ಹೊಸದಿಲ್ಲಿ: ಪ್ರಕೃತಿಯನ್ನು ನೋಡುವ ಮಾನವನ ದೃಷ್ಟಿಯನ್ನು ಹಾವಳಿ ಬದಲಾಯಿಸಿದೆ ಎಂದು ಹೇಳಿದ್ದಾರೆ. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ವೈರಸ್ ಹಾವಳಿಯಿಂದಾಗಿ ಮಾನವನಲ್ಲಿ ಪ್ರಕೃತಿ ಕಾಪಾಡುವ ಜವಾಬ್ದಾರಿಯ ಉದ್ದೀಪನವಾಗಿದೆ ಎಂದು ಹೇಳಿದರು. ಪ್ರಧಾನಿ ಮೋದಿ ಭಾಷಣದ ಅಂಶಗಳು: * ಕೊರೊನಾ ಕಾಲದಲ್ಲಿ ಪ್ರಕೃತಿಯ ಮಹತ್ವದ ಅರಿವು ಮೂಡಿದೆ ಎಂದ ಪ್ರಧಾನಿ. * ಪುರಾತನ ಅನ್ನಪೂರ್ಣ ದೇವಿ ಪ್ರತಿಮೆಯನ್ನು ಕೆನಡಾದಿಂದ ಭಾರತಕ್ಕೆ ಮರಳಿ ತರಲಾಗಿದೆ. * ಅನ್ನಪೂರ್ಣ ದೇವಿ ಪ್ರತಿಮೆ ಭಾರತಕ್ಕೆ ಮರಳಿರುವುದು ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವಂತಾಗಿದೆ. * ಭಾರತದ ಸಂಸ್ಕೃತಿ ಮತ್ತು ಧರ್ಮಗ್ರಂಥವು ಯಾವಾಗಲೂ ಇಡೀ ಜಗತ್ತನ್ನು ಆಕರ್ಷಿಸಿದೆ ಎಂದ ಪ್ರಧಾನಿ. * ಹಲವು ವಿದೇಶಿಯರು ಭಾರತಕ್ಕೆ ಬಂದು ಜ್ಞಾನ ಸಂಪಾದಿಸಿ ಅದನ್ನು ಜಗತ್ತಿಗೆ ಹರಡಿಸಿದ್ದಾರೆ. *ಭಾರತದ ತಂತ್ರಜ್ಞಾನ ಜ್ಞಾನವನ್ನೂ ಇದೀಗ ಜಗತ್ತಿಗೆ ಪಸರಿಸುವ ಸಮಯ ಬಂದಿದೆ ಎಂದ ಮೋದಿ. *ಲೋಕಲ್ ಫಾರ್ ವೋಕಲ್ ಯೋಜನೆಯನ್ನು ಮತ್ತೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ. * ಕೇಂದ್ರದ ಕೃಷಿ ಕಾನೂನುಗಳು ರೈತಪರ ಎಂದು ಸಮರ್ಥಿಸಿದ ಪ್ರಧಾನಿ ಮೋದಿ. * ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಬೇಜವಾಬ್ದಾರಿಗೆ ಸ್ಥಾನವಿಲ್ಲ ಎಂದ ಪ್ರಧಾನಿ. ಹೀಗೆ ಪ್ರಧಾನಿ ಮೋದಿ ಇಂದಿನ(ನ.29-ಭಾನವಾರ) ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಲವು ವಿಷಯಗಳತ್ತ ಬೆಳಕು ಚೆಲ್ಲಿದರು.
from India & World News in Kannada | VK Polls https://ift.tt/3mkedqq