಗಳಿಂದ ನಾನಾ ಆಮಿಷಗಳೊಂದಿಗೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸರು, ಶಿಕ್ಷಕರು ಮತ್ತು ಸರಕಾರಿ ನೌಕರರೇ ಈ ಲಾಭದ ಆಸೆಗೆ ಬಿದ್ದವರಲ್ಲಿ ಪ್ರಮುಖರು. ಮೂಲತಃ ಧಾರವಾಡ ಜಿಲ್ಲೆಯ ಮುಕ್ಕಲ ಗ್ರಾಮದ ಯಾದಗಿರಿ ಜಿಲ್ಲೆಯ ಸರಕಾರಿ ಶಾಲೆ ಶಿಕ್ಷಕರಾದ ದ್ಯಾಮಣ್ಣ ಮೇಟಿ ಹಾಗೂ ಲಕ್ಷ್ಮೇ ಮೇಟಿ ದಂಪತಿ ಸೇರಿದಂತೆ 20ಕ್ಕೂ ಹೆಚ್ಚು ಶಿಕ್ಷಕರು ವಂಚನೆಗೊಳಗಿದ್ದರು. ಒಂದೇ ವರ್ಷದಲ್ಲಿ ಮಾಡುವ ಆಸೆ ತೋರಿಸಿದ ಕಲಘಟಗಿ ಮೂಲದ ಸುರಭಿ ಟ್ರೇಡರ್ಸ್‌ಗೆ 1.5 ಕೋಟಿ ರೂ.ಗೂ ಅಧಿಕ ಹಣ ಹೂಡಿಕೆ ಮಾಡಿದ್ದರು. ಆರಂಭದಲ್ಲಿ ದ್ಯಾಮಣ್ಣ ಅವರಿಗೆ ಉತ್ತಮ ಲಾಭಾಂಶ ನೀಡಿ ನಂಬಿಸಿದ್ದರು. ಹೀಗಾಗಿ ಇವರಿಂದ ಪ್ರೇರಣೆಗೊಂಡ 20ಕ್ಕೂ ಹೆಚ್ಚು ಶಿಕ್ಷಕರು ಇವರ ಮಧ್ಯಸ್ಥಿಕೆಯಲ್ಲಿ ಹಣ ಹೂಡಿಕೆ ಮಾಡಿದ್ದರು. ಕೊನೆಗೆ ಸುರಭಿ ಟ್ರೇಡರ್ಸ್‌ನ ಫಾಹೀದ್ ನಚ್ಚಕನ್ ಹೂಡಿದ ಹಣ ಹಾಕಿಕೊಂಡು ಹೋಗಿದ್ದರಿಂದ ಮೇಟಿ ಶಿಕ್ಷಕ ದಂಪತಿ ತೀವ್ರ ಪಡಿಪಾಟಲು ಪಡಬೇಕಾಯಿತು. ಅಲ್ಲದೇ, ಕಿರಿಕಿರಿ ತಾಳಲಾರದೇ ಶಿಕ್ಷಕ ದ್ಯಾಮಣ್ಣ ಮೇಟಿ ಹೆಂಡತಿ ಮಕ್ಕಳನ್ನು ಬಿಟ್ಟು ಮನೆ ತೊರೆದು ಹೋಗಿ ಈಗ ವಾಪಸ್ ಬಂದಿದ್ದಾರೆ. ಈಗಲೂ ಸಹ ದ್ಯಾಮಣ್ಣ ಚೆಕ್‌ಬೌನ್ಸ್ ಕೇಸ್ ಎದುರಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಕಂಪನಿಯೊಂದರ 10 ಸಾವಿರ ರೂ. ಸಾಮಗ್ರಿ ಖರೀದಿಸುವ ವ್ಯವಹಾರ ನಡೆದಿತ್ತು. ಒಬ್ಬರು 10 ಸಾವಿರ ರೂ. ಪಾವತಿಸಿದ ಬಳಿಕ ಇಬ್ಬರಿಗೆ ಲಿಂಕ್ ಕೊಟ್ಟರೆ, ಮೊದಲು ಪಾವತಿಸಿದ ಹಣ ವಾಪಸ್ ಬರುತ್ತಿತ್ತು. ಆರಂಭದಲ್ಲಿ10000 ರೂ.ಗಳ ವಸ್ತುಗಳು ಸಿಗುತ್ತದೆ ಎಂಬ ಕಾರಣಕ್ಕೆ ಜನರೆಲ್ಲ ಮುಗಿಬಿದ್ದರು. ಒಳ್ಳೆಯ ಸಂದರ್ಭ ನೋಡಿ ಅಂಗಡಿ ಮಾಲೀಕ ಬೀಗ ಹಾಕಿದ್ದಾನೆ! ಇದರಿಂದ ಕೊನೆಯ ಹಂತದಲ್ಲಿ ಹಣ ಕಟ್ಟಿದವರಿಗೆ ಮೋಸ ಆಗಿದೆ. ಕೆಲ ದಿನದಿಂದ ಹಣ ಬರುತ್ತಿಲ್ಲ. ರಾಯಚೂರು ಜಿಲ್ಲೆಯಲ್ಲಿ ನಿವೃತ್ತ ಶಿಕ್ಷಕರೊಬ್ಬರು ಈ ಚೈನ್ ಲಿಂಕ್ ಹಣದ ವಹಿವಾಟು ಪರಿಚಯಿಸಿದ್ದು ಮೊದಲಿಗೆ 12 ಸಾವಿರ ರೂ. ಹೂಡಬೇಕೆಂದು ಹೇಳಿದ್ದು ಅದಕ್ಕೆ ಅವರು ಭದ್ರತಾ ರೀತಿಯಲ್ಲಿ ಚೆಕ್ ನೀಡಿದ್ದಾರೆ. ಅನೇಕರು ಹಣ ಹೂಡಿದ್ದಾರೆ. ದಿನವೂ ಅವರಿಗೆ ಹಣ ಬಂದಿದೆ. ಎರಡನೇ ಕಂತಿನ ಹಣವಾಗಿ 35 ಸಾವಿರ ರೂ. ಪಾವತಿಸಲು ಇದೇ ನಿವೃತ್ತ ಶಿಕ್ಷಕರು ತಿಳಿಸಿದ್ದು, ಅದಕ್ಕೆ ತಾವು ಭದ್ರತೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಅದರಂತೆ ಅನೇಕರು ಹಣ ಹಾಕಿದ್ದಾರೆ. ಕಳೆದ ನಾಲ್ಕು ದಿನಗಳಿಂಗ ಹಣ ದಿನವೂ ಬರುವುದು ನಿಂತಿದೆ. ಕೊಡಗಿನ ಮೂಲದ ವ್ಯಕ್ತಿಯೊಬ್ಬರು ಈ ಚೈಲ್ ಲಿಂಕ್ ಹಣದ ವ್ಯವಹಾರದ ರೂವಾರಿಯೆಂದು ಇಲ್ಲಿನ ಶಿಕ್ಷಕರು ಹೇಳಿದ್ದು, ಈ ಬಗ್ಗೆ ಮಾಹಿತಿ ನೀಡಲೂ ಶಿಕ್ಷಕರು ಹಿಂದೇಟು ಹಾಕಿದ್ದಾರೆ. ದಾಖಲಾಗದ ದೂರು ಶಿವಮೊಗ್ಗದಲ್ಲೂ ಚೈನ್‌ಲಿಂಕ್ ವ್ಯವಹಾರ ಇತ್ತೀಚಿನವರೆಗೆ ಇತ್ತು. ಸರಕಾರಿ ನೌಕರರು, ಶಿಕ್ಷಕರು, ಜನ ಸಾಮಾನ್ಯರು ತುಂಬ ಹಣ ಕಳೆದುಕೊಂಡಿದ್ದಾರೆ. ಸಂಸ್ಥೆಗಳನ್ನು ನಂಬಿ ತಮ್ಮ ಸ್ನೇಹಿತರು, ಬಂಧು ಬಳಗದವರನ್ನು ಮನವೊಲಿಸಿ ಹಣ ಹಾಕಿಸಿದವರು ಬಳಿಕ ತಮ್ಮ ಕೈಲಿಂದಲೆ ಹಣ ಕೊಟ್ಟು ಬರಿಗೈಯಾದ ಉದಾಹರಣೆಗಳಿವೆ. ಆದರೆ, ಹಣ ಕಳೆದುಕೊಂಡ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಚಿಕ್ಕಮಗಳೂರಿನಲ್ಲಿ ಚೈನ್ ಲಿಂಕ್ ಬ್ಯುಸಿನೆಸ್‌ನಲ್ಲಿ ಕೆಲವು ಪೊಲೀಸರು ಕೂಡ ಹಣ ಹಾಕಿ ಕಳೆದುಕೊಂಡಿದ್ದರು. ಮಹಿಳೆಯೊಬ್ಬರು ನಡೆಸುತ್ತಿದ್ದ ಆನ್ ಲೈನ್ ಚೈನ್ ಲಿಂಕ್‌ನಲ್ಲಿ ಕೆಲವು ಪೊಲೀಸರು ಹಣ ಹಾಕಿ ದಿಢೀರ್ ಹಣ ಗಳಿಸಲು ಪ್ರಯತ್ನಿಸಿದ್ದರು. ಆದರೆ, ಚೈನ್ ಲಿಂಕ್ ನಡೆಸುತ್ತಿದ್ದ ಮಹಿಳೆ ವಿರುದ್ಧ ಪ್ರಕರಣ ದಾಖಲಾಯಿತೇ ವಿನಾ ಹಣ ಹಾಕಿದವರ ವಿರುದ್ಧ ಯಾವುದೇ ಕ್ರಮ ಜರುಗಿಸಲಿಲ್ಲ.
from India & World News in Kannada | VK Polls https://ift.tt/3l3knd3