ದೋಣಿಯಲ್ಲಿ 18 ಕಿ.ಮೀ. ಚಲಿಸಿ ಗರ್ಭಿಣಿಯರ ಆರೈಕೆ; ಅಂಗನವಾಡಿ ಕಾರ್ಯಕರ್ತೆಯ ಕಾರ್ಯಕ್ಕೆ ಬಿಗ್‌ ಸೆಲ್ಯೂಟ್‌..!

ನಾಸಿಕ್‌: ತನ್ನ ವೃತ್ತಿಯ ಬಗ್ಗೆ ನಿಷ್ಠೆ, ಗೌರವ ಮತ್ತು ಸಾಮಾಜಿಕ ಬದ್ಧತೆ ಇದ್ದರೆ ಎಂತಹ ಸವಾಲುಗಳನ್ನು ಮೆಟ್ಟಿಯೂ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯ ಎನ್ನುವುದಕ್ಕೆ ಇಲ್ಲೊಬ್ಬರು ಮಹಿಳೆ ಸಾಕ್ಷಿಯಾಗಿದ್ದಾರೆ. ಇವರ ಹೆಸರು ರೇಲು ವಾಸವೆ. ಅಂಗನವಾಡಿ ಕಾರ್ಯಕರ್ತೆಯಾಗಿರುವ ಇವರು ಮಹಾರಾ‍ಷ್ಟ್ರದ ನಂದೂರ್‌ಬಾರ್‌ ಜಿಲ್ಲೆಯ ನಿವಾಸಿ. 27ರ ಹರೆಯದ ಈ ಅಂಗನವಾಡಿ ಕಾರ್ಯಕರ್ತೆಯ ಸಮಾಜಮುಖಿ ಕಾರ್ಯಕ್ಕೆ ಈಗ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ನಂದೂರ್‌ಬಾರ್‌ ಜಿಲ್ಲೆಯ ಚಿಮಲ್‌ಖಡಿ ಗ್ರಾಮ ಇರುವ ಪ್ರದೇಶದಿಂದ ಸುಮಾರು 18 ಕಿಲೋ ಮೀಟರ್‌ ದೂರವಿದೆ. ದೂರದ ಚಿಮಲ್‌ಖಡಿ ಗ್ರಾಮದಲ್ಲಿ ವಾಸವಿರುವ ಬುಡಕಟ್ಟು ಜನಾಂಗದ ಗರ್ಭಿಣಿಯರು ಮತ್ತು ಮಕ್ಕಳ ಆರೈಕೆಗಾಗಿ ಟೊಂಕಕಟ್ಟಿ ನಿಂತ ರೇಲು, ತನ್ನ ಮನೆಯಿಂದ ಒಟ್ಟು ಹದಿನೆಂಟು ಕಿಲೋ ಮೀಟರ್‌ ದೂರದಲ್ಲಿರುವ ಈ ಹಿಂದುಳಿದ ಗ್ರಾಮಕ್ಕೆ ವಾರದಲ್ಲಿ ಐದು ದಿನ ಒಬ್ಬರೇ ದೋಣಿಯಲ್ಲಿ ವಿಹರಿಸಿ ಅವರಿಗೆ ಅಗತ್ಯ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಒದಗಿಸುತ್ತಿದ್ದಾರೆ. ಚಿಮಲ್‌ಖಡಿ ಗ್ರಾಮಕ್ಕೆ ತೆರಳಲು ಯಾವುದೇ ಮಾರ್ಗವಾಗಲಿ,ವಾಹನ ಸೌಕರ್ಯವಾಗಲಿ ಇರಲಿಲ್ಲ. ಹೀಗಾಗಿ ರೇಲು ವಾಸವೆ, ನರ್ಮದಾ ನದಿಯಲ್ಲಿ ಒಬ್ಬರೇ ಹದಿನೆಂಟು ಕಿಲೋಮೀಟರ್‌ ಚಲಿಸಿ ಬುಡಕಟ್ಟು ಸಮುದಾಯದ ಏಳು ಗರ್ಭಿಣಿಯರು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದ 25 ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ. ಇದಕ್ಕಾಗಿ ಅವರು ಸ್ಥಳೀಯ ಮೀನುಗಾರರಿಂದ ಸಣ್ಣ ದೋಣಿಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ. ಕೊರೊನಾ ಕಾಲದಲ್ಲಿ ಈ ಭಾಗಕ್ಕೆ ಯಾವುದೇ ಅಗತ್ಯ ವಸ್ತುಗಳು ಪೂರೈಕೆಯಾಗಿದ್ದಾಗಲೂ, ಲಾಕ್‌ಡೌನ್‌ ಅವಧಿಯಲ್ಲಿಯೂ ಸದ್ದಿಲ್ಲದೆ ತನ್ನ ಕಾರ್ಯವನ್ನು ಮಾಡುತ್ತಿರುವ ರೇಲು ವಾಸವೆ ಇದೀಗ ದೇಶಾದ್ಯಂತ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಇವರ ಸಾಮಾಜಿಕ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


from India & World News in Kannada | VK Polls https://ift.tt/3fm2vcm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...