ವಿದೇಶ ಪ್ರವಾಸ ಮುಂದುವರಿಸಿ, ಮೊಟಕುಗೊಳಿಸಬೇಡಿ: ಮೋದಿಗೆ ಜೇಟ್ಲಿ ಕುಟುಂಬಸ್ಥರ ಮನವಿ

ಹೊಸದಿಲ್ಲಿ: ಕೇಂದ್ರದ ಮಾಜಿ ಸಚಿವ ಅರುಣ್‌ ಜೇಟ್ಲಿ ನಿಧನದಿಂದ ಬಿಜೆಪಿ ಕಂಗೆಟ್ಟಿದೆ. ಅರುಣ್‌ ಜೇಟ್ಲಿ ಸದಾ ಸೇವೆ, ಕರ್ತವ್ಯ, ದೇಶ ಸೇವೆ ಎಂದು ದುಡಿಯುತ್ತಿದ್ದರು. ಅದೇ ರೀತಿ ಕುಟುಂಬ ಸದಸ್ಯರು ಈಗ ದೇಶ ಮೊದಲು ಎನ್ನುವ ತತ್ವವನ್ನೇ ಅನುಸರಿಸುತ್ತಿದ್ದಾರೆ. ಮಾಜಿ ಸಚಿವ ಅರುಣ್‌ ಜೇಟ್ಲಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ವಿದೇಶ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ತವರಿಗೆ ವಾಪಸಾಗುತ್ತಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಇದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿರುವ ಅರುಣ್‌ ಜೇಟ್ಲಿ ಕುಟುಂಬ ಸದಸ್ಯರು, ದೇಶ ಮೊದಲು, ನೀವು ಮೊಟಕುಗೊಳಿಸುವುದು ಬೇಡ. ನಿಮ್ಮ ಕಾರ್ಯಕ್ರಮವನ್ನು ಮುಗಿಸಿಕೊಂಡು ಬನ್ನಿ ಎಂದು ಮನವಿ ಮಾಡಿದ್ದಾರೆ. ಜಿ 7 ಶೃಂಗಸಭೆ ನಿಮಿತ್ತ ಪ್ರಧಾನಿ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಫ್ರಾನ್ಸ್‌ಗೆ ಭೇಟಿ ನೀಡಿದ್ದ ಮೋದಿ ನಂತರ ಯುಎಇ ಮತ್ತು ಬಹರೇನ್‌ಗೆ ಭೇಟಿ ನೀಡುತ್ತಿದ್ದಾರೆ. ಯುಎಇಯಲ್ಲಿ ಮೋದಿಗೆ ಅತ್ಯುನ್ನತ ನಾಗರಿಕ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಹೀಗಾಗಿ ವಿದೇಶ ಪ್ರವಾಸ ಮೊಟಕುಗೊಳಿಸುವುದು ಬೇಡ ಎಂದು ಜೇಟ್ಲಿ ಕುಟುಂಬ ಸದಸ್ಯರು ಮೋದಿಗೆ ಮನವಿ ಮಾಡಿದ್ದಾರೆ. ಅರುಣ್‌ ಜೇಟ್ಲಿ ಅಂತಿಮ ದರ್ಶನ ಪಡೆಯಲು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ತಮ್ಮ ಪ್ರವಾಸ ಮೊಟಕುಗೊಳಿಸಿದ್ದಾರೆ. ಚೆನ್ನೈನಿಂದ ಆಂಧ್ರಪ್ರದೇಶದ ನೆಲ್ಲೂರಿಗೆ ವೆಂಕಯ್ಯನಾಯ್ಡು ತೆರಳಬೇಕಾಗಿತ್ತು. ಆದರೆ ಈಗ ಪ್ರವಾಸ ಮೊಟಕುಗೊಳಿಸಿ ವೆಂಕಯ್ಯನಾಯ್ಡು ನೇರವಾಗಿ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿ ಅರುಣ್ ಜೇಟ್ಲಿ ಅಂತಿಮ ದರ್ಶನ ಪಡೆಯಲಿದ್ದಾರೆ.


from India & World News in Kannada | VK Polls https://ift.tt/2U4UuOf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...