KXIP vs CSK IPL Score: ಟಾಸ್‌ ಗೆದ್ದ ಸಿಎಸ್‌ಕೆ ಬೌಲಿಂಗ್‌, ಪಂಜಾಬ್‌ಗೆ ಮಯಾಂಕ್ ಬಲ!

ಅಬುಧಾಬಿ: ಟೂರ್ನಿಯಲ್ಲಿ ನಾಕ್‌ಔಟ್‌ ಹಂತಕ್ಕೇರಲು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿರುವ ಕಿಂಗ್ಸ್‌ ಇಲೆವೆನ್ ಪಂಜಾಬ್‌ ತಂಡಕ್ಕೆ ಇದೀಗ ಎದುರು ಗೆಲ್ಲಲೇ ಬೇಕಾದ ಸಂಕಷ್ಟದ ಸ್ಥಿತಿ ಎದುರಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳನ್ನು ಬಗ್ಗುಬಡಿದು ಅವರ ಪ್ಲೇ ಆಫ್ಸ್‌ ಹಾದಿಗೆ ಕಲ್ಲೆಸೆದಿರುವ ಸಿಎಸ್‌ಕೆ, ಇದೀಗ ಕಿಂಗ್ಸ್‌ ಇಲೆವೆವ್‌ಗೂ ಮುಳ್ಳಾಗುವ ಲೆಕ್ಕಾಚಾರದಲ್ಲಿದೆ. ಈ ನಿಟ್ಟಿನಲ್ಲಿ ಟಾಸ್‌ ಗೆದ್ದ ಎಂಎಸ್‌ ಧೋನಿ ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಪಂಜಾಬ್‌ಗೆ ಮಯಾಂಕ್‌ ಬಲಗಾಯದ ಸಮಸ್ಯೆ ಕಾರಣ ಕಳೆದ ನಾಲ್ಕು ಪಂದ್ಯಗಳಿಂದ ಹೊರಗುಳಿದಿದ್ದ ಮಯಾಂಕ್‌ ಅಗರ್ವಾಲ್ ತಂಡದ ನಿರ್ಣಾಯಕ ಪಂದ್ಯಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಜೊತೆಗೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಬದಲಿಗೆ ಜಿಮ್ಮಿ ನೀಶಮ್‌ ಅವರನ್ನು ಪಂಜಾಬ್ ಆಯ್ಕೆ ಮಾಡಿಕೊಂಡಿದೆ. ಚೆನ್ನೈ ಸೂಪರ್‌ ಕಿಂಗ್ಸ್ ಕೂಡ 3 ಬದಲಾವಣೆ ತಂದಿದ್ದು ಫಾಫ್‌ ಡು'ಪ್ಲೆಸಿಸ್ ಮತ್ತು ಇಮ್ರಾನ್‌ ತಾಹಿರ್‌ ಕಮ್‌ಬ್ಯಾಕ್‌ ಮಾಡಿದ್ದು, ಎನ್‌ ಜಗದೀಶನ್ ಕೂಡ ಸ್ಥಾನ ಪಡೆದಿದ್ದಾರೆ. ಶೇನ್‌ ವಾಟ್ಸನ್, ಮಿಚೆಲ್‌ ಸ್ಯಾಂಟ್ನರ್ ಮತ್ತು ಕರಣ್ ಶರ್ಮಾ ಹೊರಗುಳಿದಿದ್ದಾರೆ. ಇತ್ತಂಡಗಳ ಪ್ಲೇಯಿಂಗ್‌ ಇಲೆವೆನ್ ಚೆನ್ನೈ ಸೂಪರ್ ಕಿಂಗ್ಸ್: ಫಾಫ್ ಡು'ಪ್ಲೆಸಿಸ್, ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಎಂ.ಎಸ್ ಧೋನಿ (ವಿಕೆಟ್‌ಕೀಪರ್‌/ನಾಯಕ), ಎನ್ ಜಗದೀಶನ್, ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಶಾರ್ದುಲ್ ಠಾಕೂರ್, ದೀಪಕ್ ಚಹರ್, ಲುಂಗಿ ಎನ್‌ಜಿಡಿ, ಇಮ್ರಾನ್ ತಾಹಿರ್. ಕಿಂಗ್ಸ್ ಇಲೆವೆನ್ ಪಂಜಾಬ್: ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್/ನಾಯಕ), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಜೇಮ್ಸ್ ನೀಶಮ್, ದೀಪಕ್ ಹೂಡಾ, ಕ್ರಿಸ್ ಜಾರ್ಡನ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ. ತಂಡಗಳ ವಿವರ ಚೆನ್ನೈ ಸೂಪರ್ ಕಿಂಗ್ಸ್: ಶೇನ್ ವಾಟ್ಸನ್, ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ವಿಕೆಟ್‌ಕೀಪರ್‌/ ನಾಯಕ), ಎನ್ ಜಗದೀಶನ್, ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ಕರಣ್ ಶರ್ಮಾ, ಲುಂಗಿ ಎನ್ಗಿಡಿ, ಫ್ಯಾಫ್ ಡು'ಪ್ಲೆಸಿಸ್, ಶಾರ್ದುಲ್ ಠಾಕೂರ್‌, ಜಾಶ್ ಹೇಝಲ್‌ವುಡ್, ಕೇದಾರ ಜಾಧವ್‌, ಇಮ್ರಾನ್‌ ತಾಹಿರ್‌, ಪಿಯೂಷ್‌ ಚಾವ್ಲಾ, ಮುರಳಿ ವಿಜಯ್‌, ಮೋನು ಕುಮಾರ್‌, ಆರ್ ಸಾಯಿ ಕಿಶೋರ್‌, ಕೆ.ಎಂ.ಆಸಿಫ್‌. ಕಿಂಗ್ಸ್ ಇಲೆವೆನ್ ಪಂಜಾಬ್: ಕೆ.ಎಲ್. ರಾಹುಲ್ (ನಾಯಕ/ವಿಕೆಟ್‌ಕೀಪರ್‌), ಮಂದೀಪ್ ಸಿಂಗ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್‌ವೆಲ್, ದೀಪಕ್ ಹೂಡ, ಕ್ರಿಸ್ ಜಾರ್ಡನ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್, ಮಾಯಾಂಕ್ ಅಗರ್‌ವಾಲ್, ಜೇಮ್ಸ್ ನೀಶಮ್, ಕರುನ್ ನಾಯರ್, ಕೃಷ್ಣನಾಲ್ಡ್ ಕಾಟ್ರೆಲ್, ಸರ್ಫರಾಜ್ ಖಾನ್, ಹರ್ದಸ್ ವಿಲ್ಜೋಯೆನ್, ಜಗದೀಶ ಸುಚಿತ್, ಇಶಾನ್ ಪೊರೆಲ್, ಮುಜೀಬ್ ಉರ್ ರೆಹಮಾನ್, ತಾಜಿಂದರ್ ಸಿಂಗ್, ದರ್ಶನ್ ನಲ್ಕಂಡೆ, ಸಿಮ್ರನ್ ಸಿಂಗ್, ಹರ್ಪ್ರೀತ್ ಬ್ರಾರ್.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3oMdpMM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...