ತಮಿಳುನಾಡು, ಪುದುಚೇರಿಗೆ NIVAR ಚಂಡಮಾರುತದ ಭೀತಿ: ರೆಡ್‌ ಅಲರ್ಟ್‌, 24 ಗಂಟೆಯಲ್ಲಿ ರಕ್ಕಸ ಬಿರುಗಾಳಿ!

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಿನ್ನೆಲೆ ಹಾಗೂ ಪುದುಚೇರಿಯಲ್ಲಿ ನೀವರ್‌ ಚಂಡಮಾರುತದ ಆತಂಕ ಮನೆ ಮಾಡಿದೆ. ಇದೀಗ ಚಂಡಮಾರುತ ಹಿನ್ನೆಲೆ ಕರಾವಳಿ ತೀರದಲ್ಲಿ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ. ಅಲ್ಲದೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಗಂಟೆಗೆ ನೂರು ವೇಗದಲ್ಲಿ ಬಿರುಗಾಳಿ ತಮಿಳುನಾಡು ಹಾಗೂ ಪುದಚೇರಿಯ ಕಡಲ ತೀರಕ್ಕೆ ಬಂದು ಅಪ್ಪಳಿಸಲಿದೆಯಂತೆ. 24 ಗಂಟೆಯೊಳಗೆ ಇದು ಚಂಡಮಾರುತವಾಗಿ ಬದಲಾಗಿ ಕಡಲತೀರದಲ್ಲಿ ಅಪ್ಪಳಿಸಿ ಭಾರೀ ಪರಿಣಾಮವನ್ನು ಉಂಟು ಮಾಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಚಂಡಮಾರುತದಿಂದಾಗಿ ಎರಡು ದಿನಗಳ ಕಾಲ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಭಾರೀ ಬಿರುಗಾಳಿ ತಮಿಳುನಾಡಿನ ಕರಾವಳಿ ಪ್ರದೇಶದಲ್ಲಿ ಬೀಸಲು ಆರಂಭಿಸಿದೆ. ಹವಾಮಾನ ತಜ್ಞರ ಪ್ರಕಾರ, ನಿವಾರ್ ಚಂಡಮಾರುತವು ಮುಂದಿನ 24 ಗಂಟೆಗಳ ಕಾಲ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ದಾಟಿ ಹೋಗುತ್ತದೆ. ನವೆಂಬರ್ 25ರ ಮಧ್ಯಾಹ್ನದವರೆಗೆ ಈ ಚಂಡಮಾರುತದ ಅಬ್ಬರ ಇರಲಿದೆ ಎಂದು ತಿಳಿಸಿದ್ದಾರೆ. ನವೆಂಬರ್ 25ರಿಂದ ಈ ನಿವಾರ್ ಚಂಡಮಾರುತದಿಂದಾಗಿ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಲಿದ್ದು, ಚೆನ್ನೈ, ನಾಗಪಟ್ನಂ, ತಂಜಾವೂರ್‌, ಪುದುಕೊಟೈ, ತಿರುವಾರೂರು, ರಾಮನಾಥಪುರಂ ಜಿಲ್ಲೆಗಳಲ್ಲಿ ನೀವಾರ್‌ ಚಂಡಮಾರುತರ ಪರಿಣಾಮ ಬೀರಲಿದೆ ಎಂದು ಹಾವಾಮಾನ ಇಲಾಖೆ ತಿಳಿಸಿದೆ. ಇನ್ನು ಹವಾಮಾನ ಇಲಾಖೆ ಎಚ್ಚರಿಕೆ ಬೆನ್ನಲ್ಲೇ ಎನ್‌ಡಿಆರ್‌ಎಫ್‌ ತಂಡ ತಮಿಳುನಾಡಿನ ಕಾರವಾಳಿ ಪ್ರದೇಶಕ್ಕೆ ತೆರಳಿದ್ದು ಐದು ತಂಡಗಳಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಸಮುದ್ರ ತೀರದಲ್ಲಿ ವಾಸಿಸುವ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಿದೆ. ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ.


from India & World News in Kannada | VK Polls https://ift.tt/2J3DC9B

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...