ಅಡ್ಕಬಾರೆಯಲ್ಲಿ ಮೊಬೈಲ್‌ ಟವರ್‌ ನಿರ್ಮಿಸದಂತೆ ನ್ಯಾಯಾಲಯ ಮಧ್ಯಂತರ ಆದೇಶ

ಮಂಗಳೂರು: ತಾಲೂಕಿನ ಪಡು ಪೆರಾರ ಗ್ರಾಮದ ಎಂಬ ವಸತಿ ಪ್ರದೇಶದಲ್ಲಿ ಮೊಬೈಲ್‌ ಟವರ್‌ ನಿರ್ಮಿಸದಂತೆ ಮಂಗಳೂರಿನ ಒಂದನೇ ಹೆಚ್ಚುವರಿ ಸಿವಿಲ್‌ ಮಧ್ಯಂತರ ನಿರ್ಬಂಧಕಾಜ್ಞೆಯನ್ನು ಹೊರಡಿಸಿದೆ. ಪಡು ಪೆರಾರ, ಅಡ್ಕಬಾರೆ ಎಂಬಲ್ಲಿಯ ಸಾರ್ವಜನಿಕರು ಈ ಪ್ರದೇಶದಲ್ಲಿ ಮೊಬೈಲ್‌ ಟವರನ್ನು ನಿರ್ಮಿಸಬಾರದು ಎಂದು ಜಿಲ್ಲಾಧಿಕಾರಿಯವರಿಗೆ ಹಾಗೂ ಸಂಬಂಧಪಟ್ಟ ಇತರ ಇಲಾಖೆಗಳಿಗೆ ಸಾರ್ವಜನಿಕ ಮನವಿ ಸಲ್ಲಿಸಿದ್ದರು. ಆದರೆ, ಸಾರ್ವಜನಿಕರ ವಿರೋಧದ ನಡುವೆಯೂ ಅಡ್ಕಬಾರೆಯಲ್ಲಿ ಮೊಬೈಲ್‌ ಟವರ್‌ ನಿರ್ಮಿಸುವ ಯತ್ನ ನಡೆಯುತ್ತಿತ್ತು. ಇದರಿಂದ ಆಕ್ರೋಶಗೊಂಡ ಪಡು ಪೆರಾರ ಗ್ರಾಮದ ಸಾರ್ವಜನಿಕರ ಪೈಕಿ ಹೇಮಚಂದ್ರ ಶೆಟ್ಟಿ, ಫೆಲಿಕ್ಸ್‌ ಓಸ್ವಾಲ್ಡ್‌ ಲೋಬೋ, ಕ್ಯಾಲಿಟಸ್‌ ವೇಗಸ್‌ ಮತ್ತು ಜೋಸೆಫಿನ್‌ ಲೋಬೋರವರು ಮಂಗಳೂರಿನ ನ್ಯಾಯವಾದಿ ಮಯೂರ ಕೀರ್ತಿಯವರ ಮುಖಾಂತರ ಮಂಗಳೂರಿನ ನ್ಯಾಯಾಲಯದಲ್ಲಿ ವ್ಯಾಜ್ಯ ದಾಖಲಿಸಿದ್ದರು. ನ್ಯಾಯಾಲಯದಲ್ಲಿ, ಸ್ಥಳೀಯ ಪಂಚಾಯತ್‌ನಿಂದ ಯಾವುದೇ ಅನುಮತಿ ಪಡೆದುಕೊಳ್ಳದೆ ಹಾಗೂ ಸಾರ್ವಜನಿಕರ ವಿರೋಧದ ನಡುವೆಯೂ ಟವರ್‌ ನಿರ್ಮಿಸಲು ಯತ್ನಿಸುತ್ತಿರುವುದು ಕಾನೂನು ಬಾಹಿರ ಚಟುವಟಿಕೆಯಾಗಿದ್ದು, ಇದು ಪಂಚಾಯತ್‌ ರಾಜ್‌ ಕಾಯ್ದೆಯ ಹಾಗೂ ಮಾನ್ಯ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯವು ಈಗಾಗಲೇ ನೀಡಿರುವ ತೀರ್ಪುಗಳಿಗೆ ವಿರುದ್ಧವಾಗಿದೆ. ಅಲ್ಲದೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿ ಹಾಗೂ ಮೊಬೈಲ್‌ ಟವರ್‌ ಗಳಿಂದ ಹೊರಹೊಮ್ಮುವ ಕಿರಣಗಳಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಉಂಟಾಗುವ ಸಂಭವನೀಯತೆ ಇದೆ. ಈಗಾಗಲೇ ಈ ಪ್ರದೇಶದಲ್ಲಿ ಎರಡು ಮೊಬೈಲ್‌ ಟವರ್‌ಗಳು ಕಾರ್ಯಾಚರಿಸುತ್ತಿದ್ದು, ಇನ್ನೊಂದು ಟವರನ್ನು ನಿರ್ಮಿಸಿದಲ್ಲಿ ಸಾರ್ವಜನಿಕರಲ್ಲಿ, ಹಿರಿಯ ನಾಗರಿಕರಲ್ಲಿ ಹಾಗೂ ಮಕ್ಕಳಲ್ಲಿ ಆರೋಗ್ಯದ ಸಮಸ್ಯೆ ಉಂಟಾಗುವ ಸಂಭವನೀಯತೆ ಜಾಸ್ತಿ ಇದೆ ಎಂದು ಮನಗಂಡು, ಅಕ್ರಮವಾಗಿ ನಿರ್ಮಿಸಲು ಯತ್ನಿಸುತ್ತಿರುವ ಮೊಬೈಲ್‌ ಟವರ್‌ ಕಾಮಗಾರಿಗೆ ನಿರ್ಬಂಧಕಾಜ್ಞೆ ಹೊರಡಿಸಬೇಕೆಂದು ವಾದಿಸಲಾಗಿತ್ತು. ವಾದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಮಾನ್ಯ ನ್ಯಾಯಾಲಯವು ಮೊಬೈಲ್‌ ಟವರ್‌ ನಿರ್ಮಿಸದಂತೆ ಮಧ್ಯಂತರ ನಿರ್ಬಂಧಕಾಜ್ಞೆಯನ್ನು ಹೊರಡಿಸಿರುತ್ತದೆ.


from India & World News in Kannada | VK Polls https://ift.tt/33elY9X

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...