ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಮತದಾನ ಮಾಡಿದ ಮತದಾರರ ಎಡಗೈ ಮಧ್ಯದ ಬೆರಳಿಗೆ ಶಾಯಿ ಹಾಕಿದ್ದು ನೀವೂ ಗಮನಿಸಿರಬಹುದು. ಸಾಮಾನ್ಯವಾಗಿ ಚುನಾವಣೆಯಲ್ಲಿ ಮತದಾನ ಮಾಡಿದ ಸಂದರ್ಭದಲ್ಲಿ ಬಲಗೈ ತೋಳು ಬೆರಳು ಆಥವಾ ಮಧ್ಯ ಬೆರಳಿಗೆ ಶಾಯಿ ಹಾಕುತ್ತಾರೆ. ಆದರೆ , ಶಿರಾ ಉಪಚುನಾವಣೆಯಲ್ಲಿ ಎಡಗೈ ಬೆರಳಿಗೆ ಏಕೆ ಶಾಯಿ ಹಾಕಿದ್ದಾರೆ ಎಂಬ ಕುತೂಹಲ ನಿಮಗೂ ಕಾಡಿರಬಹುದು. ಇದಕ್ಕೆ ಕೆಲವೊಂದು ಕಾರಣಗಳು ಇವೆ. ಸಾರ್ವತ್ರಿಕ ಚುನಾವಣೆ ಅಥವಾ ಉಪಚುನಾವಣೆಯ ಕೆಲ ದಿನಗಳ ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆ ಅಥವಾ ಪರಿಷತ್ ಚುನಾವಣೆ ನಡೆದರೆ ಮತದಾನ ಮಾಡಿದ ಮತದಾರರಿಗೆ ಗುರುತಿನ ಶಾಯಿ ಹಾಕಲಾಗುತ್ತದೆ. ಇಲ್ಲೂ ಇದೇ ನಡೆದಿದೆ. ಕೆಲ ದಿನಗಳ ಹಿಂದೆಯಷ್ಟೇ ಅಂದರೆ ಅಕ್ಟೋಬರ್ 28 ರಂದು ವಿಧಾನಪರಿಷತ್ ಆಗ್ನೇಯ ಪದವೀಧರ, ಪಶ್ಚಿಮ ಪದವೀಧರ, ಈಶಾನ್ಯ ಶಿಕ್ಷಕರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಮತದಾನ ನಡೆದಿತ್ತು. ಈ ವೇಳೆ ಮತದಾರರಿಗೆ ಬಲಗೈಗೆ ಶಾಯಿ ಗುರುತು ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಉಪಚುನಾವಣೆ ಹಾಗೂ ಶಿರಾ ಉಪಚುನಾವಣೆಯಲ್ಲಿ ಎಗಡೈ ಮಧ್ಯದ ಬೆರಳಿಗೆ ಶಾಯಿ ಹಾಕಲಾಗಿದೆ.
from India & World News in Kannada | VK Polls https://ift.tt/327yFCK