ಕಣ್ಣು ತುಂಬಿಸಿದ ಬಣ್ಣದ ಮೀನು: ಮೊಗವೀರ ಮಹಿಳೆಯ ಬದುಕಿನ ಚಿತ್ರ

ಮಂಗಳೂರು: ಕರಾವಳಿಯಲ್ಲಿ ಮೀನುಗಾರಿಕೆಗೆ ಮೊಗವೀರರ ಕೊಡುಗೆ ಪ್ರಮುಖವಾದದ್ದು. ಬಹು ಮುಖ್ಯವಾಗಿ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡ ಇವರು ಸಮುದ್ರದಲ್ಲಿ ಕೆಲಸ ಮಾಡುವ ಇವರ ಶ್ರಮಕ್ಕೆ ಬೆಲೆ ಕಟ್ಟಲಾಗದು. ನಗರದ ಕಲಾವಿದರ ತಂಡ ಮೊಗವೀರ ಸಮುದಾಯಕ್ಕೆ ಸಂದೇಶ ಸಾರುವ ನಿಟ್ಟಿನಲ್ಲಿ ಉರ್ವ ಮಾರ್ಕೆಟ್ ಬಳಿಯ ಕಟ್ಟಡವೊಂದರ ಗೋಡೆಯಲ್ಲಿ ಮೀನು ಮಾರಾಟ ಮಾಡುವ ಮಹಿಳೆಯ ಚಿತ್ರವೊಂದನ್ನು ರಚಿಸಿ ಇದೀಗ ಎಲ್ಲರ ಗಮನವನ್ನು ಕೇಂದ್ರಿಕರಿಸಿದೆ. ಮಂಗಳೂರಿನ 'ಫಿಕ್ಸೆನ್ಸಿಲ್' ಚಿತ್ರ ಕಲಾವಿದರ ತಂಡ, ಸಮೀಪದ ಕಟ್ಟಡವೊಂದರ ವಿಶಾಲ ಗೋಡೆಯಲ್ಲಿ ಮೀನು ಮಾರಾಟದ ಭಂಗಿಯಲ್ಲಿರುವ ಮಹಿಳೆಯೊಬ್ಬರ ಬೃಹತ್ ಚಿತ್ರ ಬಿಡಿಸುವ ಮೂಲಕ ಜನಮನ ಸೆಳೆದಿದೆ. ವಿಭಿನ್ನ ಆಲೋಚನೆ, ವಿನೂತನ ವಿಶೇಷ ಚಿತ್ರಕಲಾ ಶೈಲಿಯನ್ನು ಮೈಗೂಡಿಸಿಕೊಂಡಿರುವ ಈ 'ಫಿಕ್ಸೆನ್ಸಿಲ್' ಕಲಾ ತಂಡದಲ್ಲಿ ಪೃಥ್ವಿರಾಜ್ ಮರೋಳಿ ಜಯನಗರ, ಅಭಿಜಿತ್ ಬಿಜೈ, ಅಜೀಶ್ ಸಜಿಪಮೂಡ, ನಿತೇಶ್ ಕನ್ಯಾಡಿ ಮತ್ತಿತರ ಕಲಾ ಸಂಪನ್ನರಿದ್ದಾರೆ. ಕರ್ನಾಟಕದ ಕರಾವಳಿ ಪ್ರದೇಶದ ಮೊಗವೀರ ಸಮುದಾಯದ ಪ್ರಮು ಖ ವೃತ್ತಿ ಮೀನುಗಾರಿಕೆ. ಅವರು ಮೀನುಗಾರಿಕೆ ಮತ್ತು ಸಮುದ್ರ ವ್ಯಾಪಾರದಲ್ಲಿ ತೊಡಗಿಕೊಂಡವರು. ಅವರು ತುಳುನಾಡಿನಲ್ಲಿರುವ ಜನಾಂಗೀಯ ಗುಂಪುಗಳಲ್ಲಿ ದೊಡ್ಡ ಸಮುದಾಯ. ಮೊಗವೀರ ಸಮಾಜದ ಮೂಲ ವೃತ್ತಿಯಾದ ಮೀನುಗಾರಿಕೆಯಿಂದಲೇ ಇವರ ಬದುಕು. ಗಂಡ ಬೋಟಿನಲ್ಲಿ ದುಡಿದರೆ, ಪತ್ನಿ ಸಮುದ್ರದ ಆಳದಿಂದ ತಂದ ಮೀನನ್ನು ಬುಟ್ಟಿ ತುಂಬಾ ಮಾರಾಟ ಮಾಡಿ ಸಂಸಾರದ ನೊಗಕ್ಕೆ ಹೆಗಲು ನೀಡುತ್ತಾಳೆ. ಯುವಕರ ತಂಡ ರಚಿಸಿದ ಈ ಚಿತ್ರವು ಹಲವು ವರ್ಷಗಳಿಂದ ಮೀನು ಮಾರಾಟ ಮಾಡುವ ಹಿರಿಯ ಮಹಿಳೆಯ ಚಿತ್ರವಾಗಿದ್ದು, ಮೊಬೈಲ್ ನಲ್ಲಿ ತೆಗೆದ ಪೋಟೋವನ್ನು ನೋಡಿ ಗೋಡೆಯಲ್ಲಿ ಚಿತ್ರ ಬಿಡಿಸಲಾಗಿದೆ. ಹೊಸ ಶೈಲಿ ನಿರ್ಮಾಣ ಮಾಡುವ ಉದ್ದೇಶದಿಂದ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರಗಳನ್ನು ಅಲ್ಲಲ್ಲಿ ಮಾಡುತ್ತಿದ್ದೇವೆ. ಒಂದೊಂದು ಕಡೆಯಲ್ಲಿ ಹೊಸ ಹೊಸ ಪರಿಕಲ್ಪನೆಯೊಂದಿಗೆ ಚಿತ್ರವನ್ನು ಬಿಡಿಸುತ್ತಿದ್ದೇವೆ ಎನ್ನುತ್ತಾರೆ ಕಲಾವಿದರು. ಐದು ಕಲಾವಿದ ಸ್ನೇಹಿತರ ಗುಂಪಾಗಿರುವ ಪಿಕ್ಸ್‌ನ್ಸಿಲ್, ತಮ್ಮ ಕೆಲಸದ ಮೂಲಕ ಕಲೆ, ಪ್ರಾದೇಶಿಕ ಇತಿಹಾಸ ಮತ್ತು ಸಾಮಾಜಿಕ ಸಂದೇಶವನ್ನು ಹಂಚಿಕೊಳ್ಳಲು ಮಂಗಳೂರಿನ ಸುತ್ತಲೂ ಭಿತ್ತಿಚಿತ್ರಗಳನ್ನು ಚಿತ್ರಿಸುತ್ತಿದ್ದಾರೆ. ಮಂಗಳೂರಿನ ಜನಜಂಗುಳಿಯ ಉರ್ವ ಮಾರುಕಟ್ಟೆ ಜಂಕ್ಷನ್‌ನಲ್ಲಿ ಒಂದು ಗೋಡೆಯ ಮೇಲೆ ಈ ಚಿತ್ರವನ್ನು ರಚಿಸಲಾಗಿದ್ದು, ಎರಡೇ ದಿನದಲ್ಲಿ ಈ ಚಿತ್ರ ಸಿದ್ದವಾಗಿ, ನೋಡುಗರ ಕಣ್ಮನ ಸೆಳೆಯುತ್ತಿದೆ. ಚಿತ್ರ ನೋಡಿದ ಮೀನುಗಾರರ ಮುಖದಲ್ಲೂ ಮಂದಹಾಸ ಮೂಡಿದೆ. "ಉರ್ವ ಮೀನು ಮಾರುಕಟ್ಟೆಗೆ ಹೆಸರುವಾಸಿಯಾಗಿದೆ, ಆದ್ದರಿಂದ ನಾವು ಈ ಚಿತ್ರವನ್ನು ಮಾಡಲು ನಿರ್ಧರಿಸಿದಾಗ ಮೊಗವೀರ (ಮೀನುಗಾರ) ಸಮುದಾಯವನ್ನು ಹೈಲೈಟ್ ಮಾಡಲು ನಿರ್ಧಾರ ಮಾಡಿದೆವು ಎಂದು ಮಂಗಳೂರಿನ 28 ವರ್ಷದ ಕಲಾವಿದ ಪೃಥ್ವಿ ರಾಜ್ ಹೇಳುತ್ತಾರೆ. ನಗರದಲ್ಲಿ ಹಲವು ಸಮುದಾಯದವರು ಮೀನು ಮಾರಾಟ ವೃತ್ತಿಯನ್ನು ಮಾಡುತ್ತಾರೆ. ಆದರೆ ಅವರಿಗೆ ಪ್ರದೇಶದ ಇತಿಹಾಸದೊಂದಿಗೆ ಆಳವಾಗಿ ಸಂಬಂಧಿಸಿರುವ ಸಮುದಾಯ ಅಥವಾ ಅದರ ಸಂಪ್ರದಾಯಗಳ ಪರಿಚಯವಿಲ್ಲ ಎಂದರು. ಚಿತ್ರದ ಚಿತ್ತಾರದ ಮೂಲಕ ಸಮಾಜಮುಖಿ, ಜೀವನ್ಮುಖಿ ಸಂದೇಶ ಸಾರುವ ಸೇವಾ ಕೈಂಕರ್ಯದಲ್ಲಿ ತೊಡಗಿರುವ ಸಹೃದಯಿ ಯುವಕರ ತಂಡದ ಹೊಸತನದ ಸಾಧನೆಯ ಚಿತ್ರಣ, ನಾನಾ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.


from India & World News in Kannada | VK Polls https://ift.tt/3fHO9TJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...