ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಓಡಿಐಗೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI ಇಂತಿದೆ..

ಹೊಸದಿಲ್ಲಿ: ಅಂತಾರಾಷ್ಟ್ರೀಯ ಸ್ಪರ್ಧೆಯಿಂದ ದೀರ್ಘಾವಧಿ ದೂರ ಉಳಿದಿದ್ದ ಟೀಮ್‌ ಇಂಡಿಯಾ ಶುಕ್ರವಾರ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಒಡಿಐ ಸರಣಿಯ ಮೊದಲನೇ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲು ಸಿದ್ದವಾಗಿದೆ. ಆದರೆ, ಟೀಮ್‌ ಇಂಡಿಯಾಗೆ ಕೀ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಅನುಪಸ್ಥಿತಿ ಕಾಡುತ್ತಿದೆ. ಆರೋನ್‌ ಫಿಂಚ್‌ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದು, ಪ್ಯಾಟ್‌ ಕಮಿನ್ಸ್ ಉಪ ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್‌ ರಾಹುಲ್‌ ಭಾರತ ತಂಡದ ಉಪ ನಾಯಕನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಕೊನೆಯ ಸೀಮಿತ ಓವರ್‌ಗಳ ಸರಣಿ ಆಡಿತ್ತು ಹಾಗೂ ನಂತರ ತಂಡದ ಬಹುತೇಕ ಆಟಗಾರರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಭಾಗವಹಿಸಿದ್ದರು. ಇನ್ನು ಭಾರತ ತಂಡ ಪ್ರಸಕ್ತ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್‌ ಪ್ರವಾಸ ಕೈಗೊಂಡಿತ್ತು. ಇದಾದ ಬಳಿಕ ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಜನವರಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ವಿರಾಟ್‌ ಕೊಹ್ಲಿ ನಾಯಕತ್ವ ಭಾರತ 2-1 ಅಂತರದಲ್ಲಿ ಏಕದಿನ ಸರಣಿಯಲ್ಲಿ ಗೆಲುವು ಸಾಧಿಸಿತ್ತು. ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಬಲಿಷ್ಠ ಎದುರಾಳಿಗಳಾಗಿರುವುದರಿಂದ ಕ್ರಿಕೆಟ್‌ ಅಭಿಮಾನಿಗಳಿಗೆ ಈ ಕಾದಾಟವನ್ನು ಕಣ್ತುಂಬಿಸಿಕೊಳ್ಳಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸಿಡ್ನಿ ಕ್ರಿಕೆಟ್‌ ಕ್ರಿಡಾಂಗಣದಲ್ಲಿ ಶುಕ್ರವಾರ ಮೊದಲನೇ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಪಂದ್ಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರ ಇಲ್ಲಿದೆ ನೋಡಿ..


ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಓಡಿಐಗೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI ಇಂತಿದೆ..

ಹೊಸದಿಲ್ಲಿ:

ಅಂತಾರಾಷ್ಟ್ರೀಯ ಸ್ಪರ್ಧೆಯಿಂದ ದೀರ್ಘಾವಧಿ ದೂರ ಉಳಿದಿದ್ದ ಟೀಮ್‌ ಇಂಡಿಯಾ ಶುಕ್ರವಾರ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಒಡಿಐ ಸರಣಿಯ ಮೊದಲನೇ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲು ಸಿದ್ದವಾಗಿದೆ. ಆದರೆ, ಟೀಮ್‌ ಇಂಡಿಯಾಗೆ ಕೀ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಅನುಪಸ್ಥಿತಿ ಕಾಡುತ್ತಿದೆ.

ಆರೋನ್‌ ಫಿಂಚ್‌ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದು, ಪ್ಯಾಟ್‌ ಕಮಿನ್ಸ್ ಉಪ ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್‌ ರಾಹುಲ್‌ ಭಾರತ ತಂಡದ ಉಪ ನಾಯಕನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಕೊನೆಯ ಸೀಮಿತ ಓವರ್‌ಗಳ ಸರಣಿ ಆಡಿತ್ತು ಹಾಗೂ ನಂತರ ತಂಡದ ಬಹುತೇಕ ಆಟಗಾರರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಭಾಗವಹಿಸಿದ್ದರು. ಇನ್ನು ಭಾರತ ತಂಡ ಪ್ರಸಕ್ತ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್‌ ಪ್ರವಾಸ ಕೈಗೊಂಡಿತ್ತು. ಇದಾದ ಬಳಿಕ ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಜನವರಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ವಿರಾಟ್‌ ಕೊಹ್ಲಿ ನಾಯಕತ್ವ ಭಾರತ 2-1 ಅಂತರದಲ್ಲಿ ಏಕದಿನ ಸರಣಿಯಲ್ಲಿ ಗೆಲುವು ಸಾಧಿಸಿತ್ತು. ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಬಲಿಷ್ಠ ಎದುರಾಳಿಗಳಾಗಿರುವುದರಿಂದ ಕ್ರಿಕೆಟ್‌ ಅಭಿಮಾನಿಗಳಿಗೆ ಈ ಕಾದಾಟವನ್ನು ಕಣ್ತುಂಬಿಸಿಕೊಳ್ಳಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.



​ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌
​ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌

ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಶಿಖರ್‌ ಧವನ್‌ ಹಾಗೂ ಮಯಾಂಕ್‌ ಅಗರ್ವಾಲ್‌ ಆರಂಭಿಕರಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಮೂರನೇ ಕ್ರಮಾಂಕದಲ್ಲಿ ಎಂದಿನಿಂತೆ ವಿರಾಟ್‌ ಕೊಹ್ಲಿ ಆಡಿದರೆ, ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಬ್ಯಾಟ್‌ ಬೀಸಲಿದ್ದಾರೆ. ಇನ್ನು ಕೆ.ಎಲ್‌ ರಾಹುಲ್‌ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ.

ಗಾಯದಿಂದ ದೀರ್ಘ ಕಾಲ ಟೀಮ್‌ ಇಂಡಿಯಾದಿಂದ ಹೊರಗುಳಿದಿದ್ದ ಹಾರ್ದಿಕ್‌ ಪಾಂಡ್ಯ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ರವೀಂದ್ರ ಜಡೇಜಾ ಸ್ಪಿನ್‌ ಆಲ್‌ರೌಂಡರ್‌ ಆಗಿ ಅಂತಿಮ 11 ರಲ್ಲಿ ಅವಕಾಶವನ್ನು ಪಡೆಯಲಿದ್ದಾರೆ. ಯುಜ್ವೇಂದ್ರ ಚಹಲ್‌, ಮೊಹಮ್ಮದ್‌ ಶಮಿ ಹಾಗೂ ಜಸ್‌ಪ್ರಿತ್‌ ಬುಮ್ರಾ ಅವರು ಕೂಡ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾರ್ದೂಲ್‌ ಠಾಕೂರ್‌ ಅಥವಾ ನವದೀಪ್ ಸೈನಿ ಇವರಲ್ಲಿ ಒಬ್ಬರು ಮೂರನೇ ವೇಗಿಯಾಗಿ ಆಡಬಹುದು.

ಭಾರತ:

ಮಯಾಂಕ ಅಗರ್ವಾಲ್‌, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್, ಕೆ.ಎಲ್‌ ರಾಹುಲ್‌ (ವಿ,ಕೀ), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್‌/ನವದೀಪ್‌ ಸೈನಿ, ಯುಜ್ವೇಂದ್ರ ಚಹಲ್‌, ಮೊಹಮ್ಮದ್‌ ಶಮಿ ಹಾಗೂ ಜಸ್‌ಪ್ರಿತ್‌ ಬುಮ್ರಾ.

ಓಪನರ್‌ ಆಗಿ ಆಡಿದರೆ ರಾಹುಲ್‌ ಒಡಿಐನಲ್ಲೂ ದ್ವಿಶತ ಸಿಡಿಸುತ್ತಾರೆ: ಆಕಾಶ್ ಚೋಪ್ರಾ!



​ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌
​ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌

ಆಸ್ಟ್ರೇಲಿಯಾ ಪರ ದೀರ್ಘಾವಧಿಯಿಂದ ಆರಂಭಿಕರಾಗಿ ಆಡುತ್ತಿರುವ ಡೇವಿಡ್‌ ವಾರ್ನರ್‌ ಹಾಗೂ ನಾಯಕ ಆರೋನ್‌ ಫಿಂಚ್‌ ಮುಂದುವರಿಯಲಿದ್ದಾರೆ. ಸ್ಟೀವನ್‌ ಸ್ಮಿತ್‌ ಹಾಗೂ ಮಾರ್ನಸ್‌ ಲಾಬುಶೇನ್‌ ಕ್ರಮವಾಗಿ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್‌ ಸ್ಟೋಯ್ನಿಸ್‌ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್‌ ಆಡಲಿದ್ದಾರೆ. ಅಲೆಕ್ಸ್ ಕೇರಿ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ಪ್ಯಾಟ್‌ ಕಮಿನ್ಸ್, ಮಿಚೆಲ್‌ ಸ್ಟಾರ್ಕ್‌ ಹಾಗೂ ಜಾಶ್‌ ಹೇಜಲ್‌ವುಡ್‌ ವೇಗಿಗಳಾಗಿ ಅಂತಿಮ 11ರಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನೂ ಸ್ಪಿನ್‌ ವಿಭಾಗವನ್ನು ಆಡಂ ಝಂಪಾ ಮುನ್ನಡೆಸಲಿದ್ದು, ಮ್ಯಾಕ್ಸ್‌ವೆಲ್ ಕೆಲ ಓವರ್‌ಗಳು ಸ್ಪಿನ್‌ ಮಾಡಬಹುದು.

