ಲೀಡ್ಸ್: ಪ್ರತಿಷ್ಠಿತ ಟೆಸ್ಟ್ ಸರಣಿಯಲ್ಲಿ ವಿರುದ್ಧ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ 67 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರಿ ಮುಖಭಂಗಕ್ಕೊಳಗಾಗಿದೆ. ಈ ಮೂಲಕ 1948ನೇ ಇಸವಿಯ ಬಳಿಕ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿರುವ ಅವಮಾನಕ್ಕೊಳಗಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಅತಿ ಕನಿಷ್ಠ ಮೊತ್ತವೂ ಆಸ್ಟ್ರೇಲಿಯಾ ವಿರುದ್ಧವೇ ದಾಖಲಾಗಿದೆ. 1887ರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕೇವಲ 45 ರನ್ನಿಗೆ ಆಲೌಟ್ ಆಗಿತ್ತು. ಅಂದ ಹಾಗೆ ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನಿಂದ ದಾಖಲಾದ 12ನೇ ಅತಿ ಕನಿಷ್ಠ ಮೊತ್ತವಾಗಿದೆ. ಜೋಶ್ ಹೇಜಲ್‌ವುಡ್ ದಾಳಿಗೆ (30ಕ್ಕೆ 5 ವಿಕೆಟ್) ಕುಸಿದ ಇಂಗ್ಲೆಂಡ್ 27.5 ಓವರ್‌ಗಳಲ್ಲೇ 67 ರನ್‌ಗಳಿಗೆ ಸರ್ವಪತನವನ್ನು ಕಂಡಿತು. ಇದರೊಂದಿಗೆ ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 112 ರನ್‌ಗಳ ಮಹತ್ವದ ಮುನ್ನಡೆ ದಾಖಲಿಸಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/30qdIQK