ಸಂಭ್ರಮದ ನಡುವಲ್ಲೇ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಭಟನೆಯ ಕಹಳೆ ಮೊಳಗಿದೆ. ಕಲಬುರಗಿ, ಯಾದಗಿರಿ, ಬೀದರ್, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳು ಅಭಿವೃದ್ಧಿಯಿಂದ ವಂಚಿತವಾಗಿವೆ ಎಂದು ಆರೋಪಿಸಿ ನಡೆದಿದೆ. ಪ್ರತ್ಯೇಕ ಹೋರಾಟ ಸಮಿತಿ ಸದಸ್ಯರು ಕಲಬುರಗಿಯಲ್ಲಿ ಈ ಪ್ರತಿಭಟನೆ ನಡೆಸಿದ್ದಾರೆ. ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯಕ್ಕಾಗಿ ಪ್ರತಿಭಟನಾಕಾರರು ಆಗ್ರಹಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡರು. ಅಭಿವೃದ್ಧಿ ವಂಚಿತ ಹೈದರಾಬಾದ್ ಕರ್ನಾಟಕ ಭಾಗಗಳನ್ನೂ ಒಳಗೊಂಡಂತೆ ಇನ್ನಿತರ ಹಿಂದುಳಿದ ಪ್ರದೇಶಗಳನ್ನು ಗುರ್ತಿಸಿ ಸರ್ಕಾರ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿದೆ. ಆದ್ರೆ, ಈ ಭಾಗದಲ್ಲಿ ಅಭಿವೃದ್ಧಿ ಅನ್ನೋದು ನಿಂತ ನೀರಾಗಿದೆ ಎಂಬುದು ಪ್ರತಿಭಟನಾಕಾರರ ಆರೋಪ.
from India & World News in Kannada | VK Polls https://ift.tt/3jUL4jT