: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ವತಿಯಿಂದ ನೆಲಮಂಗಲ ಪಟ್ಟಣದ ವಿವಿಧೆಡೆ ಕಾರ್ಯಚರಣೆ ನಡೆಸಿ ಬಾಲ ಕಾರ್ಮಿಕರಾಗಿ ದುಡಿಯತ್ತಿದ್ದ ಐವರ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ವಿಜಯ ಕರ್ನಾಟಕದಲ್ಲಿ ನ. 2 ರಂದು ವಿದ್ಯಾರ್ಥಿಗಳಿಗೆ ಕೂಲಿ ಕೆಲಸ, ಶಾಲೆ ಮರೆಯುವ ಆತಂಕ ಶೀಷಿಕೆಯಡಿ ಕೂಲಿ ಮಾಡುವ ಬಗ್ಗೆ ವರದಿ ಪ್ರಕಟಿಸಿ ಜಿಲ್ಲಾಡಳಿತದ ಗಮನ ಸೆಳೆಯಲಾಗಿತ್ತು. ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ನ.2 ಮತ್ತು ನ.3 ರಂದು ಅಖಾಡಕ್ಕೀಳಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಕಾರ್ಮಿಕ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿಯಾಗಿ ನೆಲಮಂಗಲದ ವಿವಿಧೆಡೆ ದಾಳಿ ನಡೆಸಿದ್ದಾರೆ. ನೆಲಮಂಗಲ ಪಟ್ಟಣದ ಗ್ಯಾರೇಜ್,ಬೇಕರಿ, ಹೂವಿನ ಅಂಗಡಿ, ಹಣ್ಣು ಮತ್ತು ತರಕಾರಿ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಕಾರ್ಯಚರಣೆ ವೇಳೆ ಐವರು ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ನೆಲಮಂಗಲದಲ್ಲಿ ನಡೆದ ಈ ಕಾರ್ಯಚರಣೆ ವೇಳೆ 14 ವರ್ಷಕ್ಕಿಂತ ಕಡಿಮೆ ಇರುವ 5 ಬಾಲ ಹಾಗೂ ಕಿಶೋರಿ ಕಾರ್ಮಿಕರನ್ನು ರಕ್ಷಿಸಿ ನೆಲಮಂಗಲದ ಸಂದೀಪ್ ಸೇವಾ ನಿಲಯಂ, ಸಂಸ್ಥೆಯ ಬಾಲ ಕಾರ್ಮಿಕರ ವಿಶೇಷ ತರಬೇತಿ ಕೇಂದ್ರದಲ್ಲಿ ತಾತ್ಕಾಲಿಕ ಪುನರ್ವಸತಿಯನ್ನು ಕಲ್ಪಿಸಲಾಗಿದೆ. ಮಕ್ಕಳ ವೈದ್ಯಕೀಯ ತಪಸಣೆಯನ್ನು ನಡೆಸಿ ಶುಕ್ರವಾರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಸದರಿ ಮಕ್ಕಳನ್ನು ದುಡಿಮೆ ನೇಮಕ ಮಾಡಿಕೊಂಡ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸುಬ್ಬಾರಾವ್ ತಿಳಿಸಿದ್ದಾರೆ. ಕಾರ್ಯಚರಣೆ ವೇಳೆ ರಸ್ತೆಯಲ್ಲಿಇಬ್ಬರು ಮಕ್ಕಳು ಕರಪತ್ರಗಳನ್ನು ವಿತರಿಸುತ್ತಿರುವುದನ್ನು ಗಮನಿಸಿ ಸದರಿ ಮಕ್ಕಳ ಪೋಷಕರನ್ನು ಕರೆಯಿಸಿದ ಅಧಿಕಾರಿಗಳು ಮಕ್ಕಳನ್ನು ಕರ ಪತ್ರ ವಿತರಣೆ ಮಾಡಲು ಕಳುಹಿಸಬಾರದು ಎಂದು ತಿಳುವಳಿಕೆ ನೀಡಿ ಅವರನ್ನು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ. ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು ಇಂಥ ಪ್ರಕರಣಗಳು ಕಂಡು ಬಂದರೇ 6 ತಿಂಗಳಿಂದ 2 ವರ್ಷ ಜೈಲು ಶಿಕ್ಷೆ, 20 ಸಾವಿರದಿಂದ 50 ಸಾವಿರದವರಿಗೂ ದಂಡ ವಿಧಿಸಲು ಅವಕಾಶವಿದೆ ಎಂದು ಕಾರ್ಮಿಕ ನಿರೀಕ್ಷಕರಾದ ನಾಗರತ್ನ ಅಂಗಡಿ ಮಾಲೀಕರಿಗೆ ತಿಳಿಸಿ ಕಂಡು ಬಂದರೇ 1098 ತಿಳಿಸುವಂತೆ ಮನವಿ ಮಾಡಿದರು ಕಾರ್ಯಚರಣೆ ಸಮಯದಲ್ಲಿ ಜಿಲ್ಲಾಬಾಲ ಕಾರ್ಮಿಕ ಯೋಜನಾ ಸೊಸೈಟಿ ನಿರ್ದೇಶಕ ಸುಬ್ಬಾರಾವ್,ಮಹಿಳಾ ಮತ್ತು ಮಕ್ಕಳ ಶಿಶು ಯೋಜನಾಭಿವೃದ್ದಿ ಅಧಿಕಾರಿ ಲತಾ, ಮೇಲ್ವಚಾರಕಿಪುಷ್ಪ, ಪೊಲೀಸ್ ಇಲಾಖೆ ಮಹಾದೇವಯ್ಯ, ರತ್ನಮ್ಮ, ನರಸಿಂಹಮೂರ್ತಿ, ಮುರಳಿ, ನಟರಾಜ್, ಮಕ್ಕಳ ಸಹಾಯವಾಣಿ ಜಿಲ್ಲಾ ಕೇಂದ್ರದ ಸಂಯೋಜಕ ಮಂಜುನಾಥ್, ಹರೀಶ್, ದಿನೇಶ್, ಜಿಲ್ಲಾಮಕ್ಕಳ ರಕ್ಷಣಾ ಘಟಕದ ಶಿವಪ್ಪ, ಸಂದೀಪ್ ಸೇವಾ ನಿಲಯಂ ಸಂಶ್ಥೆಯ ಸಂಯೋಜಕಿ ರೇಣುಕಾ ಹಾಜರಿದ್ದರು. ಇದೇ ಸಂದರ್ಭದಲ್ಲಿ ಅಂಗಡಿ ಮಾಲೀಕರಿಗೆ ಬಾಲ ಕಾರ್ಮಿಕ ಕಾನೂನು ಬಗ್ಗೆ ಅರಿವು ಮೂಡಿಸಲಾಯಿತು.
from India & World News in Kannada | VK Polls https://ift.tt/2TNJfKS