ಟೆಹ್ರನ್: ಉನ್ನತ ಪರಮಾನು ವಿಜ್ಞಾನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ, ಸರ್ವೋಚ್ಛ ನಾಯಕ ಗುಡುಗಿದ್ದಾರೆ. ನಮ್ಮ ಪರಮಾಣು ವಿಜ್ಞಾನಿಯನ್ನು ಕೊಂದಿರುವ ದುಷ್ಟ ಶಕ್ತಿಗಳ ವಿರುದ್ಧ ಪ್ರತೀಕಾರ ಕಟ್ಟಿಟ್ಟ ಬುತ್ತಿ ಎಂದಿರುವ ಖಮೇನಿ, ಇಂತಹ ಕೃತ್ಯಗಳು ಇರಾನ್ನ ಮನೋಬಲವನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾಡೆ ಅವರ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಎಂದಿರುವ ಅಲಿ ಖಮೇನಿ, ಅವರ ಕೆಲಸವನ್ನು ಮುಂದುವರೆಸಿ ಇರಾನ್ನನ್ನು ಸದೃಢವನ್ನಾಗಿಸುವ ಮೂಲಕ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುವುದಾಗಿ ಹೇಳಿದರು. ಮೊಹ್ಸೆನ್ ಫಕ್ರಿಜಾಡೆ ಹತ್ಯೆಗೆ ಸ ಊಕ್ತ ಸಮಯದಲ್ಲಿ ಪ್ತತೀಕಾರ ತೀರಿಸಿಕೊಳ್ಳಲಾಗುವುದು ಎಂದಿರುವ ಖಮೇನಿ, ಇರಾನ್ ಮಣ್ಣಿನ ದೀಋ ಪುತ್ರನ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೊಹ್ಸೆನ್ ಫಕ್ರಿಜಾಡೆ ಅವರ ಹತ್ಯೆಗೆ ಈಗಾಗಲೇ ಹಾಗೂ ಅಮೆರಿಕದತ್ತ ಬೊಟ್ಟು ಮಾಡಿರುವ ಇರಾನ್, ಇದೀಗಪ್ರತೀಕಾದ ಮಾತುಗಳನ್ನಾಡುತ್ತಿರುವುದು ಕುತೂಹಲ ಕೆರಳಿಸಿದೆ. ಅದರಲ್ಲೂ ಇಸ್ರೇಲ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಖಮೇನಿ, ಅಮೆರಿಕದಲ್ಲಿ ಬಿಡೆನ್ ಅಧಿಕಾರಕ್ಕೆ ಬಂದಿರುವುದರಿಂದ ಅಮೆರಿಕ-ಇರಾನ್ ನಡುವೆ ಸಂಬಂಧ ಸುಧಾರಿಸಬಹುದು ಎಂಬ ಕಾರಣಕ್ಕೆ ಇಸ್ರೇಲ್ ಈ ನೀಚ ಕೃತ್ಯ ಎಸಗಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.
from India & World News in Kannada | VK Polls https://ift.tt/3qe1wA6