ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆಯ MiG-29K ವಿಮಾನ ಪತನ, ಓರ್ವ ಪೈಲಟ್‌ ಮಿಸ್ಸಿಂಗ್‌!

ಹೊಸದಿಲ್ಲಿ: ಸೇರಿದ ಮಿಗ್ -29ಕೆ ತರಬೇತುದಾರ ವಿಮಾನ ಗುರುವಾರ ಸಂಜೆ ಪತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅರಬ್ಬಿ ಸಮುದ್ರದಲ್ಲಿ ತರಬೇತುದಾರ ವಿಮಾನ ಪತನವಾಗಿದ್ದು, ಓರ್ವ ಪೈಲಟ್ ಬಚಾವ್ ಆಗಿದ್ದು ಮತ್ತೋರ್ವ ಪೈಲಟ್‌ ನಾಪತ್ತೆಯಾಗಿದ್ದಾನೆ ಎಂದು ಭಾರತೀಯ ನೌಕಾಪಡೆ ಮಾಹಿತಿ ನೀಡಿದೆ. ಅರೇಬಿಯನ್ ಸಮುದ್ರದಲ್ಲಿ ಐಎನ್‌ಎಸ್ ವಿಕ್ರಮಾದಿತ್ಯ ಎಂಬ ವಿಮಾನವಾಹಕ ನೌಕೆಯಿಂದ ಕಾರ್ಯನಿರ್ವಹಿಸುತ್ತಿರುವ ಮಿಗ್ -29 ಕೆ ತರಬೇತುದಾರ ವಿಮಾನವು ವೆಂಬರ್ 26 ರಂದು ಸಂಜೆ 5 ಗಂಟೆಗೆ ಅಪಘಾತಕ್ಕೀಡಾಗಿದ್ದು, ಈ ವೇಳೆ ಇದರಲ್ಲಿ ಒಟ್ಟು ಇಬ್ಬರು ಪೈಲಟ್‌ಗಳಿದ್ದರು ಎಂದು ನೌಕಾಪಡೆ ಮಾಹಿತಿ ನೀಡಿದೆ. ಅಪಘಾತದ ವೇಳೆ ಒಬ್ಬ ಪೈಲಟ್‌ ಕೂಡಲೇ ತನ್ನನ್ನು ತಾನು ರಕ್ಷಿಸಿಕೊಂಡರೆ ಮತ್ತೊರ್ವ ನಾಪತ್ತೆಯಾಗಿದ್ದಾನೆ. ಈತನಿಗಾಗಿ ಇದೀಗ ಶೋಧ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದ್ದಾರೆ. ಘಟನೆ ಸಂಬಂಧ ನೌಕಾಪಡೆ ಅಪಘಾತದ ಕಾರಣವನ್ನು ಕಂಡುಹಿಡಿಯುವ ಉದ್ದೇಶದಿಂದ ಸಂಬಂಧಪಟ್ಟ ಅಧಿಕಾರಿಗಳು ತನಿಖೆಗೆ ಆದೇಶಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮಿಗ್ -29ಕೆ ವಿಮಾನ ಗೋವಾದಲ್ಲಿ ಅಪಘಾತಕ್ಕೀಡಾಗಿತ್ತು, ಹಕ್ಕಿ ಬಂದು ಡಿಕ್ಕಿ ಹೊಡೆದ ಹಿನ್ನೆಲೆ ಅವಘಡ ಸಂಭವಿಸಿತ್ತು. ನೌಕಾಪಡೆ ಮೂಲಗಳ ಪ್ರಕಾರ ಒಟ್ಟು 40 ಮಿಗ್ -29 ವಿಮಾನಗಳು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದೆ.


from India & World News in Kannada | VK Polls https://ift.tt/2V8uX88

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...