ಪೇದೆಗಳ ಪರೀಕ್ಷಾ ಅಕ್ರಮ, ಸಮಗ್ರ ತನಿಖೆಗೆ ಆದೇಶ: ನಕಲು ಆರೋಪಿಗಳಿಗೆ ಆಜೀವ ನಿಷೇಧ!

ಬೆಂಗಳೂರು: ಪೇದೆಗಳ ನೇಮಕ ಅಕ್ರಮದಲ್ಲಿ ಭಾಗಿಯಾದ ಎಲ್ಲ ಅಭ್ಯರ್ಥಿಗಳ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸಿ, ನೇಮಕ ಪ್ರಕ್ರಿಯೆಯಿಂದ ಆಜೀವ ನಿಷೇಧಕ್ಕೆ ಒಳಪಡಿಸಲಾಗುತ್ತದೆ ಎಂದು ಪೊಲೀಸ್‌ ನೇಮಕಾತಿ ಘಟಕದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಅಮೃತ್‌ ಪಾಲ್‌ ತಿಳಿಸಿದರು. ''ಕರ್ನಾಟಕ ಮೀಸಲು ಪೊಲೀಸ್‌ () ಮತ್ತು ಇಂಡಿಯನ್‌ ರಿಸರ್ವ್ ಬೆಟಾಲಿಯನ್‌ಯಲ್ಲಿ() 2,660 ಹುದ್ದೆಗಳಿಗೆ ಭಾನುವಾರ (ನ.22) ನಡೆದ ಪರೀಕ್ಷೆ ವೇಳೆ ಒಟ್ಟು 13 ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನಲ್ಲಿ ಏಳು, ಹುಬ್ಬಳ್ಳಿ ಧಾರವಾಡ 1, ಬಾಗಲಕೋಟೆ 1, ಬೆಳಗಾವಿ 1, ಬೆಳಗಾವಿ ನಗರ 2, ಚಿತ್ರದುರ್ಗದಲ್ಲಿ 1 ಕೇಸ್‌ ಸೇರಿ ಒಟ್ಟು 12 ಅಭ್ಯರ್ಥಿಗಳು ಅಥವಾ ಅಭ್ಯರ್ಥಿಗಳ ಪರವಾಗಿ ಮತ್ತೊಬ್ಬರು ಪರೀಕ್ಷೆ ಬರೆದಿರುವ ಕುರಿತು ಮಾಹಿತಿ ಬಂದಿವೆ,''ಎಂದರು. ಇನ್ನೂ ಹಲವರು ಅಕ್ರಮ ಪರೀಕ್ಷೆ ಬರೆದಿರಬಹುದೇ? ಪ್ರಾಥಮಿಕ ಮಾಹಿತಿ ಪ್ರಕಾರ, ಅಕ್ರಮವಾಗಿ ಪರೀಕ್ಷೆ ಬರೆದ 13 ಮಂದಿ ಸಿಕ್ಕಿ ಬಿದ್ದಿದ್ದಾರೆ. ಅದರಲ್ಲಿ ಬೆಂಗಳೂರಿನ ದಕ್ಷಿಣ ವಿಭಾಗದಲ್ಲಿ ಇಬ್ಬರು ಪರೀಕ್ಷೆ ಬರೆದು ಅದಾಗಲೇ ಪರೀಕ್ಷಾ ಕೇಂದ್ರದಿಂದ ಹೊರಗೆ ಹೋಗಿದ್ದರು. ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ಬಂಧಿತರಾದ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಇಬ್ಬರನ್ನು ಬಂಧಿಸಲಾಗಿದೆ. ಈ ರೀತಿ ಇನ್ನೂ ಎಷ್ಟು ಮಂದಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದಾರೋ ಎಂಬ ಅನುಮಾನ ಕಾಡುತ್ತಿದೆ. ಅಕ್ರಮವಾಗಿ ಪರೀಕ್ಷೆ ಬರೆದಿರುವುದನ್ನು ತಳ್ಳಿ ಹಾಕುವಂತಿಲ್ಲ. ಈ ಕುರಿತು ಸಮಗ್ರ ತನಿಖೆಯಾಗಬೇಕೆಂಬ ಒತ್ತಾಯ ಕೇಳಿ ಬಂದಿದೆ. ಸಮಗ್ರ ತನಿಖೆ, ಪ್ರಕ್ರಿಯೆಗೆ ಅಡ್ಡಿ ಇಲ್ಲ' ಒಂದೆರಡು ಪ್ರಕರಣಗಳಲ್ಲಿ ಬ್ಲೂಟೂತ್‌ ಬಳಸಿರುವುದು ಕಂಡು ಬಂದಿದೆ. ಪರೀಕ್ಷೆಯಲ್ಲಿ ಅಕ್ರಮ ನಡೆಸಿದವರನ್ನು ಈಗಾಗಲೇ ಬಂಧಿಸಲಾಗಿದೆ. ಜಾಲವೇ ಕೆಲಸ ಮಾಡಿದ ಶಂಕೆ ಇದ್ದು, ಸಮಗ್ರ ತನಿಖೆಗೂ ಆದೇಶ ನೀಡಲಾಗಿದೆ. ಉಳಿದಂತೆ ಇತರರ ಪರೀಕ್ಷಾ ಫಲಿತಾಂಶವನ್ನು ಎಂದಿನಂತೆ ಬಿಡುಗಡೆ ಮಾಡಲಾಗುತ್ತದೆ. ನೇಮಕ ಪ್ರಕ್ರಿಯೆ ಮುಂದುವರೆಯಲಿದೆ,'' ಎಂದು ಎಡಿಜಿಪಿ ಅಮೃತ್‌ ಪಾಲ್‌ ತಿಳಿಸಿದರು.


from India & World News in Kannada | VK Polls https://ift.tt/3fqishL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...