ಕೋವಿಡ್‌ 2ನೇ ಅಲೆ ಎದುರಿಸಲು ಸಿದ್ಧತೆ: ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ

ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಕೋವಿಡ್‌ ನಿಯಂತ್ರಣಕ್ಕೆ ಬಂದಿದ್ದರೂ, ದಿಲ್ಲಿ ಮತ್ತಿತರ ರಾಜ್ಯದಲ್ಲಿ ಎದ್ದಿರುವ ಎರಡನೇ ಅಲೆ ತಡೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತಿಳಿಸಿದರು. ನಗರದ ಖಾಸಗಿ ಹೊಟೆಲೊಂದರಲ್ಲಿ ನಡೆದ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂಗಳ ಸಂಘದ (ಫನಾ) ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ''ದಿಲ್ಲಿ ಸೇರಿ ದೇಶದ ವಿವಿಧೆಡೆ ಕೋವಿಡ್‌ ಎರಡನೇ ಅಲೆ ಕಾಣಿಸಿದ್ದು, ಆ ಪರಿಸ್ಥಿತಿ ಬರುವುದು ಬೇಡ,'' ಎಂದರು. 'ಜನವರಿ 30ರಂದು ಕೇರಳದಲ್ಲಿ ಮೊದಲ ಸೋಂಕು ಕಾಣಿಸಿಕೊಂಡಾಗಲೇ ಸಿದ್ಧತೆ ಆರಂಭವಾಗಿತ್ತು. ರಾಜ್ಯದಲ್ಲಿ ನಡೆದ ಉತ್ತಮ ನಿರ್ವಹಣೆಯಲ್ಲಿ ಖಾಸಗಿ ಆಸ್ಪತ್ರೆಗಳ ಸೇವೆ ಬಹಳ ಮಹತ್ವದ್ದಾಗಿದೆ. ಕೋವಿಡ್‌ ಸಂದರ್ಭದಲ್ಲಿ ಸರಕಾರದ ಜೊತೆ ಖಾಸಗಿ ಆಸ್ಪತ್ರೆಗಳ ತಜ್ಞರೊಂದಿಗೆ ಸರಕಾರ ಕಾರ್ಯನಿರ್ವಹಿಸಿದೆ. ಸರಕಾರಿ ಮತ್ತು ಖಾಸಗಿ ತಜ್ಞರನ್ನು ಒಳಗೊಂಡ ಸಮಿತಿ ರಚನೆ ಮೂಲಕ ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಎಲ್ಲರೂ ಕೆಲಸ ಮಾಡಿದ್ದಾರೆ,'' ಎಂದು ಜಾವೇದ್‌ ಅಖ್ತರ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಫನಾ ಅಧ್ಯಕ್ಷ ಡಾ. ಪ್ರಸನ್ನ ,ಕೊರೊನಾ ಮೊದಲನೇ ಅಲೆ ಮುಗಿದಿದೆ ಎನಿಸುತ್ತಿದೆ. ಆದರೆ, ಎರಡನೇ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ಸರಕಾರದ ಜತೆ ಈಗಾಗಲೇ ಸಿದ್ಧತೆ ಕೆಲಸ ಆರಂಭವಾಗಿದೆ. ಸೋಂಕಿತರಿಗೆ ಶೇ.50ರಷ್ಟು ಬೆಡ್‌ ಮತ್ತೆ ಬೇಕು ಎಂದು ಕೋರಿದರೆ ಒದಗಿಸಲು ಸಿದ್ಧರಾಗಿದ್ದೇವೆ, ಎಂದು ಹೇಳಿದರು. ಎರಡನೇ ಅಲೆ ವೇಳೆ ಐಸಿಯು ಬೆಡ್‌ಗಳು ಹೆಚ್ಚು ಬೇಕಾಗುತ್ತವೆ. ದಿಲ್ಲಿ ಮತ್ತು ಮುಂಬೈನಲ್ಲಿ ಆಕ್ಸಿಜನ್‌ ಬೆಡ್‌ಗಳಿಗೆ ಬೇಡಿಕೆ ಕಂಡು ಬಂದಿದೆ. ಹೀಗಾಗಿ, ಈ ಅವಧಿಯಲ್ಲಿ ಹೆಚ್ಚಿನ ಬೆಡ್‌ಗಳಿಗೆ ಆಕ್ಸಿಜನ್‌ ಸಂಪರ್ಕ ಮಾಡಿಟ್ಟುಕೊಳ್ಳಬೇಕು. ಸೋಂಕಿತರಿಗೆ ಚಿಕಿತ್ಸೆ ನೀಡಿರುವ ಖಾಸಗಿ ಆಸ್ಪತ್ರೆಗಳಿಗೆ ಸರಕಾರದಿಂದ ನಿಗದಿತ ಅವಧಿಯಲ್ಲಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. 'ಫನಾ' ಚುನಾಯಿತ ಅಧ್ಯಕ್ಷರಾಗಿ ಡಾ. ಗೋವಿಂದಯ್ಯ ಯತೀಶ್‌, ಉಪಾಧ್ಯಕ್ಷರಾಗಿ ಡಾ. ಶೋಭಾ ಪ್ರಕಾಶ್‌, ಕಾರ್ಯದರ್ಶಿ ಡಾ.ವೈ.ಎಲ್‌ ಪ್ರಕಾಶ್‌, ಜಂಟಿ ಕಾರ್ಯದರ್ಶಿಯಾಗಿ ಡಾ. ಜಿ.ವಿ ದಿವಾಕರ್‌, ಖಜಾಂಚಿಯಾಗಿ ಡಾ. ಎಂ.ಎಲ್‌. ಗಿರಿಧರ್‌ ಪದಗ್ರಹಣ ಮಾಡಿದರು.


from India & World News in Kannada | VK Polls https://ift.tt/3365u3O

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...