ಎಸ್‌ಪಿಜಿ ಭದ್ರತೆಯಿಂದ ವಂಚಿತರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ಹೊಸದಿಲ್ಲಿ : ಅವರಿಗೆ ಇದ್ದ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದೆ. ಝಡ್ ಪ್ಲಸ್ ಭದ್ರತೆಯನ್ನಷ್ಟೇ ಮುಂದುವರೆಸಲು ಸರ್ಕಾರ ನಿರ್ಧರಿಸಿದೆ. ಸಿಂಗ್ ಅವರಿಗೆ ಇರುವ ರಕ್ಷಣಾ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಯಾರಿಗೆ, ಎಷ್ಟು ನೀಡಬೇಕು ಅನ್ನೋದನ್ನ ಆಯಾ ಸಂಸ್ಥೆಗಳು ವೃತ್ತಿಪರವಾಗಿ ಚರ್ಚಿಸಿ ಕೈಗೊಂಡಿರುವ ನಿರ್ಧಾರ ಇದಾಗಿದೆ. ಕೆಲ ದಿನಗಳ ಹಿಂದಷ್ಟೇ ಆಗಸ್ಟ್ ೨೩ರಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ೬ನೇ ಬಾರಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ೮೬ ವರ್ಷ ವಯಸ್ಸಿನ ಮನಮೋಹನ್ ಸಿಂಗ್ ಅವರಿಗೆ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಪ್ರಮಾಣ ವಚನ ಬೋಧಿಸಿದ್ರು ಈ ಬಾರಿ ಮಾಜಿ ಪ್ರಧಾನಿ ಸಿಂಗ್ ರಾಜಸ್ತಾನದಿಂದ ರಾಜ್ಯಸಭೆಗೆ ಅವಿರೋಧ ಆಯ್ಕೆಯಾಗಿದ್ದಾರೆ. ಸಿಂಗ್ ಅವರ ವಿರುದ್ಧ ರಾಜಸ್ತಾನದಲ್ಲಿ ಬಿಜೆಪಿ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸಿರಲಿಲ್ಲ. ಮೇಲ್ಮನೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸದಸ್ಯತ್ವ ಅವಧಿ ಕಳೆದ ಜೂನ್ ೧೪ರಂದು ಮುಕ್ತಾಯವಾಗಿತ್ತು. ಕಳೆದ 28 ವರ್ಷಗಳಿಂದ ಅವರು ರಾಜ್ಯಸಭಾ ಸದಸ್ಯರಾಗಿ ಅಸ್ಸಾಂನಿಂದ ಆಯ್ಕೆಯಾಗುತ್ತಿದ್ದರು.


from India & World News in Kannada | VK Polls https://ift.tt/33Yqp7r

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...