'ನಾನು ಔಟ್‌ ಆದ ತಕ್ಷಣ ರಕ್ತ ಬಿಸಿಯಾಗುತ್ತಿತ್ತು' : ಪಂದ್ಯದ ಬಳಿಕ ಗಾಯದ ಅನುಭವ ಹಂಚಿಕೊಂಡ ರಸೆಲ್‌!

ದುಬೈ: ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಸ್ಟಾರ್‌ ಆಲ್‌ರೌಂಡರ್ 14 ದಿನಗಳ ಬಳಿಕ "ಗ್ರೇಡ್ 2, ಗ್ರೇಡ್ 3" ಸ್ನಾಯು ಸೆಳೆತದ (ಮಂಡಿರಜ್ಜು) ಗಾಯದಿಂದ ಚೇತರಿಸಿಕೊಂಡು ಮರಳಿದ ನಂತರ ಸಂತೋಷಪಟ್ಟರು ಹಾಗೂ ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ಎಸೆತಗಳಲ್ಲಿ 25 ರನ್ ಸಿಡಿಸಿದರು. ಗಾಯದಿಂದಾಗಿ ಆಂಡ್ರೆ ರಸೆಲ್‌ ಕಳೆದ ನಾಲ್ಕು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಎಂಟು ವಾರಗಳ ಕಾಲ ನನ್ನನ್ನು ಹೊರಗೆ ಇಡುವಂತೆ ಸೂಚಿಸಲಾಗಿತ್ತು. ಆದರೆ ಫಿಜಿಯಾಥೆರಪಿಸ್ಟ್ ಹಾಗೂ ವೈದ್ಯರು ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡಿದರು ಎಂದು ಹೇಳಿದರು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೈದಾನಕ್ಕೆ ಮರಳಿರುವುದರಿಂದ ಉತ್ತಮ ಭಾವನೆ ಉಂಟಾಗುತ್ತಿದೆ. ಚಿಕಿತ್ಸೆ ಪಡೆದ ಎರಡು ವಾರಗಳು ತುಂಬಾ ನೋವಿನಿಂದ ಕೂಡಿತ್ತು. ಆದರೆ, ಅಂಗಳಕ್ಕೆ ಮರಳಿರುವುದಕ್ಕೆ ಖುಷಿಯಾಗುತ್ತಿದೆ. ಎರಡನೇ ದರ್ಜೆಯ ಸ್ನಾಯು ಸೆಳೆತ(ಮಂಡಿರಜ್ಜು) ಗುಣಮುಖವಾಗಲು ಎರಡು ವಾರಗಳ ಅಗತ್ಯವಿದೆ. ಆದರೆ, ಇಷ್ಟು ಬೇಗ ಗುಣಮುಖವಾಗಿರುವುದು ತುಂಬಾ ಸಂತೋಷವಾಗುತ್ತಿದೆ. "ಸ್ಕ್ಯಾನ್ ತುಂಬಾ ಅಸಹ್ಯವಾಗಿತ್ತು. ಕೆಕೆಆರ್ ಫಿಸಿಯೋ ಮತ್ತು ವೈದ್ಯರ ನನ್ನ ಜತೆಗಿದ್ದು ಸಹಾಯ ಮಾಡಿದರು. ಇಂದು(ಭಾನುವಾರ) ರಾತ್ರಿ ಪಂದ್ಯಕ್ಕೂ ಮುನ್ನ ಕೆಲ ಎಸೆತಗಳನ್ನು ಬೌಲಿಂಗ್‌ ಮಾಡಿದೆ ಹಾಗೂ ಉತ್ತಮ ಭಾವನೆ ಉಂಟಾಯಿತು. ಸ್ನಾಯು ಸೆಳೆತ ಉತ್ತಮವಾಗಿದೆ ಎಂದೆನಿಸಿತು ಹಾಗೂ ಗುಣಪಡಿಸುವ ಪ್ರಕ್ರಿಯೆಯನ್ನು ತೊಂದರೆಗೊಳಿಸಲು ನಾನು ಬಯಸುವುದಿಲ್ಲ, " ಎಂದರು. ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರಿಡಾಂಗಣದಲ್ಲಿ ಪ್ಯಾಟ್‌ ಕಮಿನ್ಸ್ ನಾಲ್ಕು ವಿಕೆಟ್‌ಗಳು ಹಾಗೂ ಇಯಾನ್‌ ಮಾರ್ಗನ್‌ ಅವರ 68 ರನ್‌ಗಳ ಸ್ಪೋಟಕ ಇನಿಂಗ್ಸ್‌ ಸಹಾಯದಿಂದ 60 ರನ್‌ಗಳಿಂದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಗೆಲುವು ಪಡೆಯಿತು. "ನಮ್ಮಲ್ಲಿ ಉತ್ತಮ ಬೌಲರ್‌ಗಳಿದ್ದಾರೆ, ಹಾಗಾಗಿ ಬ್ಯಾಕೆಂಡ್‌ನಲ್ಲಿ ಯಾರ್ಕರ್‌ಗಳನ್ನು ಪ್ರಯೋಗ ಮಾಡಿದೆವು. ಆದರೆ, ನಾನು ಇದೇ ಸಮಯದಲ್ಲಿ ಮತ್ತೊಂದು ಪಂದ್ಯವನ್ನು ತೆಗೆದುಕೊಳ್ಳಲಿದ್ದೇನೆ," ಎಂದು ಹೇಳಿದರು. ಆಲ್‌ರೌಂಡರ್‌ ಲಯದಲ್ಲಿ ಇರುವಂತೆಯೇ ಕಂಡರು ಆದರೆ ಪ್ರತಿಯೊಂದು ಎಸೆತವನ್ನು ಬೌಂಡರಿಗೆ ಕಳುಹಿಸುವ ಪ್ರಯತ್ನದಲ್ಲಿ ಬೇಗ ವಿಕೆಟ್‌ ಒಪ್ಪಿಸಿದರು. " ಔಟ್‌ ಆದ ಬಳಿಕ ತ್ವರಿತವಾಗಿ ನನ್ನಲ್ಲಿ ಬೆವರು ಹರಿಯಿತು ಹಾಗೂ ರಕ್ತ ಬಿಸಿಯಾಯಿತು. ಇದೀಗ ನಾವು ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ದೇವರು ಅನುಗ್ರಹ ಅಗತ್ಯವಿದೆ," ಎಂದು ಹೇಳಿದರು. ಈ ಗೆಲುವಿನೊಂದಿಗೆ ಕೋಲ್ಕತಾ ನೈಟ್‌ ರೈಡರ್ಸ್ 14 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ಮತ್ತೊಂದೆಡೆ ಸೋಲು ಅನುಭವಿಸಿದ ಟೂರ್ನಿಯ ಸ್ಪರ್ಧೆಯಿಂದ ಹೊರ ನಡೆಯಿತು. "ಪ್ರತಿಯೊಂದು ಪಂದ್ಯವನ್ನೂ ವೀಕ್ಷಿಸುತ್ತೇನೆ. ಏಕೆಂದರೆ ಒಂದು ಋತುವಿನಲ್ಲಿ ನಾವು ಪ್ರತಿಯೊಂದು ತಂಂಡದ ವಿರುದ್ಧ ಆಡುತ್ತೇವೆ. ಈ ಹಿನ್ನೆಲೆಯಲ್ಲಿ ಬೌಲರ್‌ಗಳು ಹೇಗೆ ಬೌಲಿಂಗ್‌ ಮಾಡುತ್ತಾರೆ ಅಥವಾ ಬ್ಯಾಟ್ಸ್‌ಮನ್‌ ಹೇಗೆ ಬ್ಯಾಟಿಂಗ್‌ ಮಾಡುತ್ತಾರೆ ಎಂಬಿತ್ಯಾದಿ ಅಂಶಗಳನ್ನು ಕಲೆ ಹಾಕಬೇಕಾದ ಅಗತ್ಯವಿರುತ್ತದೆ. ಹಾಗಾಗಿ, ಫೋನ್‌ನಲ್ಲಿಯೇ ಪ್ರತಿಯೊಂದ ಪಂದ್ಯಗಳನ್ನು ನೋಡುತ್ತೇನೆ," ಎಂದು ಆಂಡ್ರೆ ರಸೆಲ್‌ ತಿಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37Z4RMF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...