ಮುಂಬಯಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಯ್ಕೆಯ ಬೆನ್ನಲ್ಲೇ ಸಹಾಯಕ ಕೋಚ್‌ಗಳ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ. ಇದರಂತೆ ಸ್ಥಾನಕ್ಕೆ ವಿಕ್ರಮ್ ರಾಠೋಡ್ ನೂತನ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಇನ್ನುಳಿದಂತೆ ಬೌಲಿಂಗ್ ಕೋಚ್ ಆಗಿ ಹಾಗೂ ಫೀಲ್ಡಿಂಗ್ ಕೋಚ್ ಆಗಿ ಆರ್. ಶ್ರೀಧರ್ ಅವರನ್ನು ಉಳಿಸಿಕೊಳ್ಳಲಾಗಿದೆ. ಮುಂಬಯಿ ಕೇಂದ್ರ ಕಚೇರಿಯಲ್ಲಿ ಭಾರತೀಯ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯು ಸಹಾಯಕ ಕೋಚ್‌ಗಳ ಹೆಸರುಗಳನ್ನು ಅಂತಿಮಗೊಳಿಸಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ನೇತೃತ್ವದಲ್ಲಿ ಸೋಮವಾರದಿಂದಲೇ ಬ್ಯಾಟಿಂಗ್ ಕೋಚ್‌ಗಾಗಿ 14 ಅಭ್ಯರ್ಥಿಗಳು, ಬೌಲಿಂಗ್ ಕೋಚ್‌ಗಾಗಿ 12 ಅಭ್ಯರ್ಥಿಗಳು ಹಾಗೂ ಫೀಲ್ಡೀಂಗ್ ಕೋಚ್‌ಗಾಗಿ ಒಂಬತ್ತು ಅಭ್ಯರ್ಥಿಗಳನ್ನು ಸಂದರ್ಶನ ಮಾಡಲಾಗಿತ್ತು. ಇದೀಗ ಸಂಜಯ್ ಬಂಗಾರ್‌ರನ್ನು ಹಿಂದಿಕ್ಕಿರುವ ನೂತನ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಇನ್ನೊಂದೆಡೆ ಬೌಲಿಂಗ್ ಕೋಚ್ ಸ್ಪರ್ಧೆಯಲ್ಲಿ ಭರತ್ ಅರುಣ್‌ಗೆ ಕರ್ನಾಟಕದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರಿಂದ ನಿಕಟ ಪೈಪೋಟಿ ಏರ್ಪಟ್ಟಿತ್ತು. ಅದೇ ಹೊತ್ತಿಗೆ ನಿತಿನಿ ಪಟೇಲ್ ಟೀಮ್ ಇಂಡಿಯಾದ ನೂತನ ಫಿಸಿಯೋ ಆಗಿರಲಿದ್ದಾರೆ. ಹಾಗೆಯೇ ಆಡಳಿತಾತ್ಮಕ ವ್ಯವಸ್ಥಾಪಕರಾಗಿ ಗಿರೀಶ್ ಡೊಂಗ್ರೆ ಆಯ್ಕೆಯಾಗಿದ್ದಾರೆ. ವೆಸ್ಟ್‌ಇಂಡೀಸ್ ಸರಣಿಯ ಬಳಿಕ ಸಹಾಯಕ ಕೋಚ್‌ಗಳ ನೇಮಕವಾಗಲಿದೆ. 50ರ ಹರೆಯದ ರಾಥೋಡ್, 2016ರಲ್ಲಿ ಸಂದೀಪ್ ಪಾಟೀಲ್ ಮುಖ್ಯಸ್ಥರಾಗಿದ್ದಾಗ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಕಪಿಲ್ ದೇವ್ ನೇತೃತ್ವದ ತ್ರಿಸದಸ್ಯ ಕ್ರಿಕೆಟ್ ಸಲಹಾ ಸಮಿತಿಯು ರವಿಶಾಸ್ತ್ರಿ ಅವರನ್ನು ಭಾರತದ ಮುಖ್ಯ ಕೋಚ್ ಆಗಿ ಪುನರಾಯ್ಕೆಗೊಳಿಸಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/30su9fi