ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಹಾಗೂ 35ಎ ರದ್ದು ಮಾಡಿದ ಬಳಿಕ ಇದೇ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಾಡಿದೆ. ಶ್ರೀನಗರದಲ್ಲಿರುವ ರಾಜ್ಯ ಸರ್ಕಾರಿ ಸಚಿವಾಲಯದ ಕಟ್ಟಡದ ಮೇಲೆ ಹಾರಾಡುತ್ತಿದ್ದ ರಾಜ್ಯ ಧ್ವಜವನ್ನು ಕೆಳಗಿಳಿಸಿ, ತಿರಂಗಾ ಹಾರಿಸಲಾಗಿದೆ. ರಾಜ್ಯದಲ್ಲಿ ಅನುಚ್ಛೇದ 370 ಹಾಗೂ 35ಎ ಜಾರಿಯಲ್ಲಿದ್ದ ಕಾರಣ, ರಾಷ್ಟ್ರಧ್ವಜದ ಬದಲು ಜಮ್ಮು-ಕಾಶ್ಮೀರಕ್ಕೆಂದೇ ಪ್ರತ್ಯೇಕವಾಗಿ ರೂಪಿಸಲಾಗಿದ್ದ ರಾಜ್ಯ ಧ್ವಜ ಸರ್ಕಾರಿ ಕಟ್ಟಡಗಳಲ್ಲಿತ್ತು. ಕೆಲವೇ ದಿನಗಳ ಹಿಂದೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಂಡಿರುವ ಹಿನ್ನೆಲೆಯಲ್ಲಿ, ಇಡೀ ದೇಶಕ್ಕೆ ಅನ್ವಯವಾಗುವ ಕಾನೂನುಗಳೇ ಕಣಿವೆ ರಾಜ್ಯಕ್ಕೂ ಅನ್ವಯವಾಗ್ತಿದೆ. ರಾಜ್ಯಧ್ವಜ ಕೂಡಾ ಕಾನೂನಿನ ಮಾನ್ಯತೆ ಕಳೆದುಕೊಂಡಿದೆ. ಇದೀಗ ರಾಷ್ಟ್ರೀಯ ಅಖಂಡತೆಯ ಪ್ರತೀಕವೆಂಬಂತೆ ಕಾಶ್ಮೀರದ ಸರ್ಕಾರಿ ಕಚೇರಿಗಳ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ.
from India & World News in Kannada | VK Polls https://ift.tt/2U3uNNS