ಬಿಹಾರ ವಿಧಾನಸಭೆ ಚುನಾವಣೆ 2020: 94 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಆರಂಭ!

ಪಾಟ್ನಾ: ದೇಶದ ಗಮನ ಸೆಳೆದಿರುವ ಬಿಹಾರ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಆರಂಭವಾಗಿದೆ. 17 ಜಿಲ್ಲೆಗ 94 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿದೆ. ಇಂದಿನ ಮತದಾನ ಎಲ್ಲಾ ಪಕ್ಷಗಳಿಗೂ ಪ್ರಮುಖವಾಗಿದ್ದು ಬಿಹಾರದಲ್ಲಿ ಮುಂದಿನ ಸರಕಾರ ಯಾರದ್ದು ಅನ್ನೋದನ್ನ ಈ ಹಂತವೇ ನಿರ್ಧರಿಸಲಿದೆ. ಮಂಗಳವಾರ 2.86 ಕೋಟಿ ಮತದಾರರು 1463 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಇನ್ನು ಕೊರೊನಾ ಹಿನ್ನೆಲೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಇದೇ 94 ಕ್ಷೇತ್ರಗಳ ಪೈಕಿ ಆರ್‌ಜೆಡಿಯ ತೇಜಸ್ವಿ ಯಾದವ್‌ ಹಾಗೂ ತೇಜ್‌ ಪ್ರತಾಪ್‌ ಯಾದವ್‌ ಅವರ ವಿಧಾನ ಸಭಾ ಕ್ಷೇತ್ರಗಳಿಗೂ ಇಂದು ಮತದಾನ ನಡೆಯಲಿದೆ. ಹೀಗಾಗಿ ಇಂದಿನ ಮತದಾನದ ಸಂಬಂಧ ಭಾರೀ ಕುತೂಹಲ ಕೆರಳಿದೆ. ಅಲ್ಲದೇ ಉಭಯ ನಾಯಕರ ರಾಜಕೀಯ ಭವಿಷ್ಯ ಇಂದು ಮತ ಪೆಟ್ಟಿಗೆ ಸೇರಲಿದೆ. ಸಿಎಂ ನಿತೀಶ್‌ ಕುಮಾರ್‌ಗೆ ಅಖಾಡದಲ್ಲಿ ಭಾರೀ ಠಕ್ಕರ್‌ ನೀಡುತ್ತಿರುವ ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್‌ ಮತದಾನ ಮಾಡಿದ್ದಾರೆ. ರಾಘೊಪುರ್‌ನ ಶಾಲೆಯಲ್ಲಿ ತನ್ನ ಕರ್ತವ್ಯ ನಿರ್ವಹಿಸಿದ್ದಾರೆ. ಮತದಾನಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಕೊರೊನಾ ಮುಂಜಾಗ್ರತಾ ಕ್ರಮಗಳ ಮೂಲದ ವೋಟ್‌ ಮಾಡುತ್ತಿರುವ ಮತದಾರರು ದಿಗಾ ಮತಗಟ್ಟೆಯಲ್ಲಿ ಸ್ಯಾನಿಟೈಸ್‌ ಸೇರಿ ಕೊರೊನಾ ಹಿನ್ನೆಲೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಾಗೂ ರಾಜ್ಯಪಾಲ ಫಾಗು ಚೌಹಾಣ್‌ ಇದೇ ಮತಗಟ್ಟೆಯಲ್ಲಿ ಮತ ಚಲಾಯಿಸಲಿದ್ದಾರೆ. ಹೀಗಾಗಿ ಈ ಮತಗಟ್ಟೆ ಪ್ರಮುಖ ಆಕರ್ಷಣೀಯ ಮತಗಟ್ಟೆಯಾಗಿ ಬದಲಾಗಿದೆ. ಪಕ್ಷಗಳ ಸ್ಪರ್ಧೆ ಎಲ್ಲೆಲ್ಲಿ..? ಮಂಗಳವಾರ ಬಿಜೆಪಿ 46 ಕ್ಷೇತ್ರಗಳಲ್ಲಿ ಅದರ ಮಿತ್ರ ಪಕ್ಷ ಜೆಡಿಯು 43 ಕ್ಷೇತ್ರಗಳಲ್ಲಿ ಅಖಾಡಕ್ಕಿಳಿದಿದೆ. ಮತ್ತೊಂದು ಮಿತ್ರ ಪಕ್ಷ ವಿಐಪಿ 5 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಇನ್ನು ಮಹಾಘಟಬಂಧನ್‌ನ ಆರ್ ಜೆಡಿ 56, ಕಾಂಗ್ರೆಸ್ 24 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಸಿಪಿಐಎಂಎಲ್ 6 ಕ್ಷೇತ್ರ, ಸಿಪಿಎಂ ಮತ್ತು ಸಿಪಿಐ ತಲಾ 4 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷಿಸುತ್ತಿದೆ.


from India & World News in Kannada | VK Polls https://ift.tt/3kQOXYk

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...