ಆಸ್ಟ್ರೇಲಿಯಾ:

ಡೇವಿಡ್‌ ವಾರ್ನರ್‌, ಆರೋನ್‌ ಫಿಂಚ್‌ (ನಾಯಕ), ಸ್ಟೀವನ್‌ ಸ್ಮಿತ್‌, ಮಾರ್ನಸ್‌ ಲಾಬುಶೇನ್‌, ಮಾರ್ಕಸ್‌ ಸ್ಟೋಯ್ನಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಅಲೆಕ್ಸ್ ಕೇರಿ (ವಿ.ಕೀ), ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜಾಶ್‌ ಹೇಜಲ್‌ವುಡ್‌ ಹಾಗೂ ಆಡಂ ಝಂಪಾ

ಎಂಎಸ್‌ ಧೋನಿಯಾಗಲು ಯಾರಿಂದಲ್ಲೂ ಸಾಧ್ಯವಿಲ್ಲ ಎಂದ ಕೆಎಲ್ ರಾಹುಲ್!



​ಪಿಚ್‌ ರಿಪೋರ್ಟ್, ವಾತಾವರಣ
​ಪಿಚ್‌ ರಿಪೋರ್ಟ್, ವಾತಾವರಣ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದ ದಿನ(ಶುಕ್ರವಾರ) ಬಹುತೇಕ ಬಿಸಿಲು ಇರಲಿದೆ. ಅಲ್ಲದೆ, ಪಂದ್ಯದ ಸಮಯ 24 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿರಲಿದೆ. ಈ ಹಿನ್ನೆಲೆಯಲ್ಲಿ ಮಳೆ ಬರುವ ಸಂಭವ ತೀರಾ ವಿರಳ. ಇನ್ನೂ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದ ವಿಕೆಟ್‌ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡಕ್ಕೂ ಸಹಕರಿಸಲಿದೆ. ಸ್ಪಿನ್ನರ್‌ಗಳಿಗಿಂತ ವೇಗಿಗಳಿಗೆ ಇಲ್ಲಿನ ವಿಕೆಟ್‌ ನೆರವಾಗಲಿದೆ. ಸ್ಪಿನ್ನರ್‌ಗಳಿಗೆ ಹೆಚ್ಚಿನ ತಿರುವನ್ನು ನೀಡಬಹುದು.

ಬ್ಯಾಟ್ಸ್‌ಮನ್‌ಗಳು ದೊಡ್ಡ ಹೊಡೆತಗಳನ್ನು ಕೈ ಹಾಕುವ ಮೊದಲು ಕೆಲವೊತ್ತು ಕ್ರೀಸ್‌ನಲ್ಲಿ ನೆಲೆಯೂರಬೇಕಾಗಿದೆ. 260 ರಿಂದ 270 ರನ್‌ಗಳು ದಾಖಲಾಗುವು ಸಾಧ್ಯತೆ ಇದೆ.

ಐಪಿಎಲ್‌ನಲ್ಲಿ ಅನುಭವಿಸಿದ ಬ್ಯಾಟಿಂಗ್‌ ವೈಫಲ್ಯಕ್ಕೆ ಕೊನೆಗೂ ಕಾರಣ ಕೊಟ್ಟ ಸ್ಮಿತ್!



​ಪಂದ್ಯದ ವಿವರ
​ಪಂದ್ಯದ ವಿವರ

ಪಂದ್ಯ: ಭಾರತ vs ಆಸ್ಟ್ರೇಲಿಯಾ

ದಿನಾಂಕ: ನ.27, 2020 (ಶುಕ್ರವಾರ)

ಸಮಯ: ಬೆಳಗ್ಗೆ 09: 00 (ಭಾರತೀಯ ಕಾಲಮಾನ)

ಸ್ಥಳ: ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣ, ಸಿಡ್ನಿ

ಮುಖಾಮುಖಿ ದಾಖಲೆ(ಒಟ್ಟಾರೆ)

ಒಟ್ಟು ಪಂದ್ಯಗಳು: 140

ಭಾರತ (ಜಯ): 52

ಆಸ್ಟ್ರೇಲಿಯಾ (ಜಯ): 78

ರದ್ದು: 10

ಮುಖಾಮುಖಿ ದಾಖಲೆ(ಆಸ್ಟ್ರೇಲಿಯಾದಲ್ಲಿ)

ಒಟ್ಟು ಪಂದ್ಯಗಳು: 96

ಭಾರತ (ಜಯ): 39

ಆಸ್ಟ್ರೇಲಿಯಾ (ಜಯ): 51

ರದ್ದು: 6

ವಿರಾಟ್‌ ಕೊಹ್ಲಿಗೆ ಯಾವುದೇ ತಾಂತ್ರಿಕ ದೌರ್ಬಲ್ಯವಿಲ್ಲ ಎಂದ ಆಸೀಸ್‌ ಮಾಜಿ ವೇಗಿ!





from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37fUVfQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...