ಎಂಎಸ್ ಧೋನಿ ನಿವೃತ್ತಿ ಸಲ್ಲಿಸಬೇಕೇ? ಮಾಜಿ ಕಪ್ತಾನ ಸೌರವ್ ಗಂಗೂಲಿ ಏನಂತಾರೆ?

ಹೊಸದಿಲ್ಲಿ: ಏಕದಿನ ವಿಶ್ವಕಪ್ ಬೆನ್ನಲ್ಲೇ ಮಾಜಿ ನಾಯಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಸಲ್ಲಿಸಲಿದ್ದಾರೆ ಎಂಬ ಬಗ್ಗೆ ವರದಿಗಳು ಬಂದಿದ್ದವು. ಇವೆಲ್ಲದರ ನಡುವೆ ಎರಡು ತಿಂಗಳುಗಳ ವಿರಾಮ ಪಡೆದಿರುವ ಮಹೇಂದ್ರ ಸಿಂಗ್ ಧೋನಿ, ಭಾರತೀಯ ಸೇನೆಯಲ್ಲಿ ಕರ್ತವ್ಯ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದರು. ಇದೀಗ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವರೇ ಅಥವಾ ನಿವೃತ್ತಿ ಸಲ್ಲಿಸಲಿದ್ದಾರೆಯೇ ಎಂಬುದು ಸಾಕಷ್ಟು ಚರ್ಚೆಗೀಡಾಗಿದೆ. ಈ ಬಗ್ಗೆ ಮಾಜಿ ನಾಯಕ ತಮ್ಮ ಅಭಿಮತವನ್ನು ಹಂಚಿಕೊಂಡಿದ್ದಾರೆ. ನಿಜ ಹೇಳಬೇಕೆಂದರೆ, ನನಗೆ ಗೊತ್ತಿಲ್ಲ. ಇದು ತಂಡದ ಮ್ಯಾನೇಜ್‌ಮೆಂಟ್ ಯೋಚಿಸುವ ರೀತಿಯಲ್ಲಿ ಅವಲಂಬಿಸಿರುತ್ತದೆ. ನಿಸ್ಸಂಶವಾಗಿಯೂ, ಧೋನಿ ಇನ್ನು ಯುವಕನಲ್ಲ. ಹಾಗಾಗಿ ಪ್ರತಿಯೊಬ್ಬರ ಜೀವನದಲ್ಲೂ ಒಂದು ಅಥವಾ ಇನ್ನೊಂದು ಹಂತದಲ್ಲಿ ಇಂತಹ ನಿರ್ಧಾರವು ಬರುತ್ತದೆ. ಆದ್ದರಿಂದ ಪರಿಸ್ಥಿತಿ ಎಲ್ಲಿಗೆ ಹೋಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವೆಲ್ಲರೂ ಇನ್ನೂ ಮೂರು ಅಥವಾ ನಾಲ್ಕು ತಿಂಗಳುಗಳ ಕಾಲ ಕಾಯಬೇಕು ಎಂದು ದಾದಾ ಖ್ಯಾತಿಯ ಗಂಗೂಲಿ ತಿಳಿಸಿದರು. ನಿಸ್ಸಂಶಯವಾಗಿಯೂ ಯುವ ವಿಕೆಟ್ ಕೀಪರ್ ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ಅಂತಿಮವಾಗಿ ಆಯ್ಕೆಗಾರರ ಮನೋಸ್ಥಿತಿ ಹಾಗೂ ಅವರು ಏನು ಯೋಚಿಸುತ್ತಾರೆ ಎಂಬುದನ್ನು ಅವಲಂಬಿಸಿರುತ್ತದೆ. ಅವರು ಭವಿಷ್ಯವನ್ನು ನೋಡಲು ಬಯಸುತ್ತಾರೆಯೇ? ಇವೆಲ್ಲವನ್ನು ಸಮಯವೇ ಹೇಳಲಿದೆ ಎಂದು ಗಂಗೂಲಿ ಉತ್ತರಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Zc8Z8K

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...