ಆಸೀಸ್‌ನ 179 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ಬರಿ 67 ರನ್ನಿಗೆ ಉಡೀಸ್

ಲೀಡ್ಸ್: ಬಲಗೈ ವೇಗಿ ಮಾರಕ ದಾಳಿಗೆ (30ಕ್ಕೆ 5 ವಿಕೆಟ್) ತತ್ತರಿಸಿರುವ ಆತಿಥೇಯ , ಇಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಪ್ರಥಮ ಇನ್ನಿಂಗ್ಸ್‌ನಲ್ಲಿ ಕೇವಲ 67 ರನ್ನಿಗೆ ಆಲೌಟಾಗುವ ಮೂಲಕ ಭಾರಿ ಮುಖಭಂಗಕ್ಕೊಳಗಾಗಿದೆ. ಇದು ಆಸ್ಟ್ರೇಲಿಯಾ ವಿರುದ್ಧ 1948ನೇ ಇಸವಿಯ ಬಳಿಕ ಇಂಗ್ಲೆಂಡ್‌ನಿಂದ ದಾಖಲಾದ ಅತಿ ಕನಿಷ್ಠ ಮೊತ್ತವಾಗಿದೆ. ಈ ಮೊದಲು ಮಳೆ ಬಾಧಿತ ಮೊದಲ ದಿನದಾಟದಲ್ಲಿ ಜೋಫ್ರಾ ಆರ್ಚರ್ ಚೊಚ್ಚಲ ಐದು ವಿಕೆಟ್ ಸಾಧನೆಗೆ (45/6) ತತ್ತರಿಸಿದ ಕಾಂಗರೂ ಪಡೆ ಡೇವಿಡ್ ವಾರ್ನರ್ (61) ಹಾಗೂ ಮಾರ್ನಸ್ ಲ್ಯಾಬುಚಾಗ್ನೆ (74) ಹೋರಾಟದ ಹೊರತಾಗಿಯೂ 179 ರನ್‌ಗಳಿಗೆ ಸರ್ವಪತನವನ್ನು ಕಂಡಿತು. ಇದರಿಂದಾಗಿ ಆಂಗ್ಲರ ಪಡೆ ಇನ್ನಿಂಗ್ಸ್ ಮುನ್ನಡೆ ಗಳಿಸಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಜೋಶ್ ಹೇಜಲ್‌ವುಡ್ ಉರಿ ಚೆಂಡಿನ ದಾಳಿಗೆ ಇಂಗ್ಲೆಂಡ್ ಬಳಿ ಉತ್ತರವೇ ಇರಲಿಲ್ಲ. ಪರಿಣಾಮ ಎರಡನೇ ದಿನದಾಟದಲ್ಲಿ ಕೇವಲ 67 ರನ್‌ಗಳಿಗೆ ಆಲೌಟಾಗಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 112 ರನ್‌ಗಳ ಮಹತ್ವದ ಮುನ್ನಡೆ ಗಳಿಸಿದೆ. ಇಂಗ್ಲೆಂಡ್ ಪರ ಜೋ ಡೆನ್ಲಿ (12) ಹೊರತುಪಡಿಸಿದರೆ ಇತರೆ ಯಾವ ಬ್ಯಾಟ್ಸ್‌ಮನ್ ಕೂಡಾ ಎರಡಂಕಿಯನ್ನು ತಲುಪಲಿಲ್ಲ. ಇಂಗ್ಲೆಂಡ್ ರನ್ ಗಳಿಕೆ ಇಂತಿತ್ತು: 9, 9, 0, 12, 8, 4, 5, 5, 7, 4, 1. ಇನ್ನುಳಿದಂತೆ 3 ರನ್ ಇತರೆ ರೂಪದಲ್ಲಿ ಬಂದಿತ್ತು. 12.5 ಓವರ್‌ಗಳಲ್ಲಿ ಕೇವಲ 30 ರನ್ ತೆತ್ತ ಹೇಜಲ್‌ವುಡ್ ಐದು ವಿಕೆಟ್ ಕಿತ್ತು ಮಿಂಚಿದರು. ಇದರಲ್ಲಿ ಎರಡು ಮೇಡನ್ ಓವರ್‌ಗಳು ಸೇರಿದ್ದವು. ಇವರಿಗೆ ತಕ್ಕ ಸಾಧ್ ನೀಡಿದ ಪ್ಯಾಟ್ ಕಮಿನ್ಸ್ ಮೂರು ಹಾಗೂ ಜೇಮ್ಸ್ ಪ್ಯಾಟಿನ್ಸನ್ ಎರಡು ವಿಕೆಟ್ ಕಿತ್ತು ಮಿಂಚಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2zdvF9k

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...