ಕರ್ನಾಟಕ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತಿ ವೇಗದ ಶತಕ ಸಿಡಿಸಿದ ಕೆ. ಗೌತಮ್

ಬೆಂಗಳೂರು: ಇತಿಹಾಸದಲ್ಲೇ ಅತಿ ವೇಗದ ಶತಕ ಸಿಡಿಸಿದ (39 ಎಸೆತ) ದಾಖಲೆಗೆ ತಂಡದ ಕೃಷ್ಣಪ್ಪ ಗೌತಮ್ ಪಾತ್ರವಾಗಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರುದ್ಧ ನಡೆಯುತ್ತಿರುವ ಮಳೆ ಬಾಧಿತ ಪಂದ್ಯದಲ್ಲಿ ಗೌತಮ್ ಅಕ್ಷರಶ: ಎದುರಾಳಿ ಬೌಲರ್‌ಗಳನ್ನು ಧೂಳೀಪಟಗೈದರು. ಪಂದ್ಯದ ನಡುವೆ ಮಳೆ ಅಡ್ಡಿಯಾಗಿದ್ದರಿಂದ ವಿಜೆಡಿ ನಿಯಮದನ್ವಯ ಓವರ್‌ಗಳ ಸಂಖ್ಯೆಯನ್ನು 17ಕ್ಕೆ ಇಳಿಕೆಗೊಳಿಸಲಾಗಿತ್ತು. ಆದರೆ ಇವೆಲ್ಲವೂ ಗೌತಮ್ ಪಾಲಿಗೆ ಲೆಕ್ಕಕ್ಕೆ ಬರಲಿಲಿಲ್ಲ. ಕ್ರೀಸಿಗಿಳಿದ ಮೊದಲನೇ ಎಸೆತದಿಂದಲೇ ಎದುರಾಳಿ ಬೌಲರ್‌ಗಳನ್ನು ದಂಡಿಸತೊಡಗಿದ ಗೌತಮ್ ತದಾ ಬಳಿಕ ತಿರುಗಿ ನೋಡಲೇ ಇಲ್ಲ. ಅಲ್ಲದೆ ಕೇವಲ 39 ಎಸೆತಗಳಲ್ಲೇ ಶತಕ ಸಾಧನೆ ಮಾಡಿದರು. ಕೆಪಿಎಲ್‌ನಲ್ಲಿ ಗೌತಮ್ ಬರೆದ ಮೂರು ಪ್ರಮುಖ ದಾಖಲೆಗಳು: ಅತಿ ವೇಗದ ಶತಕ: 39 ಎಸೆತ ಅತಿ ಹೆಚ್ಚು ಸಿಕ್ಸರ್: 13 ವೈಯಕ್ತಿಕ ಗರಿಷ್ಠ ಮೊತ್ತ: 134* ಇಲ್ಲಿಗೂ ಗೌತಮ್ ಆರ್ಭಟ ನಿಲ್ಲಲಿಲ್ಲ. ಶತಕದ ಬಳಿಕವೂ ಶಿವಮೊಗ್ಗ ಬೌಲರ್‌ಗಳನ್ನು ದಂಡಿಸುತ್ತಲೇ ಸಾಗಿದರು. ಅಂತಿಮವಾಗಿ ಕೇವಲ 55 ಎಸೆತಗಳಲ್ಲಿ 133 ರನ್‌ ಗಳಿಸಿ ಅಜೇಯರಾಗುಳಿದರು. ಗೌತಮ್ ಸಿಡಿಲಬ್ಬರದ ಬ್ಯಾಟಿಂಗ್‌ನಲ್ಲಿ ಏಳು ಬೌಂಡರಿ ಹಾಗೂ 13 ಸಿಕ್ಸರ್‌ಗಳು ಸೇರಿದ್ದವು. ಇದರಿಂದಾಗಿ ಬಳ್ಳಾರಿ ಟಸ್ಕರ್ಸ್ ತಂಡವು ನ17 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 203 ರನ್‌ಗಳ ಬೃಹತ್ ಮೊತ್ತ ಪೇರಿಸಿತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZgBFgf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...